• search
 • Live TV
ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಚಳ್ಳಕೆರೆ ತಿಪ್ಪೇರುದ್ರಸ್ವಾಮಿ ಜಾತ್ರೆ; ಮುಕ್ತಿ ಬಾವುಟ 21 ಲಕ್ಷಕ್ಕೆ ಹರಾಜು

By ಚಿತ್ರದುರ್ಗ ಪ್ರತಿನಿಧಿ
|

ಚಿತ್ರದುರ್ಗ, ಮಾರ್ಚ್ 29: ಇತಿಹಾಸ ಪ್ರಸಿದ್ಧ ಕ್ಷೇತ್ರವಾದ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿಯ ಶ್ರೀ ಗುರು ತಿಪ್ಪೇರುದ್ರಸ್ವಾಮಿಯ ರಥೋತ್ಸವ ಸೋಮವಾರ ನಡೆಯಿತು.

ಜಿಲ್ಲಾಡಳಿತದ ಬಿಗಿ ಬಂದೋಬಸ್ತ್ ಹಾಗೂ ಕೋವಿಡ್ ಆತಂಕದ ನಡುವೆಯೂ ಸ್ವಾಮಿಯ ಜಾತ್ರೆಗೆ ಸಾವಿರಾರು ಭಕ್ತರು ಸಾಕ್ಷಿಯಾದರು. ಪ್ರತಿ ವರ್ಷ ಲಕ್ಷಾಂತರ ಭಕ್ತರು ಜಾತ್ರೆಗೆ ಆಗಮಿಸುತ್ತಿದ್ದರು. ಈ ಬಾರಿ ಸರಳವಾಗಿಯೇ ಜಾತ್ರೆ ನಡೆಯಿತು.

ನಂಜನಗೂಡು ದೊಡ್ಡ ಜಾತ್ರೆ; ಅರ್ಧಕ್ಕೆ ನಿಂತ ಪಾರ್ವತಿ ದೇವಿ ರಥ

ಜಿಲ್ಲಾಡಳಿತ ಮಾಡಿದ್ದ ಮನವಿಗೆ ಸ್ಪಂದಿಸಿದ ಭಕ್ತರು ಮನೆಯಲ್ಲೇ ತಿಪ್ಪೇರುದ್ರಸ್ವಾಮಿಗೆ ಪೂಜೆ ಸಲ್ಲಿಸಿದರು. ಹೋಬಳಿಯ ಸುತ್ತಲಿನ ಭಕ್ತರು ಮಾತ್ರ ಆಗಮಿಸಿ ದೇವರಿಗೆ ಪೂಜೆ ಸಲ್ಲಿಸಿದರು.

ಸರಳವಾಗಿ ನಡೆದ ನಂಜನಗೂಡು ದೊಡ್ಡ ಜಾತ್ರೆ

ಜಾತ್ರೆಯ ವಿಧಿ-ವಿಧಾನ ಮತ್ತು ಸಾಂಪ್ರದಾಯಿಕ ಪೂಜೆಯ ಜೊತೆಗೆ ಮಧ್ಯಾಹ್ನ 3.59ರ ವೇಳೆಗೆ ರಥೋತ್ಸವ ನಡೆಯಿತು. ಕೋವಿಡ್ ಭೀತಿಯ ನಡುವೆಯೂ ಜನರು ದೇವರನ್ನು ಕಣ್ತುಂಬಿಕೊಂಡು ಪುನೀತರಾದರು.

ರಾಜಕೀಯದಲ್ಲಿ ಗೆಲುವು, ಸುಖ-ಶಾಂತಿ, ನೆಮ್ಮದಿ ಪ್ರತೀಕವಾದ ತಿಪ್ಪೇರುದ್ರಸ್ವಾಮಿಯ ಮುಕ್ತಿ ಬಾವುಟ ಪಡೆಯಲು ಇಬ್ಬರು ರಾಜಕೀಯ ನಾಯಕರು ಮುಗಿಬಿದ್ದಿದ್ದರು. ಈ ಬಾರಿಯ ಮುಕ್ತಿ ಭಾವುಟವನ್ನು ಪಡೆಯಲು ಜಿಲ್ಲಾ ಪಂಚಾಯಿತಿ ಸದಸ್ಯ ಗುರುಮೂರ್ತಿ ಹಾಗೂ ಪಟ್ಟಣ ಪಂಚಾಯಿತಿ ಸದಸ್ಯ ಉಮಾಪತಿ ಇವರಿಬ್ಬರ ನಡುವೆ ತೀವ್ರ ಪೈಪೋಟಿ ನಡೆಯಿತು.

ಅಂತಿಮವಾಗಿ ನಾಯಕನಹಟ್ಟಿ ಪಟ್ಟಣ ಪಂಚಾಯಿತಿ ಸದಸ್ಯ ಉಮಾಪತಿ 21 ಲಕ್ಷಕ್ಕೆ ಮುಕ್ತಿ ಬಾವುಟವನ್ನು ಹರಾಜಿನಲ್ಲಿ ಪಡೆದುಕೊಂಡರು. ಖುದ್ದಾಗಿ ಡಿಸಿ ಕವಿತಾ ಎಸ್. ಮನ್ನೀಕೆರಿ ಮತ್ತು ಎಸ್ಪಿ ಜಿ. ರಾಧಿಕಾ ಮೈಕ್ ಹಿಡಿದು ಭಕ್ತರಿಗೆ ಮಾಸ್ಕ್ ಧರಿಸಿ ಕೋವಿಡ್ ನಿಯಮ ಪಾಲಿಸಿ ಎಂದು ಮನವಿ ಮಾಡುತ್ತಿದ್ದರು.

   ಕಾಂಗ್ರೆಸ್ ಪಕ್ಷಕ್ಕೆ ಹಸ್ತದ ಗುರುತು ಬರೋದಕ್ಕೆ ಈ ದೇವಿಯೇ ಕಾರಣ | Oneindia Kannada

   ಪವಾಡ ಪುರುಷ ಸ್ವಾಮಿಯ ಜಾತ್ರೆಗೆ ಕರ್ನಾಟಕ, ಆಂಧ್ರ ಪ್ರದೇಶ ಸೇರಿದಂತೆ ವಿವಿಧ ಭಾಗಗಳಿಂದ ಭಕ್ತರು ಆಗಮಿಸಿದ್ದರು. ಜಾತ್ರೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಜಿಲ್ಲಾಡಳಿತ ಸೂಕ್ತ ಬಂದೋಬಸ್ತ್ ಮಾಡಿತ್ತು.

   English summary
   Chitradurga district Challakere taluk Nayakanahatti sri Guru Thipperudraswamy jatre held on March 29, 2021.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X