ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೊದಲು ಸಿದ್ದರಾಮಯ್ಯ ರಾಜಕೀಯ ಮಾಡುವುದನ್ನು ನಿಲ್ಲಿಸಲಿ; ಶ್ರೀರಾಮುಲು

By ಚಿತ್ರದುರ್ಗ ಪ್ರತಿನಿಧಿ
|
Google Oneindia Kannada News

ಚಿತ್ರದುರ್ಗ, ಅಕ್ಟೋಬರ್ 4: ಜಿಲ್ಲೆಯ ಹಿರಿಯೂರು ನಗರದಲ್ಲಿ ಇಂದಿರಾ ಕ್ಯಾಂಟೀನನ್ನು ಇಂದು ಆರೋಗ್ಯ ಸಚಿವ ಶ್ರೀರಾಮುಲು ಉದ್ಘಾಟಿಸಿದರು. ನಗರದ ಖಾಸಗಿ ಬಸ್ ನಿಲ್ದಾಣ ಮುಂಭಾಗದಲ್ಲಿರುವ ಈ ಕ್ಯಾಂಟೀನ್ ವಿದ್ಯಾರ್ಥಿಗಳಿಗೆ, ಗ್ರಾಮೀಣ ಭಾಗದ ಜನರಿಗೆ ಉಪಯೋಗವಾಗಲಿದ್ದು ಶುಚಿತ್ವ, ಸ್ವಚ್ಛತೆ ಕಾಪಾಡಬೇಕು ಎಂದರು.

ಬರಪರಿಹಾರ ವಿಳಂಬ: ಇದೇ ಮೊದಲ ಬಾರಿಗೆ ಕ್ಷಮೆಯಾಚಿಸಿದ ಸಚಿವಬರಪರಿಹಾರ ವಿಳಂಬ: ಇದೇ ಮೊದಲ ಬಾರಿಗೆ ಕ್ಷಮೆಯಾಚಿಸಿದ ಸಚಿವ

ಇದೇ ಸಂದರ್ಭದಲ್ಲಿ, ನೆರೆ ಹಾವಳಿಗೆ ತತ್ತರಿಸಿ ಹೋಗಿರುವ ಉತ್ತರ ಕರ್ನಾಟಕಕ್ಕೆ ಕೇಂದ್ರದಿಂದ ಪರಿಹಾರ ಸಿಗುವುದು ವಿಳಂಬವಾಗುತ್ತಿರುವುದಕ್ಕೆ ಸಚಿವ ಶ್ರೀರಾಮುಲು ಬಹಿರಂಗವಾಗಿ ಕ್ಷಮೆ ಕೋರಿದರು. "ಕೇಂದ್ರಕ್ಕೆ 3500 ಕೋಟಿ ರೂಪಾಯಿ ಪ್ರಸ್ತಾವನೆ ಕಳುಹಿಸಿದ್ದೇವೆ. ಪರಿಹಾರ ಹಣ ಇಷ್ಟೊತ್ತಿಗೆ ಬರಬೇಕಿತ್ತು, ತಡವಾಗಿರೋದಕ್ಕೆ ಬಹಿರಂಗ ಕ್ಷಮೆ ಯಾಚಿಸುತ್ತೇನೆ. ಇನ್ನು ಎರಡು ಮೂರು ದಿನಗಳೊಳಗೆ ಕೇಂದ್ರದ ಪರಿಹಾರ ಬರುತ್ತದೆ. SDRF ನಿಯಮಾನುಸಾರ ಮನವಿ ಮಾಡಲಾಗಿದೆ" ಎಂದು ತಿಳಿಸಿದರು.

Sriramulu Speaks On Siddaramaiah Statement In Chitradurga

ಕೇಂದ್ರ ಸರ್ಕಾರ ಇದ್ದೂ ಸತ್ತಂತೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, "ಬರ ಪರಿಹಾರ ಕಾರ್ಯದಲ್ಲಿ ಯಾರೂ ರಾಜಕಾರಣ ಮಾಡಬಾರದು. ಪಕ್ಷಾತೀತವಾಗಿ ಎಲ್ಲರೂ ಸೇರಿ ಕೇಂದ್ರಕ್ಕೆ ನಿಯೋಗ ಹೋಗೋಣ. ರಾಜಕೀಯ ಮಾಡೋದನ್ನು ಸಿದ್ದರಾಮಯ್ಯ ನಿಲ್ಲಿಸಲಿ" ಎಂದರು.

ಉಡುಪಿಯಲ್ಲಿ ಪೀಠಾಧಿಪತಿಗಳೇ ನಾಚಿಸುವಂತೆ ಶ್ರೀರಾಮುಲು 'ಸ್ವಾಮೀಜಿ' ಗೆಟಪ್ಉಡುಪಿಯಲ್ಲಿ ಪೀಠಾಧಿಪತಿಗಳೇ ನಾಚಿಸುವಂತೆ ಶ್ರೀರಾಮುಲು 'ಸ್ವಾಮೀಜಿ' ಗೆಟಪ್

"ಸಿಎಂ ಯಡಿಯೂರಪ್ಪ ಖಜಾನೆ ಖಾಲಿ ಅಂತ ಹೇಳಿರೋದು ಬೇರೆ ಉದ್ದೇಶದಿಂದ. ಸಿಎಂ ಹೇಳಿಕೆಯನ್ನು ಮಾಧ್ಯಮಗಳಲ್ಲಿ ತಿರುಚಲಾಗಿದೆ" ಎಂದು ತಿಳಿಸಿದರು.

English summary
Responding to Siddaramaiah's statement that the central government is dead, sriramulu said that "No one should politicize the drought relief. siddaramiah should stop politizing the matter".
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X