ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿತ್ರದುರ್ಗದ ಕಾದಂಬರಿಕಾರನ ಮೇಲೆ ಕೋವಿಡ್-19 ಲಸಿಕೆ ಪ್ರಯೋಗ

By ಚಿತ್ರದುರ್ಗ ಪ್ರತಿನಿಧಿ
|
Google Oneindia Kannada News

ಚಿತ್ರದುರ್ಗ, ಆಗಸ್ಟ್ 18: ಪ್ರಪಂಚದಾದ್ಯಂತ ಮಹಾಮಾರಿ ಕೊರೊನಾ ವೈರಸ್ ಆರ್ಭಟ ಮುಂದುವರೆದಿದ್ದು, ಕೊರೊನಾ ಸೋಂಕಿಗೆ ಲಸಿಕೆ ಕಂಡುಹಿಡಿಯಲು ಲಸಿಕೆ ಪ್ರಯೋಗ ಭರದಿಂದ ಸಾಗುತ್ತಿದೆ.

Recommended Video

Chitradurgaದ ವ್ಯಕ್ತಿ ಮೇಲೆ Corona Vaccine ಪ್ರಯೋಗ | Oneindia Kannada

ಕೊರೊನಾ ವೈರಸ್ ಗೆ ಭಾರತದಲ್ಲಿ ಸಹ ವ್ಯಾಕ್ಸಿನ್ ಕಂಡುಹಿಡಿಯುವ ಕಾರ್ಯ ಯಶಸ್ವಿಯಾಗಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದ ಕಾದಂಬರಿಕಾರ ಡಿ.ಸಿ ಪಾಣಿ ಅವರ ಮೇಲೆ ವ್ಯಾಕ್ಸಿನ್ ಪ್ರಯೋಗ ಮಾಡಲಾಗಿದೆ. ಬೆಳಗಾವಿಯ ಜೀವನ್ ರೇಖಾ ಆಸ್ಪತ್ರೆಯಲ್ಲಿ ಮೊದಲನೇ ಹಂತದ ಪ್ರಾಯೋಗಿಕ ಲಸಿಕೆಯನ್ನು ಡಿ.ಸಿ ಪಾಣಿಯವರು ಸ್ವಯಂ ಪ್ರೇರಿತರಾಗಿ ಈ ಲಸಿಕೆ ಪಡೆದುಕೊಂಡು ಬಂದಿದ್ದಾರೆ.

ಹಿರಿಯೂರು ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್ ಗೆ ಕೊರೊನಾ ವೈರಸ್ ಪಾಸಿಟಿವ್ಹಿರಿಯೂರು ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್ ಗೆ ಕೊರೊನಾ ವೈರಸ್ ಪಾಸಿಟಿವ್

ಡಿ.ಸಿ ಪಾಣಿಯವರಿಗೆ ಡಾ.ಪಾರಿತೋಷ್ ವಿ. ದೇಸಾಯಿ ಅವರು ವಿಶೇಷ ಫಾರ್ಮಜೆಟ್ ಮೆಷಿನ್ ಮೂಲಕ ಪ್ರಾಯೋಗಿಕ ಲಸಿಕೆಯನ್ನು ನೀಡಿರುವುದು ವಿಶೇಷವಾಗಿದೆ. ಈ ಕಾದಂಬರಿಕಾರನ ಮೇಲೆ ಮಾಡಿರುವ ಪ್ರಯೋಗ ಯಶಸ್ವಿಯಾಗುತ್ತಾ ನಡೆಯುತ್ತಿದೆ ಎನ್ನಬಹುದು.

ಡಿ.ಸಿ ಪಾಣಿಯವರು ಆಗಸ್ಟ್ 03 ರಂದು ಪಾಲ್ಗೊಂಡಿದ್ದರು

ಡಿ.ಸಿ ಪಾಣಿಯವರು ಆಗಸ್ಟ್ 03 ರಂದು ಪಾಲ್ಗೊಂಡಿದ್ದರು

ಹೈದರಾಬಾದ್ ನ ಭಾರತ ಬಯೋಟೆಕ್ ಕೋವ್ಯಾಕ್ಸಿನ್ ಸಂಸ್ಥೆ ಈ ಲಸಿಕೆ ಸಿದ್ಧಪಡಿಸಿದ್ದು, ದೇಶದ ವಿವಿಧ ಭಾಗಗಳಲ್ಲಿ ಪ್ರಯೋಗ ನಡೆಸುತ್ತಿದೆ. ಇದರ ಭಾಗವಾಗಿ ರಾಜ್ಯದಲ್ಲಿ ಸಹ ಪ್ರಯೋಗ ನಡೆಸಿದೆ. ಡಿ.ಸಿ ಪಾಣಿಯವರು ಆಗಸ್ಟ್ 03 ರಂದು ಮೊದಲ ಹಂತದ ಪರೀಕ್ಷೆಯಲ್ಲಿ ಪಾಲ್ಗೊಂಡಿದ್ದರು. ನಂತರ ಜುಲೈ 23 ಹಾಗೂ ಆಗಸ್ಟ್ 01 ರಂದು ಬೆಳಗಾವಿಯಿಂದ ಕರೆ ಬಂದಿದ್ದು, ರಕ್ತದೊತ್ತಡ, ಹೃದಯ ಬಡಿತ, ಮೂತ್ರ ಹಾಗೂ ರಕ್ತಪರೀಕ್ಷೆ ಮಾಡಿದರು. ಸಂಪೂರ್ಣವಾಗಿ ಆರೋಗ್ಯ ಇದ್ದರಿಂದ ಟ್ರಯಲ್ ಗೆ ಆಯ್ಕೆ ಆಗುವ ಮೂಲಕ ಲಸಿಕೆ ಪಡೆದುಕೊಂಡು ಯಶಸ್ವಿಯಾಗಿ ಹೊರ ಬಂದಿದ್ದಾರೆ.

