ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಚಿವರ ಪತ್ರಕ್ಕೂ ಇಲ್ಲ ಮನ್ನಣೆ; ವಿಧವೆ ಬದುಕು ಕಿತ್ತುಕೊಂಡ ಆದೇಶ

By ಚಿತ್ರದುರ್ಗ ಪ್ರತಿನಿಧಿ
|
Google Oneindia Kannada News

ಚಿತ್ರದುರ್ಗ, ಮೇ 16; ಹದಿಮೂರು ವರ್ಷದಿಂದ ಗ್ರಂಥಪಾಲಕನಾಗಿ ಕರ್ತರ್ವ್ಯ ನಿರ್ವಹಿಸುತ್ತಿದ್ದ ವ್ಯಕ್ತಿ ಆಕಸ್ಮಿಕವಾಗಿ ನಿಧನ ಹೊಂದಿದ್ದರಿಂದ ಆತನ ಪತ್ನಿಗೆ ಆ ಹುದ್ದೆಯನ್ನು ನೀಡಲಾಗಿತ್ತು. ಆದರೆ ಒಂಬತ್ತು ತಿಂಗಳ ನಂತರ ಅದನ್ನು ಕಿತ್ತುಕೊಳ್ಳುವ ಮೂಲಕ ವಿಧವೆಯೊಬ್ಬಳ ಬದುಕು ಬೀದಿಗೆ ಬೀಳುವಂತೆ ಆಡಳಿತ ವ್ಯವಸ್ಥೆ ಮಾಡಿದೆ.

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಗೌಡನಹಳ್ಳಿ ಗ್ರಾಮದಲ್ಲಿ ಬಿ. ಬಸವರಾಜ್ ಎಂಬ ವ್ಯಕ್ತಿ 2007ರಿಂದ ಗ್ರಂಥಪಾಲಕನಾಗಿ ಕೆಲಸ ನಿರ್ವಹಿಸುತ್ತಿದ್ದರು. 2020 ಮಾರ್ಚ್ 14 ರಂದು ಅವರು ಆಕಸ್ಮಿಕವಾಗಿ ಮರಣ ಹೊಂದಿದರು. ಸದರಿ ಹುದ್ದೆಯನ್ನು ಮೃತನ ಪತ್ನಿ ಲೀಲಾವತಿ ಮುಂದುವರಿಸಿಕೊಂಡು ಹೋಗುವಂತೆ ಅಂದಿನ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ತಿಳಿಸಿದ್ದರಿಂದ ಒಂಬತ್ತು ತಿಂಗಳು ಹಾಜರಾತಿ ಪುಸ್ತಕಕ್ಕೆ ಸಹಿ ಹಾಕಿ, ಮಾಸಿಕ 7 ಸಾವಿರ ರೂಪಾಯಿಂತೆ ಒಟ್ಟು 63 ವೇತನದಲ್ಲಿ 21 ಸಾವಿರ ವೇತನ ಪಡೆದಿದ್ದಾರೆ.

ಸರ್ಕಾರಿ ಉದ್ಯೋಗ ಹುಡುಕುತ್ತಿರುವವರಿಗೆ ಸಿಹಿ ಸುದ್ದಿ ಸರ್ಕಾರಿ ಉದ್ಯೋಗ ಹುಡುಕುತ್ತಿರುವವರಿಗೆ ಸಿಹಿ ಸುದ್ದಿ

ಈಗ ಇದ್ದಕ್ಕಿದ್ದಂತೆ ಗ್ರಂಥಪಾಲಕ ಹುದ್ದೆಗೆ ಬೇರೆಯವರನ್ನು ನೇಮಿಸುವ ಪ್ರಯತ್ನ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, 6 ವರ್ಷದ ಮಗು ಇರುವ ವಿಧವೆಯ ಜೀವನದ ಸಂಕಷ್ಟಕ್ಕೆ ಸಿಲುಕಿದೆ. ಸಂಬಂಧಪಟ್ಟ ಅಧಿಕಾರಿಗಳು ವಿಧವೆಗೆ ನ್ಯಾಯ ದೊರಕಿಸಿ ಕೊಡುತ್ತಾರಾಯೇ? ಎಂದು ಕಾದು ನೋಡಬೇಕಿದೆ.

