• search
  • Live TV
ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪಕ್ಷಾಂತರ ಮಾಡುವ ಶಾಸಕರು ಅಯೋಗ್ಯರು: ದೊರೆಸ್ವಾಮಿ

|

ಚಿತ್ರದುರ್ಗ, ಜುಲೈ 09: ಪಕ್ಷಾಂತರ ಮಾಡುವ ಶಾಸಕರು ಅಯೋಗ್ಯರು, ನೀಚರು ಎಂದು ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಅವರು ಹೇಳಿದ್ದಾರೆ.

ಚಿತ್ರದುರ್ಗದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ದೊರೆಸ್ವಾಮಿ ಅವರು, ಪಕ್ಷಾಂತರ ಮಾಡುವ ಶಾಸಕರಿಗೆ ಜನರ ಬಗ್ಗೆ, ಸಂವಿಧಾನದ ಬಗ್ಗೆ ಗೌರವ ಇಲ್ಲ ಎಂದು ದೊರೆಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಮುಖಂಡರ ಜೊತೆ ಕಾಣಿಸಿಕೊಂಡ ಅನರ್ಹ ಶಾಸಕ ಮಹೇಶ್ ಕುಮಟಳ್ಳಿ

ಕಾಂಗ್ರೆಸ್ ಪಕ್ಷದ ವಿರುದ್ಧವೂ ಹರಿಹಾಯ್ದ ಅವರು, 'ಕಾಂಗ್ರೆಸ್ ಪಕ್ಷ ದಿವಾಳಿಯಾಗಿದೆ. ಆರೇಳು ಬಾರಿ ಗೆದ್ದವರನ್ನು ವ್ಯವಸ್ಥಿತವಾಗಿ ಸೋಲಿಸಲಾಗಿದೆ. ಕೆಲವರನ್ನು ಸೋಲಿಸಲೆಂದೇ ಮತಯಂತ್ರವನ್ನು ಬಳಕೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಐದು ವರ್ಷಗಳ ನಂತರ ಲೋಕಪಾಲವನ್ನು ಅಸ್ಥಿತ್ವಕ್ಕೆ ತಂದಿರುವ ಮೋದಿ ಅವರು, ಬೆದರುಗೊಂಬೆಯೊಂದನ್ನು ನೆಟ್ಟಿದ್ದಾರೆ. ದೇಶದಕ್ಕೆ ತುರ್ತಾಗಿ ಕ್ವಿಟ್ ಇಂಡಿಯಾ ಮಾದರಿಯ ಹೋರಾಟವೊಂದರ ಅವಶ್ಯಕತೆ ಇದೆ. ಆಗಸ್ಟ್‌ 14 ರಂದು ಮಧ್ಯರಾತ್ರಿ ಧ್ವಜಾರೋಹಣ ಮಾಡಿ ಚಳುವಳಿಗೆ ಪ್ರಾರಂಭ ಮಾಡುತ್ತೇವೆ ಎಂದು ದೊರೆಸ್ವಾಮಿ ಹೇಳಿದರು.*

English summary
Freedom fighter Doreswamy lambasted on MLAs who change the party for power. He said only shameless MLAs change the party for power.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X