ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಡಿಯೋ; ಚಿತ್ರದುರ್ಗ ಜಿಲ್ಲಾಸ್ಪತ್ರೆ ವಾರ್ಡ್‌ನಲ್ಲಿ ನಾಯಿ ಸಂಚಾರ

By ಚಿತ್ರದುರ್ಗ ಪ್ರತಿನಿಧಿ
|
Google Oneindia Kannada News

ಚಿತ್ರದುರ್ಗ, ಮೇ 25; ಕೋವಿಡ್ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ಬೆಡ್ ವ್ಯವಸ್ಥೆ ಇರುವುದಿಲ್ಲ, ಒಂದೊಂದು ಸಮಯದಲ್ಲಿ ಕುಳಿತುಕೊಳ್ಳಲು ಜಾಗವಿರುವುದಿಲ್ಲ. ಇಂತಹ ಸಂದರ್ಭದಲ್ಲಿ ಚಿತ್ರದುರ್ಗದ ಜಿಲ್ಲಾಸ್ಪತ್ರೆಯಲ್ಲಿ ಬೀದಿ ನಾಯಿಗಳ ಓಡಾಟ ನಡೆಸುತ್ತಿವೆ. ನಾಯಿಗಳ ಓಡಾಟದ ವಿಡಿಯೋ ವೈರಲ್ ಆಗಿದೆ.

Recommended Video

Corona ರೋಗಿಗಳ ಮಧ್ಯೆ ರಾಜಾರೋಷವಾಗಿ ಓಡಾಡುತ್ತಿವೆ Street dogs | Oneindia Kannada

ತಡರಾತ್ರಿ ಎರಡು ಗಂಟೆ ಸಮಯದಲ್ಲಿ ರೋಗಿಗಳು ಇರುವ ವಾರ್ಡ್‌ನಲ್ಲಿಯೇ ನಾಯಿಗಳು ಓಡಾಟ ನಡೆಸುತ್ತಿವೆ. ಜಿಲ್ಲಾಸ್ಪತ್ರೆಯಲ್ಲಿ ಏಲ್ಲಿ ನೋಡಿದರೂ ರಾಜಾ ರೋಷವಾಗಿ ನಾಯಿಗಳು ಓಡಾಡುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಕೋವಿಡ್ ನಿರ್ವಹಣೆಯಲ್ಲಿ ಚಿತ್ರದುರ್ಗ ಜಿಲ್ಲಾಡಳಿತ ವಿಫಲ ಕೋವಿಡ್ ನಿರ್ವಹಣೆಯಲ್ಲಿ ಚಿತ್ರದುರ್ಗ ಜಿಲ್ಲಾಡಳಿತ ವಿಫಲ

ಸುಮಾರು 5 ನಾಯಿಗಳ ಗುಂಪು ಆಸ್ಪತ್ರೆಯ ರೋಗಿಗಳ ವಾರ್ಡ್‌ನಲ್ಲಿ ಓಡಾಡಿವೆ. ನಾಲ್ಕೈದು ದಿನಗಳ ಹಿಂದೊಮ್ಮೆ ನಾಯಿಗಳ ಓಡಾಟದ ವೀಡಿಯೋ ಹರಿದಾಡಿತ್ತು. ಬೀದಿ ನಾಯಿಗಳ ಕಾಟ ಹೆಚ್ಚಾಗಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ ಎಂಬ ಆರೋಪ ಜನರದ್ದು.

ಚಿತ್ರದುರ್ಗ; ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಅವ್ಯವಸ್ಥೆಚಿತ್ರದುರ್ಗ; ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಅವ್ಯವಸ್ಥೆ

Stray Dogs Seen Inside Govt Hospital Wards In Chitradurga

ನಾಯಿಗಳ ಓಡಾಟ ನೋಡಿ ರೋಗಿಗಳು ಆಸ್ಪತ್ರೆ ಸಿಬ್ಬಂದಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪದೇ ಪದೇ ಜಿಲ್ಲಾಸ್ಪತ್ರೆಗೆ ನಾಯಿಗಳು ನುಗ್ಗುತ್ತಿದ್ದರು ಆರೋಗ್ಯಾಧಿಕಾರಿಗಳು ಮಾತ್ರ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ರೋಗಿಗಳ ಸಂಬಂಧಿಕರು ದೂರಿದ್ದಾರೆ.

"ನಾನು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದೆ, ರಾತ್ರಿ 2 ಗಂಟೆ ಸಮಯದಲ್ಲಿ ಸುಮಾರು ಐದು ನಾಯಿಗಳು ವಾರ್ಡ್ ಒಳಗಡೆ ಬಂದು ಓಡಾಟ ನಡೆಸಿದವು. ನಮಗೆ ರಾತ್ರಿಯೆಲ್ಲಾ ನಿದ್ದೆ ಬರಲಿಲ್ಲ. ಇಲ್ಲಿ ಯಾರು ಹೇಳುವವರು, ಕೇಳುವವರು ಇಲ್ಲ" ಎಂದು ರೋಗಿಯೊಬ್ಬರು ಒನ್ ಇಂಡಿಯಾ ಕನ್ನಡದ ಜೊತೆ ಮಾತನಾಡಿದ್ದಾರೆ.

English summary
In a Chitradurga government hospital stray dogs were seen inside the wards. Video went viral on social media.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X