ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಾಣಿವಿಲಾಸ ಜಲಾಶಯದ ನೀರಿಗೆ ರೈತ ಸಂಘದ ನಡುವೆ ಜಿದ್ದಾಜಿದ್ದಿ!

By ಚಿತ್ರದುರ್ಗ ಪ್ರತಿನಿಧಿ
|
Google Oneindia Kannada News

ಚಿತ್ರದುರ್ಗ, ಮಾರ್ಚ್ 18; ಚಿತ್ರದುರ್ಗ ಜಿಲ್ಲೆಯ ಏಕೈಕ ಜಲಾಶಯ ವಾಣಿ ವಿಲಾಸ ಸಾಗರ. ಜಲಾಶಯದ ನೀರಿಗಾಗಿ ರೈತ ಸಂಘದ ಎರಡು ಬಣಗಳ ನಡುವೆ ಜಿದ್ದಾಜಿದ್ದಿ ನಡೆಯುತ್ತಿದೆ. ಈ ಪೈಪೋಟಿಗೆ ಜಿಲ್ಲೆಯಾದ್ಯಂತ ಪರ-ವಿರೋಧ ಬೆಂಬಲ ವ್ಯಕ್ತವಾಗಿದ್ದು, ಚರ್ಚೆಗೆ ಗ್ರಾಸವಾಗಿದೆ.

ಜಿಲ್ಲಾ ಬಣದ ರೈತರ ಗಡಿಪಾರಿಗೆ ಮತ್ತೊಂದು ರೈತ ಸಂಘಟನೆ ಜಿಲ್ಲಾಧಿಕಾರಿ ಕಚೇರಿ ಮೆಟ್ಟಿಲು ಹತ್ತಿದೆ. ಜಿಲ್ಲೆಯ ಹಿರಿಯೂರು ತಾಲೂಕಿನಲ್ಲಿರುವ ಜಲಾಶಯದ ನೀರಿಗಾಗಿ ಹಿರಿಯೂರಿನ ವಿವಿ ಸಾಗರ ಹೋರಾಟ ಸಮಿತಿ ಹಾಗೂ ರಾಜ್ಯ ರೈತ ಸಂಘದ ನಡುವೆ ಜಿದ್ದಾಜಿದ್ದಿ ನಡೆಯುತ್ತಿದೆ.

ವಾಣಿ ವಿಲಾಸ ಸಾಗರಕ್ಕೆ ಡಿಸೆಂಬರ್‌ನಲ್ಲಿ ಭದ್ರಾ ನೀರುವಾಣಿ ವಿಲಾಸ ಸಾಗರಕ್ಕೆ ಡಿಸೆಂಬರ್‌ನಲ್ಲಿ ಭದ್ರಾ ನೀರು

ಮಧ್ಯ ಕರ್ನಾಟಕ ಬಯಲುಸೀಮೆ ರೈತರ ಪಾಲಿನ ಜೀವನಾಡಿ ವಾಣಿ ವಿಲಾಸ ಜಲಾಶಯ. ಹಲವು ವರ್ಷಗಳ ಬಳಿಕ ಮೈದುಂಬಿ ನಿಂತಿರೋ ಹಿರಿಯೂರು ತಾಲೂಕಿನ ವಾಣಿವಿಲಾಸ ಜಲಾಶಯ ನೀರಿನ ಹಂಚಿಕೆ ವಿಚಾರ ಇದೀಗ ಜಿಲ್ಲೆಯ ರೈತ ಸಂಘಟನೆಗಳಲ್ಲಿ ಜಿದ್ದಾಜಿದ್ದಿಗೆ ವೇದಿಕೆಯಾಗಿದೆ.

ಡೆಡ್ ಸ್ಟೋರೇಜ್ ತಲುಪಿದ ವಾಣಿ ವಿಲಾಸ ಜಲಾಶಯ ನೀರಿನ ಮಟ್ಟ ಡೆಡ್ ಸ್ಟೋರೇಜ್ ತಲುಪಿದ ವಾಣಿ ವಿಲಾಸ ಜಲಾಶಯ ನೀರಿನ ಮಟ್ಟ

Vanivilas Sagara Dam Water Sharing Conflict Among Farmers Organizations

ಇಂತಹ ಚರ್ಚೆಯಿಂದ ಜನಸಾಮಾನ್ಯರು ಹೈರಾಣಾಗಿದ್ದಾರೆ. ವಾಣಿವಿಲಾಸ ಜಲಾಶಯದ ನೀರನ್ನು ಹಿರಿಯೂರಿನ ಅಚ್ಚುಕಟ್ಟು ಪ್ರದೇಶಕ್ಕೆ ಹರಿಸಲಾಗಿದೆ. ಇನ್ನು ಚಳ್ಳಕೆರೆ ಮತ್ತು ಮೊಳಕಾಲ್ಮೂರು ತಾಲೂಕಿಗೆ ನೀರು ಹರಿಸುವಂತೆ ಮುಖ್ಯಮಂತ್ರಿಗಳಿಗೆ ಸಚಿವ ಬಿ. ಶ್ರೀರಾಮುಲು ಪತ್ರ ಬರೆದಿದ್ದರು.

