ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಳೆಯಿಂದ ನೆಲಕ್ಕುರುಳಿದ ಬೃಹತ್ ಬೇವಿನ ಮರ, 6 ಕಾರುಗಳು ಜಖಂ

By ಚಿತ್ರದುರ್ಗ ಪ್ರತಿನಿಧಿ
|
Google Oneindia Kannada News

ಚಿತ್ರದುರ್ಗ, ಜೂನ್ 27: ಚಿತ್ರದುರ್ಗದಲ್ಲಿ ನಿನ್ನೆ ರಾತ್ರಿ ಸುರಿದ ಮಳೆಗೆ ನಾಲ್ಕೈದು ಕೆರೆಗಳು ತುಂಬಿ ಹರಿದಿದ್ದು, ಬೃಹತ್ ಬೇವಿನ ಮರವೊಂದು ನೆಲಕ್ಕುರುಳಿ ಆರು ಕಾರುಗಳು ಜಖಂ ಆಗಿರುವ ಘಟನೆ ತಡರಾತ್ರಿ ಚಿತ್ರದುರ್ಗದಲ್ಲಿ ನಡೆದಿದೆ.

ನಗರದ ಎಸ್ ಆರ್ ಲೇಔಟ್ ನಾಗರಕಟ್ಟೆ ಮುಂದೆ ನಿಲ್ಲಿಸಿದ್ದ ಆರು ಕಾರುಗಳು ಮರ ಉರುಳಿ ಸಂಪೂರ್ಣ ಜಖಂ ಆಗಿವೆ.

ಶಿವಮೊಗ್ಗದಲ್ಲಿ ಭಾರೀ ಮಳೆಗೆ ಅಸ್ತವ್ಯಸ್ತವಾದ ಜನಜೀವನಶಿವಮೊಗ್ಗದಲ್ಲಿ ಭಾರೀ ಮಳೆಗೆ ಅಸ್ತವ್ಯಸ್ತವಾದ ಜನಜೀವನ

ನಿನ್ನೆ ರಾತ್ರಿ ಜಿಲ್ಲೆಯ ಕೆಲವು ತಾಲ್ಲೂಕಿನಲ್ಲಿ ಮಳೆಯಾಗಿದೆ. ನಿನ್ನೆ ರಾತ್ರಿ ಸುರಿದ ಮುಂಗಾರು ಮಳೆಗೆ ಹಳ್ಳಕೊಳ್ಳಗಳು ತುಂಬಿ ಹರಿದಿವೆ. ಜಿಲ್ಲೆಯ ಹಿರಿಯೂರು, ಹೊಸದುರ್ಗ, ಹೊಳಲ್ಕೆರೆ ಹಾಗೂ ಚಿತ್ರದುರ್ಗದಲ್ಲೂ ಸಣ್ಣ ಪುಟ್ಟ ಕೆರೆ ಕಟ್ಟೆಗಳಲ್ಲಿ ನೀರು ನಿಂತಿರುವ ದೃಶ್ಯ ಕಂಡುಬಂದವು.

Tree Fell By Rain And 6 Cars Damaged In Chitradurga

ನಿನ್ನೆ ಮಧ್ಯಾಹ್ನದಿಂದಲೇ ಮಳೆ ಆರಂಭಗೊಂಡಿದ್ದು, ರಸ್ತೆಗಳಲ್ಲಿ‌ ನೀರು ತುಂಬಿ ಹರಿದಿದೆ. ಮಳೆ ಸುರಿದಿದ್ದರಿಂದ ಕೃಷಿ ಚಟುವಟಿಕೆ ಕೈಗೊಳ್ಳಲು ರೈತರು ಸಜ್ಜಾಗಿದ್ದಾರೆ.

English summary
Huge neem tree fell down by heavy rain and 6 cars were damaged in chitradurga last night,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X