ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೆಣ್ಣು ಮಕ್ಕಳ ಬ್ಯಾಂಕ್ ಖಾತೆಗೆ ಮೋದಿಯಿಂದ 2 ಲಕ್ಷ; ಚಿತ್ರದುರ್ಗದಲ್ಲಿ ಹೀಗೊಂದು ವದಂತಿ

By ಚಿತ್ರದುರ್ಗ ಪ್ರತಿನಿಧಿ
|
Google Oneindia Kannada News

ಚಿತ್ರದುರ್ಗ, ಜುಲೈ 12: ಓದುತ್ತಿರುವ ಹೆಣ್ಣುಮಕ್ಕಳ ಬ್ಯಾಂಕ್‌ ಖಾತೆಗೆ ಪ್ರಧಾನಿ ನರೇಂದ್ರ ಮೋದಿ 2 ಲಕ್ಷ ರೂಪಾಯಿ ಕೊಡುತ್ತಾರೆ ಎಂಬ ಸುದ್ದಿ ಚಿತ್ರದುರ್ಗದಲ್ಲಿ ಹರಿದಾಡುತ್ತಿದ್ದು, ಪೋಷಕರು ಅರ್ಜಿ ಹಾಗೂ ದಾಖಲೆಗಳನ್ನು ಶಾಲೆಗಳಲ್ಲಿ ಶಿಕ್ಷಕರಿಂದ ಭರ್ತಿ ಮಾಡಿಸಿಕೊಂಡು ದೆಹಲಿ ವಿಳಾಸಕ್ಕೆ ಕಳುಹಿಸುತ್ತಿದ್ದಾರೆ ಎನ್ನಲಾಗಿದೆ.

8 ವರ್ಷದಿಂದ 32 ವರ್ಷದವರೆಗಿನ, ಓದುವ ಹೆಣ್ಣುಮಕ್ಕಳ ಬ್ಯಾಂಕ್‌ ಖಾತೆಗೆ ಮೋದಿ 2 ಲಕ್ಷ ಕೊಡುತ್ತಾರೆಂಬ ಸುದ್ದಿಯಿಂದಾಗಿ, ನವದೆಹಲಿಯ ವಿಳಾಸಕ್ಕೆ ಕಳಿಸಲು ಹಿಂದಿ ಭಾಷೆಯ ಅರ್ಜಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ಫೋಟೊ, ಶಾಲಾ ದಾಖಲಾತಿ, ವಿವಿಧ ದಾಖಲಾತಿಗಳನ್ನು ಒಳಗೊಂಡ ಲಕೋಟೆ ಹಿಡಿದು ಪೋಷಕರು ಅಂಚೆ ಕಚೇರಿಗೆ ಅಲೆದಾಡುತ್ತಿದ್ದಾರೆಂದು ತಿಳಿದುಬಂದಿದೆ. ಅರ್ಜಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕಚೇರಿ ವಿಳಾಸವಿದೆ ಎನ್ನಲಾಗಿದೆ.

ವದಂತಿಯನ್ನು ನಂಬಿರುವ ಪೋಷಕರು ದಿನಗಟ್ಟಲೆ ಕೆಲಸ ಬಿಟ್ಟು ಯೋಜನೆ ಸಿಗುತ್ತದೆಂದು ಅರ್ಜಿ ಹಾಕುವಲ್ಲೇ ನಿರತರಾಗಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಶಾಲಾ ಕಾಲೇಜುಗಳ ಶಿಕ್ಷಕರನ್ನು ಸಂಪರ್ಕಿಸಿದಾಗ, ಫೋಷಕರು ಮತ್ತು ಕಾಲೇಜು ವಿದ್ಯಾರ್ಥಿನಿಯರು ಅರ್ಜಿ ತುಂಬಿಸಿಕೊಂಡು ಹೋಗುತ್ತಿರುವುದಾಗಿ ಮಾಹಿತಿ ನೀಡಿದ್ದಾರೆ. ಇನ್ನೂ ಕೆಲವು ಶಿಕ್ಷಕರು ಇದು ಸುಳ್ಳು ವದಂತಿ, ಇದರೆಡೆ ಗಮನ ಹರಿಸಬೇಡಿ ಎಂದು ಹೆಣ್ಣುಮಕ್ಕಳಿಗೆ ತಿಳಿಸಿದ್ದಾರೆ.

rumour of 2 lakhs for studying girls bank account from Modi in chitradurga

ಈ ಕುರಿತು ನಮ್ಮ ಇಲಾಖೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಯಾವುದೇ ಆದೇಶ ಬಂದಿಲ್ಲ, ಈ ವದಂತಿ ಬಗ್ಗೆ ಕಿವಿ ಕೊಡಬೇಡಿ ಎಂದು ಶಾಲೆಗಳಿಗೆ ಮಾಹಿತಿ ನೀಡಲಾಗುವುದೆಂದು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಓದುವ ಹೆಣ್ಣುಮಕ್ಕಳ ಬ್ಯಾಂಕ್‌ ಖಾತೆಗೆ ಹಣ ಹಾಕುವ ಯೋಜನೆ ವಿಚಾರದ ಕುರಿತು ಸಂಬಂಧಿಸಿದ ಅಧಿಕಾರಿಗಳು ಮತ್ತು ಇಲಾಖೆಗಳು ಶೀಘ್ರವೇ ಸ್ಪಷ್ಟ ಮಾಹಿತಿ ನೀಡಬೇಕು. ಗೊಂದಲ ಉಂಟಾಗದಂತೆ ನೋಡಿಕೊಳ್ಳಬೇಖು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

English summary
There is a rumour in chitradurga that modi is giving 2 lakhs to studying girls bank account. but there is no such order came from central or state government clarified education department officers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X