ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಧಾನಸೌಧದ ಎದುರು ಕನಕದಾಸರ ಪುತ್ಥಳಿ

|
Google Oneindia Kannada News

ಚಿತ್ರದುರ್ಗ, ನವೆಂಬರ್ ೦6 : ವಿಧಾನಸೌಧದ ಮುಂದೆ ಕನಕದಾಸರ ಪುತ್ಥಳಿ ಪ್ರತಿಷ್ಠಾಪನೆಗೆ ಸಂಬಂಧಿಸಿದಂತೆ ಸಮಾಜ ಕಲ್ಯಾಣ ಖಾತೆ ಸಚಿವ ಎಚ್.ಆಂಜನೇಯ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿದ್ದು ಶೀಘ್ರದಲ್ಲಿಯೇ ಕನಕದಾಸರ ವಿಗ್ರಹ ವಿಧಾನಸೌಧದ ಅಂಗಳದಲ್ಲಿ ಕಾಣಿಸಿಕೊಳ್ಳಲಿದೆ.

ಎಚ್.ಆಂಜನೇಯ ಅವರು ಚಿತ್ರದುರ್ಗದಲ್ಲಿ ಆಯೋಜಿಸಿದ್ದ ಕನಕನ ಜಯಂತಿ ಕಾರ್ಯಕ್ರಮದಲ್ಲಿ ಈ ವಿಷಯ ಹೇಳಿದ್ದು, "ಮುಖ್ಯಮಂತ್ರಿ ಅವರೇ ಇನ್ನು ಕೆಲವು ದಿನಗಳಲ್ಲಿ ಅಧಿಕೃತವಾಗಿ ವಿಷಯ ತಿಳಿಸಲಿದ್ದಾರೆ' ಎಂದಿದ್ದಾರೆ.

Sculpture of Kanakadasa in front of Vidhanasawda: H.Anjaneya

ಕಾಂಗ್ರೆಸ್ ಪಕ್ಷದ ಅಧಿಕಾರಾವದಿಯಲ್ಲೇ ಪುತ್ಥಳಿ ನಿರ್ಮಾಣಗೊಂಡು ಅನಾವರಣವೂಗೊಳ್ಳಲಿದೆ ಎಂಬ ಭರವಸೆಯನ್ನೂ ಅವರು ಈ ಸಮಯದಲ್ಲಿ ನೀಡಿದ್ದಾರೆ.

ಹುಚ್ಚ ಅಲ್ಲ ಎಚ್.ಆಂಜನೇಯ
ಶ್ರೀನಿವಾಸ್ ಪ್ರಸಾದ್ ಅವರು ತಮ್ಮನ್ನು ಹುಚ್ಚ ಆಂಜನೇಯ ಎಂದು ಕರೆದಿದ್ದರ ಬಗ್ಗೆ ಪ್ರತಿಕ್ರಿಯಿಸಿದ ಅವರು, "ಶ್ರೀನಿವಾಸ್ ಅವರ ಆ ಹೇಳಿಕೆಯಿಂದಲೇ ಅವರ ಮಾನಸಿಕ ಸ್ಥಿತಿ ಎಂತಹುದ್ದು ಎಂದು ಅರ್ಥ ಮಾಡಿಕೊಳ್ಳಬಹುದು. ಹಿಂದೆ ಅವರು ಚುನಾವಣೆಗೆ ಸ್ಪರ್ಧಿಸಿದ್ದಾಗ ಜನ ಹೇಗೆ ಪಾಠ ಕಲಿಸಿದ್ದರು ಎಂಬುದನ್ನು ನೆನೆಸಿಕೊಳ್ಳುವುದು ಉತ್ತಮ' ಎಂದು ತಿರುಗೇಟು ನೀಡಿದ್ದಾರೆ.

Sculpture of Kanakadasa in front of Vidhanasawda: H.Anjaneya

ಶ್ರೀನಿವಾಸ್ ಪ್ರಸಾದ್ ಅವರು ಎಚ್.ಆಂಜನೇಯ ಕುರಿತು 'ಮುಖ್ಯಮಂತ್ರಿಗಳ ಸೇವಕ' ಎಂದಿದ್ದಕ್ಕೂ ಪ್ರತಿಕ್ರಿಯಿಸಿದ ಸಚಿವರು "ನಾನು ಮೊದಲು ಜನಸೇವಕ, ನಂತರ ಸಿ.ಎಂ ಸಂಪುಟದಲ್ಲಿ ಸದಸ್ಯನಾಗಿರುವ ಕಾರಣ ನಾನು ಸರ್ಕಾರದ ಸೇವಕ' ಎಂದಿದ್ದಾರೆ.

English summary
Minister H.Anjeneya said that he talked to CM Sidharamaiha about establishing Sculpture of Kanakadasa in Vidhansowda and CM agrees to the Idea.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X