• search
  • Live TV
ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನಾಯಕನಹಟ್ಟಿ ಗುರು ತಿಪ್ಪೇರುದ್ರಸ್ವಾಮಿ ಅದ್ಧೂರಿ ಜಾತ್ರೆಗೆ ಬ್ರೇಕ್..!

By ಚಿತ್ರದುರ್ಗ ಪ್ರತಿನಿಧಿ
|

ಚಿತ್ರದುರ್ಗ, ಫೆಬ್ರವರಿ 25: ಮಾ.29 ರಂದು ಅದ್ಧೂರಿಯಾಗಿ ನಡೆಯಬೇಕಿದ್ದ ನಾಯಕನಹಟ್ಟಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಜಾತ್ರೋತ್ಸವವನ್ನು ಚಿತ್ರದುರ್ಗ ಜಿಲ್ಲಾಡಳಿತ ರದ್ದು ಮಾಡಿದೆ.

ಮಹಾಮಾರಿ ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಕವಿತಾ ಮಣ್ಣೀಕೆರಿ ತಿಳಿಸಿದರು. ಜಾತ್ರಾ ಮಹೋತ್ಸವದ ಪ್ರಯುಕ್ತ ಗುರುವಾರ ನಾಯಕನಹಟ್ಟಿ ದೇವಸ್ಥಾನದಲ್ಲಿ ಜಿಲ್ಲಾಡಳಿತ ಸಭೆ ನಡೆಸಿದ್ದು, ಈ ವೇಳೆ ಜಾತ್ರಾ ಮಹೋತ್ಸವವನ್ನು ರದ್ದುಗೊಳಿಸುವ ನಿರ್ಧಾರ ಪ್ರಕಟಿಸಿದೆ.

ಟೊಮೆಟೋ ಬೆಲೆ ಕುಸಿತ: ಟ್ರ್ಯಾಕ್ಟರ್ ನಲ್ಲಿ ತುಂಬಿ ಬೀಳು ಹೊಲಕ್ಕೆ ಸುರಿದ ಚಿತ್ರದುರ್ಗ ರೈತ

ಹೆಚ್ಚಿನ ಜನರು ಸೇರದಂತೆ ಜಾತ್ರೆ ರದ್ದುಗೊಳಿಸಿದ್ದು, ವಿಧಿ, ವಿಧಾನ ಮತ್ತು ಸಾಂಪ್ರದಾಯಿಕವಾಗಿ ಸ್ಥಳೀಯರಿಂದ ಮಾತ್ರ ಜಾತ್ರೆ ನಡೆಸಲಾಗುತ್ತದೆ. ಆದರೆ ಅದ್ಧೂರಿ ರಥೋತ್ಸವವಿರುವುದಿಲ್ಲ ಎಂದು ಜಿಲ್ಲಾಧಿಕಾರಿ ಕವಿತಾ ಮಣ್ಣೀಕೆರಿ ಸ್ಪಷ್ಟಪಡಿಸಿದ್ದಾರೆ.

ಜಾತ್ರೆ ಅಂಗವಾಗಿ ಯಾವುದೇ ಅಂಗಡಿ ಮುಂಗಟ್ಟುಗಳು ತೆರೆಯಲು ಅವಕಾಶವಿರುವುದಿಲ್ಲ. ಜೊತೆಗೆ ಹೊರಗಿನ ವಾಹನಗಳಿಗೆ ಪ್ರವೇಶವಿರುವುದಿಲ್ಲ ಎಂದು ಚಿತ್ರದುರ್ಗ ಜಿಲ್ಲಾಡಳಿತ ತಿಳಿಸಿದೆ.

English summary
The Chitradurga District Administration has canceled the Nayakanahatti Sri Guru Thipperudraswamy Jatrotsava which was to be held on the 29th of March.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X