ಮಂಗಳೂರು; ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ ಮಂಗಳೂರು; ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

Widow Women Lost Librarian Post At Hiriyur

"ಸರ್ ನಾನು ಬಿಕಾಂ ಪದವೀಧರೆ. ಅನುಕಂಪದ ಆಧಾರದ ಮೇಲೆ ಗ್ರಂಥಪಾಲಕ ಹುದ್ದೆ ನೀಡುವಂತೆ ಗ್ರಾಮೀಣಾಭಿವೃದ್ಧಿ ಸಚಿವ ಕೆ. ಎಸ್. ಈಶ್ವರಪ್ಪ ಹಾಗೂ ಶಾಸಕಿ ಕೆ. ಪೂರ್ಣಿಮಾ ಶ್ರೀನಿವಾಸ್ ಅವರು ಶಿಫಾರಸು ಪತ್ರ ನೀಡಿದ್ದರು. ಒಂಬತ್ತು ತಿಂಗಳು ಗ್ರಂಥಪಾಲಕಿಯಾಗಿ ಕಪ್ಪುಚುಕ್ಕೆ ಬರದಂತೆ ಕೆಲಸ ಮಾಡಿದ್ದೆನೆ" ಎಂದು ಲೀಲಾವತಿ ಹೇಳಿದ್ದಾರೆ.

ಬೆಳೆ ವಿಮಾ ಯೋಜನೆಯಡಿ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ ಬೆಳೆ ವಿಮಾ ಯೋಜನೆಯಡಿ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

"ನನಗೆ ಯಾವುದೇ ಮಾಹಿತಿ ನೀಡದೆ, ಈಗ ನನ್ನನ್ನು ಸದರಿ ಹುದ್ದೆಯಿಂದ ತೆಗೆದು ಹಾಕಲಾಗಿದೆ. ಸಂಬಂಧಪಟ್ಟ ಅಧಿಕಾರಿಗಳನ್ನು ಭೇಟಿ ಮಾಡಿದರೆ ಗ್ರಂಥಪಾಲಕ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದಾರೆ. ಬೇಕಿದ್ದರೆ ನೀನು ಅರ್ಜಿ ಹಾಕಿ ಎಂದು ಉಡಾಫೆ ಉತ್ತರ ಕೊಡುತ್ತಾರೆ. ಈಗಿನ ಅಳುವ ವರ್ಗದ ವ್ಯವಸ್ಥೆಯಲ್ಲಿ ನನಗೆ ಮತ್ತೆ ಈ ಹುದ್ದೆ ಸಿಗುತ್ತದೆ ಎಂಬುದರ ಬಗ್ಗೆ ಖಾತರಿ ಇಲ್ಲ" ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

Recommended Video

Tauktae ಚಂಡಮಾರುತದ ರಕ್ಕಸ ಅವತಾರ ನೋಡಿ | Oneindia Kannada

"ನನಗೆ ಸ್ವಂತ ಮನೆಯಿಲ್ಲ, ಹೊಲ ಕೂಡ ಇಲ್ಲ ಕೈಯಲ್ಲಿ ಇದ್ದ ಹುದ್ದೆಯನ್ನು ಕಿತ್ತುಕೊಂಡಿದ್ದು, ಚಿಕ್ಕ ಮಗುವಿನೊಂದಿಗೆ ನಾನು ಹೇಗೆ ಜೀವನ ನಿರ್ವಹಿಸಬೇಕು?. ಅನುಕಂಪದ ಆಧಾರದ ಮೇಲೆ ಗ್ರಂಥಪಾಲಕ ಹುದ್ದೆಯಲ್ಲಿ ನಾನು ಮುಂದುವರಿಯಲು ನ್ಯಾಯ ಕೊಡಿಸಿ" ಎಂದು ಮಹಿಳೆ ಒನ್ ಇಂಡಿಯಾ ಕನ್ನಡದ ಜೊತೆ ಜೊತೆ ದೂರವಾಣಿ ಮೂಲಕ ತನ್ನ ಅಳಲನ್ನು ತೋಡಿಕೊಂಡಿದ್ದಾರೆ.

English summary
Lilavathi working as librarian at Chitradurga district Hiriyur taluk Gowdanahalli village after her husband death. Now new librarian appointed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X