ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿದ್ದರಾಮಯ್ಯ ವ್ಯಾಕರಣ ಸರಿಯಿಲ್ಲ ಎಂದ ಶಿಕ್ಷಣ ಸಚಿವ ಸುರೇಶ್ ಕುಮಾರ್

By ಚಿತ್ರದುರ್ಗ ಪ್ರತಿನಿಧಿ
|
Google Oneindia Kannada News

ಚಿತ್ರದುರ್ಗ, ಅಕ್ಟೋಬರ್ 26: "ಸಿದ್ದರಾಮಯ್ಯ ವ್ಯಾಕರಣ ಮೇಷ್ಟ್ರು ಆದರೂ ಅವರಿಗೆ ಸರಿಯಾಗಿ ವ್ಯಾಕರಣ ಬರುವುದಿಲ್ಲ, ನಾವು ವ್ಯಾಕರಣ ಕಲಿತಿದ್ದೇವೆ. ನಾವು ಬಹುವಚನ, ಏಕವಚನ ಕಲಿತಿದ್ದೇವೆ, ಹಾಗಾಗಿ ನಾವು ಮರ್ಯಾದೆ ಕೊಟ್ಟು ಮಾತಾಡ್ತೀವಿ" ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಸಿದ್ದರಾಮಯ್ಯಗೆ ಪಾಠ ಹೇಳಿಕೊಟ್ಟಿದ್ದಾರೆ.

ಚಿತ್ರದುರ್ಗಕ್ಕೆ ಭೇಟಿ ನೀಡಿದ ಸಂದರ್ಭ ಮಾತನಾಡಿದ ಸುರೇಶ್ ಕುಮಾರ್, ಸಿದ್ದರಾಮಯ್ಯ ಸ್ಪೀಕರ್ ಗೆ ಏಕವಚನದಲ್ಲಿ ಮಾತಾಡಿದ್ದರ ಕುರಿತು ಹೀಗೆ ಪ್ರತಿಕ್ರಿಯೆ ನೀಡಿದರು.

ಓ ದೇವರೇ! ಸಿದ್ದರಾಮಯ್ಯ ಕಾಲೆಳೆದ ಸುರೇಶ್‌ ಕುಮಾರ್‌ಗೆ ಟ್ವಿಟ್ಟಿಗರ ತರಾಟೆಓ ದೇವರೇ! ಸಿದ್ದರಾಮಯ್ಯ ಕಾಲೆಳೆದ ಸುರೇಶ್‌ ಕುಮಾರ್‌ಗೆ ಟ್ವಿಟ್ಟಿಗರ ತರಾಟೆ

ಆರ್.ಸಿ.ಇ.ಪಿ. ಒಪ್ಪಂದದ ಕುರಿತೂ ಮಾತನಾಡಿ ಆರ್.ಸಿ‌.ಇ.ಪಿ ಟ್ರೇಡ್ ಅಗ್ರಿಮೆಂಟ್ ಜಾರಿಗೆ ಮುಂದಾಗಿರುವ ಕೇಂದ್ರ ಸರ್ಕಾರದ ನಿಲುವನ್ನು ವಿರೋಧಿಸಿದರು. "ರೈತರಿಗೆ ಅನ್ಯಾಯ ಆಗಲು ಬಿಡೋದಿಲ್ಲ, ರೈತರ ಪರವಾಗಿ ಜೊತೆಗೆ ಇರ್ತೀವಿ. ಸಚಿವ ಸಂಪುಟದ ಸಭೆಯಲ್ಲಿ ಚರ್ಚಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುತ್ತೇವೆ" ಎಂದರು.

Suresh Kumar Speaks About Siddaramaiah Grammer In Chitradurga

ಇದೇ ವೇಳೆ ಅನರ್ಹ ಶಾಸಕರ ಬಗ್ಗೆ ಪ್ರತಿಕ್ರಿಯಿಸಿ, "ಅನರ್ಹ ಶಾಸಕರ ಕುರಿತು ತೀರ್ಪಿಗಾಗಿ ಕಾಯುತ್ತಿದ್ದೇವೆ. ತೀರ್ಪು ಬಂದ ಮೇಲೆ ನಮ್ಮ ನಿರ್ಧಾರ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.

English summary
"Siddaramaiah dont know grammer So he speaks in singular meaning" said Education Minister suresh kumar in chitradurga,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X