ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬ್ರಹ್ಮಾಂಡ ಗುರುಗಳು ಅದ್ಯಾವ ಮುಖ ಇಟ್ಟುಕೊಂಡು ಭವಿಷ್ಯ ನುಡಿದರೋ?

|
Google Oneindia Kannada News

ಚಿತ್ರದುರ್ಗ, ಮೇ 28: ಕೊಡಗು ಜಿಲ್ಲೆ ನಲುಗಿ ಹೋಗಲಿದೆ ಎನ್ನುವ ಬ್ರಹ್ಮಾಂಡ ಗುರುಗಳ ಭವಿಷ್ಯದ ಬಗ್ಗೆ ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗಳು ಫುಲ್ ಗರಂ ಆಗಿದ್ದಾರೆ.

"ಇಂತಹ ಆರೋಗ್ಯ ಎಮರ್ಜೆನ್ಸಿಯ ವೇಳೆ, ಸುಳ್ಳು ಸೃಷ್ಟಿಸುವವರ ದೊಡ್ಡ ಗುಂಪೇ ಹುಟ್ಟಿಕೊಂಡಿದೆ"ಎಂದು ಸಾಣೇಹಳ್ಳಿ ಶ್ರೀಗಳು ಬೇಸರ ವ್ಯಕ್ತ ಪಡಿಸಿದ್ದಾರೆ.

ಮಹಾಮಾರಿ ಕೊರೊನಾ: ಬ್ರಹ್ಮಾಂಡ ಗುರೂಜಿಗಳ ಭಯಾನಕ ಭವಿಷ್ಯಮಹಾಮಾರಿ ಕೊರೊನಾ: ಬ್ರಹ್ಮಾಂಡ ಗುರೂಜಿಗಳ ಭಯಾನಕ ಭವಿಷ್ಯ

ಬ್ರಹ್ಮಾಂಡ ಗುರುಗಳು ಆಲಿಯಾಸ್ ನರೇಂದ್ರ ಬಾಬು ಶರ್ಮಾ, ಚಿತ್ರದುರ್ಗ ಜಿಲ್ಲೆ, ಹೊಸದುರ್ಗದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ, ಭೂಕಂಪ ಮತ್ತು ಕೊರೊನಾ ಬಗ್ಗೆ ಭಯಾನಕ ಭವಿಷ್ಯವನ್ನು ನುಡಿದಿದ್ದರು.

ಬ್ರಹ್ಮಾಂಡ ಗುರೂಜಿ ವಿರುದ್ಧ ಕೊಡಗಿನಲ್ಲಿ ದೂರು ದಾಖಲುಬ್ರಹ್ಮಾಂಡ ಗುರೂಜಿ ವಿರುದ್ಧ ಕೊಡಗಿನಲ್ಲಿ ದೂರು ದಾಖಲು

"ಇಂತವರ ಭವಿಷ್ಯವನ್ನು ಕೇಳಿ ಜನರು ದಡ್ಡರಾಗಬಾರದು"ಎಂದು ಸಾಣೇಹಳ್ಳಿ ಶ್ರೀಗಳು ಜಿಲ್ಲೆಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಹೇಳಿದ್ದಾರೆ. ನರೇಂದ್ರ ಶರ್ಮಾ ಬಗ್ಗೆ ಸಾಣೇಹಳ್ಳಿ ಶ್ರೀಗಳು ಹೇಳಿದ್ದು:

ಕೊಡಗು ಜಿಲ್ಲೆಯಲ್ಲಿ ಮತ್ತೆ ಭೂಕಂಪನ

ಕೊಡಗು ಜಿಲ್ಲೆಯಲ್ಲಿ ಮತ್ತೆ ಭೂಕಂಪನ

ಎರಡು ವರ್ಷಗಳ ಹಿಂದಿನ ಅತಿವೃಷ್ಟಿಯಿಂದ ಇನ್ನೂ ಸರಿಯಾಗಿ ಚೇತರಿಸಿಕೊಳ್ಳದ ಕೊಡಗು ಜಿಲ್ಲೆಯಲ್ಲಿ ಮತ್ತೆ ಭೂಕಂಪನ ಆಗಲಿದ್ದು, ತುಂಬಾ ತೊಂದರೆಯಾಗಲಿದೆ. ಸಂಪೂರ್ಣ ಕೊಡಗು ಮತ್ತೆ ನಲುಗಿ ಹೋಗಲಿದೆ ಎಂದು ನರೇಂದ್ರ ಬಾಬು ಶರ್ಮಾ ಹೇಳಿದ್ದರು. ಇವರು ನುಡಿದ ಭವಿಷ್ಯಕ್ಕೆ ಕೊಡಗು ಜಿಲ್ಲೆಯ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಬ್ರಹ್ಮಾಂಡ ಗುರುಗಳು ಆಲಿಯಾಸ್ ನರೇಂದ್ರ ಬಾಬು ಶರ್ಮಾ

