ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿತ್ರದುರ್ಗದಲ್ಲಿ ರಾತ್ರಿಯಿಡೀ ಸುರಿದ ಮಳೆಗೆ ಮತ್ತೆ ಕೋಡಿ ಬಿದ್ದ ಐತಿಹಾಸಿಕ ಕೆರೆ

|
Google Oneindia Kannada News

ಚಿತ್ರದುರ್ಗ, ಅಕ್ಟೋಬರ್ 10: ಚಿತ್ರದುರ್ಗ ಜಿಲ್ಲೆಯಲ್ಲಿ ನಿನ್ನೆ ರಾತ್ರಿಯಿಡೀ ಸುರಿದ ಮಳೆಗೆ ಸತತ 6ನೇ ಬಾರಿಗೆ ಚಿತ್ರದುರ್ಗ ತಾಲೂಕಿನ ಮಲ್ಲಾಪುರ ಕೆರೆ ತುಂಬಿ ಕೋಡಿ ಬಿದ್ದಿದೆ.

ಮಳೆಗೆ ಮಲ್ಲಾಪುರ ಕೆರೆ ಕೋಡಿ ಬಿದ್ದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಅಂಡರ್ ಪಾಸ್ ಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಹೆಚ್ಚು ನೀರು ಹರಿ ಬಂದಿದ್ದರಿಂದ ರಸ್ತೆಯ ಅಂಡರ್ ಪಾಸ್ ಕೆಳಗೆ ನದಿಯಂತೆ ನೀರು ಹರಿಯುತ್ತಿರುವ ದೃಶ್ಯ ಕಂಡುಬಂದಿದೆ. ಇತ್ತ ವಾಹನ ಸವಾರರು, ಗ್ರಾಮಸ್ಥರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಬರದನಾಡು ಕೋಲಾರದಲ್ಲಿ ಅಪರೂಪದ ಮಳೆ; ಕೋಡಿ ಹರಿದ ದೊಡ್ಡ ಕೆರೆಬರದನಾಡು ಕೋಲಾರದಲ್ಲಿ ಅಪರೂಪದ ಮಳೆ; ಕೋಡಿ ಹರಿದ ದೊಡ್ಡ ಕೆರೆ

ಮಲ್ಲಾಪುರ ಗ್ರಾಮ‌ ಸಂಪೂರ್ಣ ಜಲಾವೃತವಾಗಿದ್ದು, ಮಲ್ಲಮ್ಮ ಎಂಬುವರಿಗೆ ಸೇರಿದ ಮನೆಯೊಂದರ ಗೋಡೆ ಕುಸಿದಿದೆ. ಮಲ್ಲಾಪುರ ಕೆರೆಯ ಕೊಳಕು ನೀರು ಊರೊಳಗೆ ನುಗ್ಗಿ ದುರ್ವಾಸನೆ ಬೀರುತ್ತಿದೆ. ಚಿತ್ರದುರ್ಗದ ವಿವಿಧೆಡೆ ತಗ್ಗುಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ. ನೀರಿನ ರಭಸದಿಂದ ಮನೆಗಳು, ರಸ್ತೆಗಳೆಲ್ಲಾ ಜಲಾವೃತವಾಗಿವೆ. ಇದರಿಂದ ದವಸ ಧಾನ್ಯಗಳೆಲ್ಲ ನೀರು ಪಾಲಾಗಿವೆ.

Chitradurga: The Historic Mallapura Lake Overflowing Once Again By Heavy Rains Overnight

ಚಿತ್ರದುರ್ಗದ ಮಾರುತಿ‌ನಗರದ ದಿನಗೂಲಿ ಕಾರ್ಮಿಕರು ವಾಸವಾಗಿರುವ ಬಡಾವಣೆಯಲ್ಲಿ ಈ ಚಿತ್ರಣ ಕಂಡುಬಂದಿದೆ. ನಗರಸಭೆಯ ಅವೈಜ್ಞಾನಿಕ ರಸ್ತೆ ನಿರ್ಮಾಣಕ್ಕೆ ಜನಾಕ್ರೋಶ ವ್ಯಕ್ತವಾಗಿದೆ.

English summary
The Chitradurga's Mallapura lake has been overflowing for the 6th time due to overnight rain,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X