ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮದ್ಯಪಾನ ನಿಷೇಧಕ್ಕೆ ಒತ್ತಾಯಿಸಿ ಸಾವಿರಾರು ಮಹಿಳೆಯರಿಂದ ಪಾದಯಾತ್ರೆ

|
Google Oneindia Kannada News

ಮದ್ಯಪಾನ ನಿಷೇಧಕ್ಕೆ ಒತ್ತಾಯಿಸಿ ಸಾವಿರಾರು ಮಹಿಳೆಯರಿಂದ ಪಾದಯಾತ್ರೆ
ಚಿತ್ರದುರ್ಗ, ಜನವರಿ 19: ಕರ್ನಾಟಕ ರಾಜ್ಯ ಲಂಚಮುಕ್ತ ವೇದಿಕೆ ಆಯೋಜಿಸಿರುವ ಮದ್ಯಪಾನ ನಿಷೇಧಕ್ಕೆ ಒತ್ತಾಯಿಸಿ ಪಾದಯಾತ್ರೆಗೆ ಇಂದು ಚಿತ್ರದುರ್ಗದಿಂದ ಚಾಲನೆ ದೊರೆತಿದೆ.

ಚಿತ್ರದುರ್ಗದ ಜಗದ್ಗುರು ಮುರುಗರಾಜೇಂದ್ರ ಕಾಲೇಜು ಕ್ರೀಡಾಂಗಣದಲ್ಲಿ ಇಂದು ಮಠದ ಶರಣರು ಪಾದಯಾತ್ರೆಗೆ ಚಾಲನೆ ನೀಡಿದ್ದಾರೆ.

Title: Women march in demand to ban liqueur completely in Karnataka

ಪಾದಯಾತ್ರೆಯಲ್ಲಿ ಸಾವಿರಾರು ಮಂದಿ ಮಹಿಳೆಯರು ಭಾಗವಹಿಸಿದ್ದಾರೆ. ಯಾದಗಿರಿ, ಬಾಗಲಕೋಟೆ, ವಿಜಯಪುರ, ಗುಲ್ಬರ್ಗ, ರಾಯಚೂರು ಸೇರಿ ಹಲವು ಜಿಲ್ಲೆಗಳ್ಳಿಂದ ಮಹಿಳೆಯರು ಈ ಪಾದಯಾತ್ರೆಗೆಂದು ಆಗಮಿಸಿದ್ದಾರೆ.

ಲಂಚಮುಕ್ತ ವೇದಿಕೆ ಸಂಘಟನೆ ಅಧ್ಯಕ್ಷ ರವಿಕೃಷ್ಣಾ ರೆಡ್ಡಿ ಅವರು ಈ ಪಾದಯಾತ್ರೆಯನ್ನು ಮುನ್ನಡೆಸುತ್ತಿದ್ದು, ರಾಜ್ಯದಲ್ಲಿ ಸಂಪೂರ್ಣ ಮದ್ಯಪಾನ ನಿಷೇಧ ಮಾಡಬೇಕೆಂದು ಒತ್ತಾಯ ಮಾಡಿ ಈ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ.

ಪಾದಯಾತ್ರೆ ಮೂಲಕ ಈ ಮಹಿಳೆಯರು ಬೆಂಗಳೂರು ಪ್ರವೇಶಿಸಿ ವಿಧಾನಸೌಧದ ಮುಂದೆ ಸಮಾವೇಶಗೊಳ್ಳಲಿದ್ದಾರೆ. ಅಲ್ಲಿಂದ ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಲಿದ್ದಾರೆ.

English summary
Thousands of women marching towards Bengaluru in leadership corruption free Karnataka organization president Ravikrishna Reddy demanding ban liqueur completely in Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X