ಬ್ರಹ್ಮಾಂಡ ಗುರುಗಳು ಆಲಿಯಾಸ್ ನರೇಂದ್ರ ಬಾಬು ಶರ್ಮಾ

ಬ್ರಹ್ಮಾಂಡ ಭವಿಷ್ಯದ ಬಗ್ಗೆ ಬೇಸರ ವ್ಯಕ್ತ ಪಡಿಸಿರುವ ಸಾಣೇಹಳ್ಳಿ ಪಂಡಿತಾರಾಧ್ಯ ಶ್ರೀಗಳು, "ಕೊಡಗು ಜಿಲ್ಲೆಯ ಬಗ್ಗೆ ಭವಿಷ್ಯ ನುಡಿಯುವ ಬ್ರಹ್ಮಾಂಡ ಗುರೂಜಿ, ಕೂರೊನಾ ಬಗ್ಗೆ ಯಾಕೆ ಭವಿಷ್ಯವನ್ನು ನುಡಿಯಲಿಲ್ಲ. ಈ ಬಗ್ಗೆಯೂ ಜನರಿಗೆ ಮುನ್ಸೂಚನೆಯನ್ನು ನೀಡಬಹುದಿತ್ತಲ್ಲವೇ"ಎಂದು ಪ್ರಶ್ನಿಸಿದ್ದಾರೆ.

ಸಾಣೇಹಳ್ಳಿ ಶ್ರೀಗಳು

ಸಾಣೇಹಳ್ಳಿ ಶ್ರೀಗಳು

"ಅದ್ಯಾವ ಮುಖ ಇಟ್ಟುಕೊಂಡು ಬ್ರಹ್ಮಾಂಡ ಗುರುಗಳು ಭವಿಷ್ಯ ನುಡಿದರೋ ಗೊತ್ತಿಲ್ಲ. ಢೋಂಗಿ ಬಾಬಾಗಳು, ಹಸ್ತಮುದ್ರಿಕೆ ಹೇಳುವವರು ಇಂತಹ ಸಮಯವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇಂತವರ ದೊಡ್ಡ ದಂಡೇ ಇದೆ. ಮೊದಲು ಇಂತವರು ಮೈಬಗ್ಗಿಸಿ ಕೆಲಸ ಮಾಡುವುದನ್ನು ಕಲಿಯಬೇಕು"ಎಂದು ಸಾಣೇಹಳ್ಳಿ ಶ್ರೀಗಳು ಹೇಳಿದ್ದಾರೆ.

ಇದು ಕೊರೊನಾ ಅಲ್ಲ, ಕೌಮಾರಿ

ಇದು ಕೊರೊನಾ ಅಲ್ಲ, ಕೌಮಾರಿ

ಕೊರೊನಾ ಬಗ್ಗೆ ಬ್ರಹ್ಮಾಂಡ ಗುರುಗಳು ಹೇಳಿದ್ದರು. "ಇದು ಕೊರೊನಾ ಅಲ್ಲ, ಕೌಮಾರಿ. ಈ ಕೌಮಾರಿಯ ಶಾಂತಿಗಾಗಿ ಎಲ್ಲಾ ದೇವಾಲಯಗಳಲ್ಲೂ ವಿಶೇಷ ಪೂಜೆ ನಡೆಯಬೇಕಿದೆ" ಎಂದು ಹೇಳಿದ್ದ ಬ್ರಹ್ಮಾಂಡ ಗುರುಗಳು, ಇದರಿಂದ ಮುಕ್ತಿಯ ಬಗ್ಗೆ ಏನನ್ನೂ ಹೇಳಿರಲಿಲ್ಲ.

English summary
Sanehalli Swamiji Upset With Brahmanda Nagendra Sharma Prediction On Kodagu.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X