ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿತ್ರದುರ್ಗದಲ್ಲಿ ವಿದ್ಯಾರ್ಥಿಗಳಿಗೆ ಅದ್ಧೂರಿ ಸ್ವಾಗತ ಕೋರಿದ ಕಾಲೇಜು ಸಿಬ್ಬಂದಿ

By ಚಿತ್ರದುರ್ಗ ಪ್ರತಿನಿಧಿ
|
Google Oneindia Kannada News

ಚಿತ್ರದುರ್ಗ, ಜನೆವರಿ 1: ಆರೋಗ್ಯ ಇಲಾಖೆ ನೀಡಿರುವ ಮಾರ್ಗಸೂಚಿಯಂತೆ ಇಂದಿನಿಂದ ರಾಜ್ಯಾದ್ಯಂತ ಶಾಲಾ-ಕಾಲೇಜುಗಳು ಆರಂಭವಾಗಿವೆ. 10 ತಿಂಗಳ ಬಳಿಕ ಬ್ಯಾಗ್ ಹಿಡಿದು ಮಕ್ಕಳು ವಿದ್ಯಾ ದೇಗುಲದತ್ತ ಹೆಜ್ಜೆ ಹಾಕಿದ್ದಾರೆ.

ಶಿಕ್ಷಣ ಇಲಾಖೆಯು ವಿಶೇಷ ಸಿದ್ಧತೆಯೊಂದಿಗೆ ಮಾವಿನ ತೋರಣ, ಬಾಳೆ ಕಂದು, ಬಲೂನ್, ಗ್ರೀನ್ ಕಾರ್ಪೇಟ್ ಹಾಗೂ ಬಣ್ಣಬಣ್ಣದ ತೋರಣಗಳಿಂದ ಶಾಲೆಗಳು ಮದುವಣಗಿತ್ತಿಯಂತೆ ಸಿಂಗಾರಗೊಂಡಿವೆ. ಹೊಸ ವರ್ಷದ ಮೊದಲ ದಿನ ಮಕ್ಕಳು ಸಂತಸದಿಂದ ತಮ್ಮ ತಮ್ಮ ತರಗತಿಗಳಿಗೆ ಬರುತ್ತಿದ್ದಾರೆ.

School And College Start In Chitradurga: A Huge Welcome For Students

ಜ.1ರಿಂದ ಶಾಲಾ-ಕಾಲೇಜು ಆರಂಭ: ರಂಗೋಲಿ ಹಾಕಿ ವಿದ್ಯಾರ್ಥಿಗಳಿಗೆ ಸ್ವಾಗತಜ.1ರಿಂದ ಶಾಲಾ-ಕಾಲೇಜು ಆರಂಭ: ರಂಗೋಲಿ ಹಾಕಿ ವಿದ್ಯಾರ್ಥಿಗಳಿಗೆ ಸ್ವಾಗತ

ಚಿತ್ರದುರ್ಗ ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಬಲೂನ್ ಕಟ್ಟಿ ವಿದ್ಯಾರ್ಥಿಗಳನ್ನು ಸ್ವಾಗತಿಸಲಾಗಿದೆ. ಶಾಲಾ ಹಾಗೂ ಕಾಲೇಜಿನ ಪ್ರವೇಶ ದ್ವಾರದಲ್ಲಿ ನಿಂತು ವಿದ್ಯಾರ್ಥಿಗಳನ್ನು ಗುಲಾಬಿ ಹೂ ನೀಡುವ ಮೂಲಕ ಆತ್ಮೀಯವಾಗಿ ಶಿಕ್ಷಕರು ಬರಮಾಡಿಕೊಂಡರು.

ಕೋವಿಡ್ ನಿಯಮಗಳ ಪಾಲಿಸಿಕೊಂಡು ಸ್ಯಾನಿಟೈಸರ್, ಥರ್ಮಲ್ ಸ್ಕ್ಯಾನಿಂಗ್, ಟೆಸ್ಟ್ ಮಾಡಿ ಕೊರೊನಾ ಬಗ್ಗೆ ತಿಳಿ ಹೇಳುತ್ತಿದ್ದರು. ಚಿತ್ರದುರ್ಗ ಜಿಲ್ಲೆಯ ಹಿರಿಯೂರು, ಚಳ್ಳಕೆರೆ, ಮೊಳಕಾಲ್ಮೂರು, ಹೊಸದುರ್ಗ ಹಾಗೂ ಹೊಳಲ್ಕೆರೆ ತಾಲ್ಲೂಕಿನ ಎಲ್ಲ ಕಡೆಯೂ ಕಾಲೇಜುಗಳು ಪ್ರಾರಂಭವಾಗಿದ್ದವು.

Recommended Video

ಭಾರತ ಕ್ರಿಕೆಟ್ ತಂಡ ಆಸ್ಟ್ರೇಲಿಯಾದಲ್ಲಿ ಹೊಸ ವರ್ಷದ ಆಗಮನ‌ ಮಾಡಿದ್ದು ಹೇಗೆ | Oneindia Kannada

English summary
Students have been warmly welcomed at Chitradurga City Girls' Government PU College.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X