ಲಸಿಕೆ ಪಡೆಯುವಾಗ ನನಗೆ ಯಾವುದೇ ಭಯವಾಗಲಿಲ್ಲ

ಲಸಿಕೆ ಪಡೆಯುವಾಗ ನನಗೆ ಯಾವುದೇ ಭಯವಾಗಲಿಲ್ಲ

ವ್ಯಾಕ್ಸಿನ್ ಪ್ರಯೋಗಕ್ಕೆ ಒಳಗಾಗಿರುವ ಡಿ.ಸಿ ಪಾಣಿಯವರು ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮ ದೇಶದಲ್ಲೇ ಲಸಿಕೆ ಉತ್ಪಾದನೆಯಾಗುವ ಮೂಲಕ ಶೀಘ್ರದಲ್ಲೇ ಕೋವಿಡ್ ಅಂತ್ಯವಾಗಲಿ ಎಂಬ ಉದ್ದೇಶದಿಂದ ಈ ಪ್ರಯೋಗಕ್ಕೆ ಒಳಗಾಗಿದ್ದೇನೆ. ಲಸಿಕೆ ಪಡೆಯುವಾಗ ನನಗೆ ಯಾವುದೇ ಭಯವಾಗಲಿಲ್ಲ ಎಂದರು.

ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ ರಿಷ್ಯಂತ್ ಗೆ ಕೊರೊನಾ ಸೋಂಕುಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ ರಿಷ್ಯಂತ್ ಗೆ ಕೊರೊನಾ ಸೋಂಕು

ತಡವಾದರೂ ನಮ್ಮ ದೇಶದಲ್ಲೇ ಕೊರೊನಾ ಲಸಿಕೆ ಸಿಗುತ್ತದೆ

ತಡವಾದರೂ ನಮ್ಮ ದೇಶದಲ್ಲೇ ಕೊರೊನಾ ಲಸಿಕೆ ಸಿಗುತ್ತದೆ

ಅಲ್ಲದೆ ಈ ಪ್ರಾಯೋಗಿಕ ಲಸಿಕೆ ಯಶಸ್ವಿಯಾದರೆ ನಮ್ಮ ದೇಶಕ್ಕೆ ಬಂದಿರುವ ಮಹಾಮಾರಿ ಕೊರೊನಾ ವೈರಸ್ ಕಂಟಕ ದೂರವಾಗಲಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಒಂದೆರಡು ತಿಂಗಳು ತಡವಾದರೂ ಸಹ ನಮ್ಮ ದೇಶದಲ್ಲೇ ಕೊರೊನಾ ಲಸಿಕೆ ಸಿಗುತ್ತದೆ. ಯಾರೂ ಕೂಡ ಕೊರೊನಾ ಸೋಂಕಿಗೆ ಭಯಪಡುವ ಅಗತ್ಯವಿಲ್ಲ, ಧೈರ್ಯವಾಗಿ ಎದುರಿಸಲು ಸಿದ್ಧವಾಗಿರಬೇಕು ಎಂದು ತಿಳಿಸಿದರು.

ಲಸಿಕೆ ಯಶಸ್ವಿಯಾಗಿ ಪ್ರಯೋಗವಾಗಲಿದೆ

ಲಸಿಕೆ ಯಶಸ್ವಿಯಾಗಿ ಪ್ರಯೋಗವಾಗಲಿದೆ

61 ವರ್ಷದ ನನ್ನ ಮೇಲೆ ಪ್ರಯೋಗ ನಡೆದಿದ್ದು, ನಾನು ಆರೋಗ್ಯವಾಗಿ ಇದ್ದೇನೆ. ಲಸಿಕೆ ಯಶಸ್ವಿಯಾಗಿ ಪ್ರಯೋಗವಾಗಲಿದೆ. ವಯಸ್ಸಾದ ನನ್ನ ಮೇಲೆ ಪ್ರಯೋಗ ನಡೆದಿದೆ, ಗಟ್ಟಿಮುಟ್ಟಾಗಿರುವ ಯುವಕರು ಸಹ ಧೈರ್ಯವಾಗಿ ಎದುರಿಸಲು ಸಿದ್ಧವಾಗಿರಬೇಕು ಯಾರೂ ಸಹ ಧೃತಿಗೆಡುವಂತಿಲ್ಲ ಎಂದು ಕೊರೊನಾ ಸೋಂಕಿತರಿಗೆ ಸಂದೇಶ ನೀಡುವ ಮೂಲಕ ಅಭಿಪ್ರಾಯಪಟ್ಟರು.

English summary
DC Pani, a novelist in Hiriyur city in Chitradurga district, has been The Covid-19 Vaccine Experiment Of Coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X