ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರೈತರ ಮನವಿಗೆ ಅಧಿಕಾರಿಗಳ ಸ್ಪಂದನೆ, ವಿವಿ ಡ್ಯಾಂ ಕೋಡಿ ಬೀಳುವ ಜಾಗದಲ್ಲಿ ಪಿಚಿಂಗ್ ನಿರ್ಮಾಣ

By ಚಿತ್ರದುರ್ಗ ಪ್ರತಿನಿಧಿ
|
Google Oneindia Kannada News

ಚಿತ್ರದುರ್ಗ, ಆಗಸ್ಟ್‌ 16 : ಜಿಲ್ಲೆಯ ಹಿರಿಯೂರು ತಾಲ್ಲೂಕಿನ ವಾಣಿ ವಿಲಾಸ ಜಲಾಶಯ ಭರ್ತಿಗೆ ದಿನಗಣನೆ ಆರಂಭವಾಗಿದ್ದು, ಡ್ಯಾಂ ಕೋಡಿ ಬೀಳುವ ಹಂತದಲ್ಲಿದೆ. ಆದರೆ ಕೋಡಿ ಬೀಳುವ ಸ್ಥಳದಲ್ಲಿ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿರಲಿಲ್ಲ. 'ಕೋಡಿ ಜಾಗದಲ್ಲಿ ಪಿಚ್ಚಿಂಗ್ ನಿರ್ಮಿಸಿ' ಎಂದು ರೈತ ಮುಖಂಡರು ಆಗ್ರಹಿಸಿದ್ದ ವರದಿಯನ್ನು 'ಒನ್‌ಇಂಡಿಯಾ ಕನ್ನಡ' ವರದಿ ಬಿತ್ತರಿಸಿತ್ತು.

ಇದೀಗ ವರದಿ ಮತ್ತು ರೈತರ ಮನವಿಗೆ ಅಧಿಕಾರಿಗಳು ಸ್ಪಂದಿಸಿದ್ದು ಡ್ಯಾಂ ಕೋಡಿ ಬೀಳಲು ಜಾಗದಲ್ಲಿ ಐದಾರು ಜೆಸಿಬಿ ಯಂತ್ರಗಳ ಮೂಲಕ ಕಾಲುವೆ ತೆಗೆಸಿ, ನೀರು ಸರಾಗವಾಗಿ ಹರಿಯುವಂತೆ ಮಾಡಿದ್ದಾರೆ. ಕೋಡಿ ಬೀಳುವ ಸೇತುವೆಗೆ ಪ್ಯಾಚ್ ಹಾಕಲಾಗಿದೆ. ಮಣ್ಣು ಕೊರೆಯದಂತೆ ಕಲ್ಲಿನಿಂದ ತಡೆಗೋಡೆ ನಿರ್ಮಾಣ ಮಾಡಲಾಗಿದೆ. ಜೊತೆಗೆ ಸ್ವಚ್ಛತೆ ಹಾಗೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

ವಾಣಿ ವಿಲಾಸ ಜಲಾಶಯ ಕೋಡಿ ಬೀಳಲು ಕೆಲವು ಅಡಿಗಳು ಬಾಕಿ ಇದ್ದು, ಕೋಡಿ ಬೀಳಲು ಸ್ಥಳದಲ್ಲಿ ತಡೆಗೋಡೆ ಪಿಚ್ಚಿಂಗ್ ನಿರ್ಮಿಸದೇ ಅಧಿಕಾರಿಗಳು ಬೇಜವಾಬ್ದಾರಿ ತೋರಿದ್ದರು. ಇದಕ್ಕೆ ಜಲಾಶಯ ಕೋಡಿ ಬೀಳುವ ತಡೆಗೋಡೆಗೆ ಪಿಚ್ಚಿಂಗ್ ಇಲ್ಲದೆ ಇರುವುದರಿಂದ ಅಪಾಯ ಸಂಭವಿಸಬಹುದು ಎಂದು ಸಾಮಾಜಿಕ ಕಾರ್ಯಕರ್ತ ಕಸವನಹಳ್ಳಿ ರಮೇಶ್ ಆತಂಕ ವ್ಯಕ್ತಪಡಿಸಿದ್ದರು.

