ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಿರಿಯೂರಿನಲ್ಲಿ ಅಲೆಮಾರಿ ವಸತಿ ಶಾಲೆ ಅನುಮೋದನೆಗೆ ಡಿಸಿಎಂಗೆ ಮನವಿ

By ಚಿತ್ರದುರ್ಗ ಪ್ರತಿನಿಧಿ
|
Google Oneindia Kannada News

ಚಿತ್ರದುರ್ಗ, ಜೂನ್ 18: ಹಿರಿಯೂರು ತಾಲೂಕು ಹಿಂದುಳಿದ ಪ್ರದೇಶವಾಗಿದ್ದು, ಇಲ್ಲಿ ಹೆಚ್ಚಾಗಿ ಅಲೆಮಾರಿ ಸಮುದಾಯದವರು ನೆಲೆಸಿರುವ ಹಿನ್ನೆಲೆಯಲ್ಲಿ ತಾಲೂಕಿನ ಐಮಂಗಲ ಹೋಬಳಿಯ ಮದ್ದನಕುಂಟೆಯಲ್ಲಿ ಅಲೆಮಾರಿ ವಸತಿ ಶಾಲೆಯನ್ನು ಆಡಳಿತಾತ್ಮಕ ಅನುಮೋದನೆ ನೀಡಿ ಮಂಜೂರಾತಿ ಮಾಡುವಂತೆ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರನ್ನು ಭೇಟಿ ಮಾಡಿ ಬಿಜೆಪಿ ಮುಖಂಡ ಡಿ.ಟಿ. ಶ್ರೀನಿವಾಸ್ ಅವರು ಮನವಿ ಮಾಡಿದರು.

Recommended Video

ಕೊನೆಗೂ ನನಸಾಯಿತು ಡಿಕೆಶಿವಕುಮಾರ್ ಕನಸು | DK Shivakumar | Oneindia Kannada

ಹಿರಿಯೂರಿನ ಪ್ರವಾಸಿ ಮಂದಿರದಲ್ಲಿ ಭೇಟಿ ಮಾಡಿದ ಅವರು, ಡಾ. ನಂಜುಂಡಪ್ಪ ವರದಿಯ ಪ್ರಕಾರ ಹಿರಿಯೂರು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ತೀರಾ ಹಿಂದುಳಿದ ಪ್ರದೇಶವಾಗಿದೆ. ಈ ಪ್ರದೇಶದಲ್ಲಿ ಕಾಡುಗೊಲ್ಲ, ಜೋಗಿ, ಗೊಲ್ಲ, ಹೆಳವ, ಉಪ್ಪಾರ, ಇತರೆ ಸಮುದಾಯಗಳು ಹೆಚ್ಚಾಗಿ ವಾಸವಾಗಿವೆ. ಸರ್ಕಾರದ ವರದಿಯ ಪ್ರಕಾರ ಹಿರಿಯೂರು,‌ ಶಿರಾ, ಪಾವಗಡ ತಾಲೂಕಿನಲ್ಲಿ ಅಲೆಮಾರಿ/ಅರೆ ಅಲೆಮಾರಿ ವಸತಿ ಶಾಲೆಗಳನ್ನು ತೆರೆಯುವಂತೆ ಸುತ್ತೋಲೆ ಇದೆ. ಹಾಗೆಯೇ ಹಿರಿಯೂರು ತಾಲ್ಲೂಕಿನಲ್ಲಿ ಅಲೆಮಾರಿ ಮತ್ತು ಅರೆ ಅಲೆಮಾರಿಗಳು ಸಮಾಜದವರು ಶೈಕ್ಷಣಿಕವಾಗಿ ಸಬಲರಾಗಲು ವಸತಿ ಶಾಲೆಯನ್ನು ತೆರೆಯುವ ಅವಶ್ಯಕತೆ ಇದೆ ಎಂದು ಮನವಿ ಮಾಡಿದರು.

TD Srinivas Appealed Govinda Karajola To Approve Residential School In Hiriyuru

 ಚಿತ್ರದುರ್ಗ: ಚಿತ್ರದುರ್ಗ: "ಸಚಿವ ಶ್ರೀರಾಮುಲು ರಾಜ್ಯದ ಸಿಎಂ ಆಗಬೇಕು'

ಹಾಗಾಗಿ ವಸತಿ ಶಾಲೆ ಮಂಜೂರಾತಿಗಾಗಿ ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಹಿರಿಯೂರು ಭಾಗದಲ್ಲಿ ಸ್ಥಳಾವಕಾಶಕ್ಕಾಗಿ ಭೂಮಿ ಲಭ್ಯವಿದೆ. ಅಲೆಮಾರಿ ಮತ್ತು ಅರೆ ಅಲೆಮಾರಿ ವಸತಿ ಶಾಲೆ ನಿರ್ಮಾಣಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಿ ಎಂದು ಭೇಟಿ ಮಾಡಿ ತಿಳಿಸಿದ್ದಾರೆ.

ಆಗ್ನೇಯ ಪದವೀಧರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯ ಬಿರುಸಿನ ಪ್ರಚಾರಆಗ್ನೇಯ ಪದವೀಧರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯ ಬಿರುಸಿನ ಪ್ರಚಾರ

ಡಿ.ಟಿ. ಶ್ರೀನಿವಾಸ್ ಅವರ ಮನವಿಗೆ ಸ್ಪಂದಿಸಿದ ಡಿಸಿಎಂ ಗೋವಿಂದ ಕಾರಜೋಳ ಅವರು, ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರಿಗೆ ಕೂಡಲೇ ಕಡತದಲ್ಲಿ ಮಂಡಿಸಿ ಶಾಲೆ ನಿರ್ಮಾಣಕ್ಕೆ ಆದೇಶಿಸಿದ್ದಾರೆ ಎನ್ನಲಾಗಿದೆ.

English summary
BJP leader TD Srinivas has appealed to DCM Govinda Karajola to approve and sanction residential school for community in hiriyuru
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X