ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಲಿತರಿಗೆ ಹಿಂದೂಗಳಲ್ಲ ಎನ್ನುವ ಮನಸ್ಥಿತಿ ತುಂಬಲಾಗುತ್ತಿದೆ: ಭಗವತ್

By ಚಿತ್ರದುರ್ಗ ಪ್ರತಿನಿಧಿ
|
Google Oneindia Kannada News

ಚಿತ್ರದುರ್ಗ, ಜುಲೈ 12: "ರಾಷ್ಟ್ರದಲ್ಲಿ ಮತಾಂತರ ಮಾಡುವ ಕಾರ್ಯ ನಡೆಯುತ್ತಿದೆ ಅದನ್ನು ತಡೆಗಟ್ಟುವ ಕೆಲಸ ಮಾಡಬೇಕಾಗಿದೆ" ಎಂದು ಆರ್‌ಎಸ್‌ಎಸ್ ಸರಸಂಘಚಾಲಕ ಮೋಹನ್ ಭಾಗವತ್ ಹೇಳಿದ್ದಾರೆ.

ಚಿತ್ರದುರ್ಗದ ಮಾದಾರ ಚೆನ್ನಯ್ಯ ಗುರುಪೀಠದಲ್ಲಿ ದಲಿತ ಹಾಗೂ ಹಿಂದುಳಿದ ವರ್ಗಗಳ ಮಠಾಧೀಶರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಚಿತ್ರದುರ್ಗ: 8 ವರ್ಷ ಗತಿಸಿದರೂ ಕಾರ್ಯರೂಪಕ್ಕೆ ಬಾರದ ಅತಿಥಿಗೃಹ ಚಿತ್ರದುರ್ಗ: 8 ವರ್ಷ ಗತಿಸಿದರೂ ಕಾರ್ಯರೂಪಕ್ಕೆ ಬಾರದ ಅತಿಥಿಗೃಹ

"ಮಾದಾರ ಚನ್ನಯ್ಯ ಸ್ವಾಮೀಜಿಗಳು ನನಗೆ ಹಲವು ಆಹ್ವಾನ ನೀಡಿದ್ದರು. ಬಂದಿರಲಿಲ್ಲ ಇದೀಗ ಯೋಗ ಈಗ ಕೂಡಿ ಬಂದಿದೆ. ಹಿಂದುಳಿದ, ದಲಿತ ಎಂಬ ಪಿಡುಗುಗಳು ಹುಟ್ಟಬೇಕು ಎಂಬುದು ಇರಲಿಲ್ಲ ಇವರೆಡರಲ್ಲಿ ಸಂಪರ್ಕ ತಪ್ಪಿ ಹೋದ ಪರಿಣಾಮ ದಲಿತ ಹಿಂದುಳಿದ ವರ್ಗಗಳು ಬದಲಾಗಿವೆ" ಎಂದರು.

RSS Chief Mohan Bhagwat Comment On Dalits And Hindu

"ರಾಷ್ಟ್ರದಲ್ಲಿ ಈಡೀ ಸಮಾಜ ಒಂದಾಗಿ ಹೋಗಬೇಕು. ಅದು ಏನಾದರೂ ತಪ್ಪು ದಾರಿಯಲ್ಲಿ ಹೋದರೆ ಅದನ್ನು ತಿದ್ದುವ ಕೆಲಸವನ್ನು ನಾವು ಮಾಡಬೇಕು. ಪರಸ್ಪರ ಪ್ರೀತಿಯಿಂದ ಬಾಳುವುದರ ಮೂಲಕ ನಮ್ಮಲ್ಲಿನ ಅಂತರ ಹೋಗಲಾಡಿಸಬೇಕು. ಸಮಾಜವನ್ನು, ರಾಷ್ಟ್ರವನ್ನು ಕಟ್ಟುವ ಕೆಲಸವನ್ನು ನಾವು ಮಾಡಬೇಕಿದೆ‌" ಎಂದು ಹೇಳಿದರು.