Stone Pitching Construction near Vani Vilas Dam for Water Going Smoothly

ಕೋಡಿಗೆ ನಿರ್ಮಿಸಿರುವ ತಡೆಗೋಡೆ ಪಿಚ್ಚಿಂಗ್ ಇಲ್ಲದೆ ಸುಮಾರು 140 ಮೀಟರ್ ಉದ್ದ ಹಾಗೂ ಐದು ಅಡಿ ಎತ್ತರ ಇದ್ದು, 1.2 ಮೀಟರ್ ಅಗಲ ಇರುವುದು ಸರಿ ಅಷ್ಟೇ. ಒಂದು ವೇಳೆ ಜಲಾಶಯದ ಮೇಲ್ಭಾಗದಲ್ಲಿ ಮಳೆ ಬಂದು ಹೆಚ್ಚಿನ ಪ್ರಮಾಣದ ನೀರು ಹರಿದು ಬಂದರೆ ವಾಣಿವಿಲಾಸ ಸಾಗರ ಭರ್ತಿಯಾಗಿ, ಕೋಡಿಗೆ ನಿರ್ಮಿಸಿರುವ ತಡೆ ಗೋಡೆಯ ಒಳಭಾಗ ಮತ್ತು ಹೊರಭಾಗದಲ್ಲಿ ಎರಡೂ ಕಡೆಯೂ ಪಿಚ್ಚಿಂಗ್ ಇಲ್ಲದೇ ಇರುವುದರಿಂದ 4 ಟಿಎಂಸಿ ನೀರಿನ ಒತ್ತಡ ತಡೆಗೋಡೆ ಮೇಲೆ ಬೀಳುತ್ತದೆ ಎಂದು ವಿವರಿಸಿದ್ದರು.

ವಾಣಿವಿಲಾಸ ಸಾಗರದ ಎರಡು ನಾಲೆಗಳು ಭರ್ತಿಯಾಗಿ ಅಕ್ಕಪಕ್ಕದ ಜಮೀನುಗಳು, ರಸ್ತೆಗಳು, ಗ್ರಾಮಗಳು, ಪ್ರಮುಖವಾಗಿ ಹಿರಿಯೂರು ನಗರ ಹಾಗೂ ವೇದಾವತಿ ನದಿ ದಡದಲ್ಲಿರುವ ಹಳ್ಳಿಗಳು, ಜಲಾವೃತವಾಗಿ ಅಪಾಯಕ್ಕೆ ಸಿಲುಕುವ ಸಂಭವವಿತ್ತು.

Stone Pitching Construction near Vani Vilas Dam for Water Going Smoothly

ಅಧಿಕಾರಿಗಳ ಜೊತೆ ಶಾಸಕಿ ಸಭೆ
ಐತಿಹಾಸಿಕ ವಾಣಿ ವಿಲಾಸ ಸಾಗರ ಜಲಾಶಯವು 88 ವರ್ಷಗಳ ನಂತರ 128 ಅಡಿಗಳಷ್ಟು ನೀರು ತುಂಬಿದ್ದು ಕೋಡಿ ಬೀಳುವ ಶುಭ ಸಂದರ್ಭ ಇರುವುದರಿಂದ ತಾಲ್ಲೂಕಿನಲ್ಲಿ ಮುಂದಿನ ಸುರಕ್ಷತೆ ಬಗ್ಗೆ ಶಾಸಕಿ ಕೆ. ಪೂರ್ಣಿಮಾ ಶ್ರೀನಿವಾಸ್ ಮಂಗಳವಾರ ತುರ್ತಾಗಿ ತಾಲ್ಲೂಕು ಮಟ್ಟದ ಅಧಿಕಾರಿಗಳ ಟಾಸ್ ಫೋರ್ಸ್ ಸಭೆ ಕರೆದು ಸುಧೀರ್ಘವಾಗಿ ಚರ್ಚೆ ನಡೆಸಿದರು.

Recommended Video

ವಿದೇಶಿ ಲೀಗ್ ನಲ್ಲಿ ಭಾಗಿಯಾಗ್ತಿರೋ ಧೋನಿಗೆ BCCI ಕೊಡ್ತು ಬಿಗ್ ಶಾಕ್! | OneIndia Kannada

ತಾಲ್ಲೂಕಿನಲ್ಲಿ ವಿವಿ ಪುರ ಸೇರಿ ಒಟ್ಟು 8 ಗ್ರಾಮ ಪಂಚಾಯಿತಿಗಳಲ್ಲಿ 9 ಗ್ರಾಮಗಳಾದ ವಿವಿ ಪುರ, ಕಾತ್ರಿಕೇನಹಳ್ಳಿ, ಲಕ್ಕವ್ವ ನಹಳ್ಳಿ, ಹಿರಿಯೂರು, ಮಾರುತಿ ನಗರ, ರಂಗನಾಥಪುರ, ಯಳನಾಡು, ಕೂಡ್ಲಹಳ್ಳಿ, ನದಿ ಪಾತ್ರದಲ್ಲಿರುವುದರಿಂದ ಇಂತಹ ಕಡೆ ಸಾರ್ವಜನಿಕರಿಗೆ ಎಲ್ಲ ರೀತಿಯ ಸುರಕ್ಷಿತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

English summary
After Farmers request, Officials constructed Stone Pitching near Vani Vilas dam for water to go smoothly,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X