• search
 • Live TV
ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಚಿತ್ರದುರ್ಗದಲ್ಲಿ ಸರಣಿ ಅಪಘಾತ; ಸ್ಥಳದಲ್ಲೇ ಇಬ್ಬರ ಸಾವು

By ಚಿತ್ರದುರ್ಗ ಪ್ರತಿನಿಧಿ
|

ಚಿತ್ರದುರ್ಗ, ನವೆಂಬರ್ 14: ಶನಿವಾರ ಬೆಳಗಿನ ಜಾವ ಒಂದು ಬಸ್, ಕಾರು ಹಾಗೂ ಕ್ಯಾಂಟರ್ ವಾಹನಗಳ ನಡುವೆ ಸರಣಿ ಅಪಘಾತ ಸಂಭವಿಸಿದ್ದು, ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ.

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಪಟ್ರೇಹಳ್ಳಿ ಸಮೀಪ ಗ್ರೀನ್ ಲ್ಯಾಂಡ್ ಹೋಟೆಲ್ ಹತ್ತಿರದ ರಾಷ್ಟ್ರೀಯ ಹೆದ್ದಾರಿ -4 ರಲ್ಲಿ ಈ ಅಪಘಾತ ನಡೆದಿದೆ.

ಖಾಸಗಿ ಬಸ್, ಇಂಡಿಕಾ ಕಾರು, ಮಾರುತಿ ಓಮ್ನಿ ಕಾರು ಹಾಗೂ ಕ್ಯಾಂಟರ್ ವಾಹನ ಹಾಗೂ ಟಾಟಾ ಏಸ್ ನಡುವೆ ಅಪಘಾತ ಸಂಭವಿಸಿದ್ದು, ಓಮಿನಿ ಕಾರಿನಲ್ಲಿದ್ದ ಹಾವೇರಿ ಮೂಲದ ಲತಾ(28) ಮತ್ತು ಬೆಂಗಳೂರಿನ ಅತ್ತಿಬೆಲೆ ನಿವಾಸಿ ಟಾಟಾ ಏಸ್ ಚಾಲಕ ಶಶಿಕುಮಾರ್(26) ಇಬ್ಬರು ಸಾವನ್ನಪ್ಪಿದ್ದಾರೆ.

ಶೃತಿ (03 ವರ್ಷ), ಜ್ಯೋತಿ (25 ವರ್ಷ), ಜಾಗೃತಿ (04 ವರ್ಷ), ದ್ಯಾಮಣ್ಣ (24) ವರ್ಷದವರು ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

   ಹಾಗಾದ್ರೆ ಈ ಆಟಗಾರರ ಭವಿಷ್ಯ !! | RCB | Oneindia Kannada

   ಖಾಸಗಿ ಬಸ್ ಚಾಲಕನ ಅಜಾಗರೂಕತೆಯೇ ಸರಣಿ ಅಪಘಾತಕ್ಕೆ ಕಾರಣ ಎಂದು ಹೇಳಲಾಗುತ್ತಿದ್ದು, ವಿಷಯ ತಿಳಿದ ತಕ್ಷಣ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಿರಿಯೂರು ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

   English summary
   A fatal accident on Saturday morning between a bus, a car and a canter vehicle has left two people dead on the spot in Chitradurga district.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X