• search
 • Live TV
ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಿಜೆಪಿ ಸರ್ಕಾರ ಬರಲು ಕಾರಣರಾದವರಿಗೆ MLC ಮಾಡಿ; ಸೋಮಶೇಖರ್

By ಚಿತ್ರದುರ್ಗ ಪ್ರತಿನಿಧಿ
|
Google Oneindia Kannada News

ಚಿತ್ರದುರ್ಗ, ಜೂನ್ 12: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಕಾರಣರಾದವರಿಗೆ ಎಂಎಲ್ಸಿ ಸ್ಥಾನ ನೀಡಬೇಕು ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದರು.

   ಇವರಿಗೇ ಪರಿಷತ್ ಸ್ಥಾನ ಕೊಡಬೇಕು ಎಂದ ಸಚಿವ ಎಸ್.ಟಿ ಸೋಮಶೇಖರ್ | ST Somashekar | Oneindia Kannada

   ಚಿತ್ರದುರ್ಗದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಅವರನ್ನು ಬೈರತಿ ಬಸವರಾಜ್ ಹಾಗೂ ಎಸ್.ಟಿ. ಸೋಮಶೇಖರ್ ಭೇಟಿ ಮಾಡಿ ನಂತರ ಸುದ್ದಿಗಾರರ ಜೊತೆ ಮಾತನಾಡಿದರು. "ಉಪ ಚುನಾವಣೆ ವೇಳೆ ಸೋತಿರುವ ಎಂಟಿಬಿ, ವಿಶ್ವನಾಥ್ ಹಾಗೂ ಶಂಕರ್, ರೋಷನ್ ಬೇಗ್ ಗೆ ಪರಿಷತ್ ಸ್ಥಾನ ಕೊಡಬೇಕು. ಮುನಿರತ್ನ ಹಾಗು ಪ್ರತಾಪ್ ಗೌಡ ಪಾಟೀಲ್ ಎಂಎಲ್ಎ ಚುನಾವಣೆಗೆ ಸ್ಪರ್ಧಿಸುತ್ತಾರೆ" ಎಂದರು.

    ವಿಧಾನ ಪರಿಷತ್ ಚುನಾವಣೆ; ಯಡಿಯೂರಪ್ಪ ಮಾತೇ ಅಂತಿಮ! ವಿಧಾನ ಪರಿಷತ್ ಚುನಾವಣೆ; ಯಡಿಯೂರಪ್ಪ ಮಾತೇ ಅಂತಿಮ!

   "ಕೆ.ಎಸ್. ಈಶ್ವರಪ್ಪ ಅವರ ಬಳಿ ಈಗಲೂ ಮಾತನಾಡಿದ್ದು, ಸೋಮವಾರ ಕೋರ್ ಕಮಿಟಿ ಸಭೆಯಲ್ಲಿ ತೀರ್ಮಾನ ಆಗುತ್ತದೆ. ನಮ್ಮ ಜೊತೆ ಬಂದವರು ಯಾರೂ ಮಾತೃ ಪಕ್ಷಕ್ಕೆ ಹೋಗುವ ಮಾತಿಲ್ಲ. ರಾಜ್ಯ ಸಭೆಯ ಆಯ್ಕೆಯಲ್ಲಾದಂತೆ ವಿಧಾನ ಪರಿಷತ್ ನಲ್ಲಿ ಆಗುವುದಿಲ್ಲ. ರಾಜ್ಯದ ನಾಯಕರ ತೀರ್ಮಾನವೇ ಅಂತಿಮ ಆಗುತ್ತದೆ" ಎಂದು ತಿಳಿಸಿದರು.

   English summary
   Those who helped bjp government to come into existence should be given MLC seat Said ST Somashekhar in chitradurga
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X