ವಾಣಿ ವಿಲಾಸ ಸಾಗರವನ್ನು ತುಂಬಿಸಿಕೊಡುವಂತೆ ಪ್ರಧಾನಿಗೆ ಮನವಿವಾಣಿ ವಿಲಾಸ ಸಾಗರವನ್ನು ತುಂಬಿಸಿಕೊಡುವಂತೆ ಪ್ರಧಾನಿಗೆ ಮನವಿ

ಇದನ್ನು ಹಿರಿಯೂರು ರೈತರು ಖಂಡಿಸಿದ್ದು, ಯಾವುದೇ ಕಾರಣಕ್ಕೂ ನೀರು ಹರಿಸಬಾರದು ಎಂದು ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದ್ದರು. ಈ ವಿಷಯಕ್ಕೆ ಸಂಬಂಧಿಸಿದಂತೆ ಜಿದ್ದಾಜಿದ್ದಿ ನಡೆಯುತ್ತಿದೆ.

ವಿವಿ ಸಾಗರ ಜಲಾಶಯ ಯಾರೋ ಒಬ್ಬರ ಆಸ್ತಿ ಅಲ್ಲ. ಒಂದು ಸಂಘ ಕಟ್ಟಿಕೊಂಡು ಕಸವನಹಳ್ಳಿ ರಮೇಶ್ ಬಣ ಜಿಲ್ಲೆಯಲ್ಲಿ ದ್ವೇಷ ಭಾವನೆ ಉಂಟು ಮಾಡುತ್ತಿದೆ. ಮೊಳಕಾಲ್ಮೂರು ಹಾಗೂ ಚಳ್ಳಕೆರೆಗೆ ನೀರು ಬಿಡ ಬೇಡಿ ಎಂದು ಮನವಿ ಸಲ್ಲಿಸಲು ಇವರು ಯಾರು? ಇವರನ್ನು ಗಡಿಪಾರು ಮಾಡಬೇಕು ಎಂದು ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಸುರೇಶ್ ಬಾಬು ಜಿಲ್ಲಾಧಿಕಾರಿ ಕವಿತಾ ಮನ್ನೀಕೇರಿಗೆ ಮನವಿ ಸಲ್ಲಿಸಿದ್ದಾರೆ.

ಗಡಿಪಾರು ಹೇಳಿಕೆ ಖಂಡಿಸಿದ ಹಿರಿಯೂರಿನ ವಿವಿ ಸಾಗರ ಹೋರಾಟ ಸಮಿತಿ ಸದಸ್ಯರು, ರಾಜ್ಯ ರೈತ ಸಂಘ ನಮ್ಮನ್ನು ಗಡಿಪಾರು ಮಾಡುವಂತೆ ಡಿಸಿ ಅವರಿಗೆ ಮನವಿ ಸಲ್ಲಿಸಿದ್ದಾರೆ. ಮೊದಲು ಜಲಾಶಯದ ಇತಿಹಾಸ ತಿಳಿದುಕೊಳ್ಳಲಿ. ನಮ್ಮ ತಾಲೂಕಿನ ನೀರಿನ ಹಕ್ಕನ್ನು ನಾವು ಕೇಳಿದ್ದೇವೆ. ನಮ್ಮ ಹಕ್ಕನ್ನು ಪ್ರಶ್ನೆ ಮಾಡಿದ್ದು ತಪ್ಪಾ? ಎಂದು ಕೇಳಿದ್ದಾರೆ.

Recommended Video

ಸೌಮ್ಯಾ ರೆಡ್ಡಿ ಪೊಲೀಸರ ಜೊತೆ ಕಿರಿಕ್ | Oneindia Kannada

ಎರಡು ರೈತ ಬಣಗಳನ್ನು ಕೂರಿಸಿ ಜಲಾಶಯದ ನೀರಿನ ಹಂಚಿಕೆಯನ್ನು ಶಾಂತಿಯುತವಾಗಿ ಮಾಡಬೇಕಾಗಿರುವ ಜಿಲ್ಲಾಡಳಿತವು ಮೈಮರೆತು ಕೂತಿರುವುದು ಸಾರ್ವಜನಿಕರಲ್ಲಿ ಗೊಂದಲ ಮೂಡಿಸುತ್ತಿದೆ. ಒಟ್ಟಿನಲ್ಲಿ ಜಿಲ್ಲೆಯ ಒಳಗೆ ನೀರಿನ ಹಂಚಿಕೆ ವಿಚಾರದಲ್ಲಿ ಎರಡು ರೈತ ಬಣಗಳ ನಡುವೆ ಪೈಪೋಟಿ ಆರಂಭವಾಗಿದ್ದು, ಇದು ತಾರ್ಕಿಕ ಅಂತ್ಯ ಕಾಣಲಿದೆಯೇ? ಕಾದು ನೋಡಬೇಕು.

English summary
Conflict between farmers organizations in the issue of water sharing of Hiriyur Vanivilas Sagara dam. Chitradurga district Molakalmuru and Challakere taluk also seek the dam water.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X