• search
 • Live TV
ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಚಿತ್ರದುರ್ಗದ ಡಿ.ಆರ್.ಡಿ.ಒ ಘಟಕದಲ್ಲಿ ರುಸ್ತುಂ-2 ಡ್ರೋನ್ ಯಶಸ್ವಿ ಪ್ರಯೋಗ: ಚೀನಾಗೆ ಸೆಡ್ಡು

By ಚಿತ್ರದುರ್ಗ ಪ್ರತಿನಿಧಿ
|

ಚಿತ್ರದುರ್ಗ, ಅಕ್ಟೋಬರ್ 11: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿ.ಆರ್.ಡಿ.ಒ) ತಯಾರಿಸಿರುವ ರುಸ್ತುಂ-2 ಡ್ರೋನ್ ಪ್ರಯೋಗ ಯಶಸ್ವಿಯಾಗಿದೆ. ಚಿತ್ರದುರ್ಗದ ಡಿ.ಆರ್.ಡಿ.ಓ ಘಟಕದಲ್ಲಿ ಶುಕ್ರವಾರ ಈ ಪ್ರಯೋಗ ನಡೆದಿದೆ.

ಮಧ್ಯಮ ಎತ್ತರದಲ್ಲಿ ಹಾರಾಟ ನಡೆಸುವ ಸಾಮರ್ಥ್ಯದ ಈ ಡ್ರೋನ್, ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿ ಬಳಿ ಇರುವ ಡಿ.ಆರ್.ಡಿ.ಒ ಸಂಸ್ಥೆ ವೈಮಾನಿಕ ಪರೀಕ್ಷಾ ಕೇಂದ್ರದಲ್ಲಿ 16,000 ಅಡಿ ಎತ್ತರದಲ್ಲಿ ಎಂಟು ಗಂಟೆಗಳ ಕಾಲ ಹಾರಾಟ ನಡೆಸುವ ಮೂಲಕ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಿದೆ.

ಒಂದು ಗಂಟೆ ಕಾಲ ಹಾರಾಟ ನಡೆಸುವಷ್ಟು ಇಂಧನ ಅದರಲ್ಲಿ ಉಳಿದಿತ್ತು ಎಂದು ತಿಳಿದು ಬಂದಿದೆ. ಚೀನಾ ದೇಶಕ್ಕೆ ಪ್ರಬಲ ಪೈಪೋಟಿ ಮೂಲಕ ಎದಿರೇಟು ನೀಡಲು ಇದನ್ನು ಅಭಿವೃದ್ಧಿ ಪಡಿಸಲಾಗಿದೆ.

ಈ ವರ್ಷದ ಕೊನೆಯಲ್ಲಿ ಡ್ರೋನ್ 26,000 ಅಡಿ ಎತ್ತರದಲ್ಲಿ 18 ಗಂಟೆ ಕಾಲ ಹಾರಾಟ ನಡೆಸುವ ಸಾಮರ್ಥ್ಯವನ್ನು ಹೊಂದಿದೆ. ಕಾರ್ಯಾಚರಣೆಯನ್ನು ಆಧರಿಸಿ ವಿವಿಧ ಪ್ರಮಾಣದ ತೂಕದ ಸಾಧನ-ಸಲಕರಣೆಗಳನ್ನು ಒಯ್ಯುವ ಶಕ್ತಿ ರುಸ್ತಂಗಿದೆ.

   ಹೇಳ್ದೆ ಕೇಳ್ದೆ ಕೊಟ್ರು ನೋಡಿ Ramuluge Shock!! | Oneindia Kannada

   ಡಿ.ಆರ್.ಡಿ.ಒ ತಯಾರಿಸಿರುವ ರುದ್ರಂ ಹೆಸರಿನ ವಿಕಿರಣ ಪ್ರತಿಬಂಧಕ ಕ್ಷಿಪಣಿಯ ಪರೀಕ್ಷೆಯನ್ನು ಶುಕ್ರವಾರ ನಡೆಸಲಾಗಿತ್ತು. ರುಸ್ತುಂ ಕೂಡ ಶುಕ್ರವಾರ ಪರೀಕ್ಷೆಗೆ ಒಳಪಟ್ಟಿತ್ತು. ಒಂದೇ ದಿನ ಎರಡು ರಕ್ಷಣಾ ಮಹತ್ವದ ಪರಿಕ್ಷಾರ್ಥ ಪ್ರಯೋಗ ನಡೆದಂತಾಗಿದೆ.

   English summary
   The Rustom-2 drone trial prepared by the Defense Research and Development Organization (DRDO) has been successful. The experiment took place on Friday at the DRDO unit of Chitradurga.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X