"ರಾಷ್ಟ್ರ ಕಟ್ಟುವ ದೃಷ್ಟಿಯಿಂದ ಚಿಂತನೆ ನಡೆಸಲು ನಾವು ಇಲ್ಲಿ ಸೇರಿದ್ದೇವೆ. ನಮ್ಮ ನೀತಿ ಎಲ್ಲರಿಗೂ ಅನುಕೂಲವಾಗುವಂತಹ ದೃಷ್ಟಿಯಿಂದ ಕೆಲಸ ಮಾಡಬೇಕು ಬದಲಾಗಿ ನಮಗೆ ಲಾಭದ ಲೆಕ್ಕಾಚಾರವಿಲ್ಲ. ಸಂಘ ಪ್ರಾರಂಭವಾದ ಮೊದಲ ದಿನಗಳಲ್ಲಿ ಪರಿಸ್ಥಿತಿ ಸರಿಯಿರಲಿಲ್ಲ, ಆದರೆ ಈಗ ಕಾಲ ಬದಲಾಗಿದೆ. ಎಲ್ಲಾ ಕಡೆ ಹೋಗಲು ಅನುಮತಿ ಇದೆ. ನಮ್ಮ ಆಚಾರ ವಿಚಾರ ಪೂಜಾ ವಿಧಾನ ಬೇರೆ-ಬೇರೆ ಇರಬಹುದು. ಆದರೆ ನಾವೆಲ್ಲ ಒಂದೇ, ನಾವೆಲ್ಲ ಸೇರಿ ಬಲಿಷ್ಠ ರಾಷ್ಟ್ರವನ್ನು ಕಟ್ಟಬೇಕಾಗಿದೆ. ನಮ್ಮ ರಾಷ್ಟ್ರ ವಿವಿಧತೆಯಿಂದ ಕೂಡಿದ ರಾಷ್ಟ್ರ ಆದರೆ ನಮ್ಮಲ್ಲಿರುವ ಆತ್ಮ ಒಂದೇ ಒಂದೇ ಧರ್ಮ" ಎಂದು ತಿಳಿಸಿದರು.

"ಮತಾಂತರದಿಂದ ಕೇವಲ ಪೂಜಾ ಕಾರ್ಯಕ್ರಮದಿಂದ ದೂರವಾಗಲ್ಲ, ನಮ್ಮಿಂದಲೇ ದೂರವಾಗುತ್ತಾರೆ. ನಮ್ಮ ಜನರಿಗೆ ಉತ್ತಮ ಸಂಸ್ಕಾರ ಬರಬೇಕಾಗಿದೆ. ಆಧುನಿಕ ಶಿಕ್ಷಣ ವ್ಯವಸ್ಥೆ ಶಿಕ್ಷಣ ನೀಡುತ್ತಿದೆ. ಆದರೆ ಸಂಸ್ಕಾರವನ್ನು, ಜೀವನ ಮೌಲ್ಯವನ್ನು ಕಲಿಸಲ್ಲ. ಕೆಲವರು ದಲಿತರಲ್ಲಿ ನಾವು ಹಿಂದುಗಳಲ್ಲ ಎಂದು ಹೇಳುವ ಮನಸ್ಥಿತಿಯನ್ನು ತುಂಬುತ್ತಿದ್ದಾರೆ ಇದನ್ನು ಹೋಗಲಾಡಿಸಬೇಕಾಗಿದೆ" ಎಂದು ಕರೆ ನೀಡಿದರು.

"ಸಾಧನೆ ತಪಸ್ಸಿನಿಂದ ಸಮಾಜವನ್ನು ಕಟ್ಟುವ ಕೆಲಸವನ್ನು ನಾವು ಪಡೆದಿದ್ದೇವೆ. ನಾವೆಲ್ಲ ಒಂದಾಗಿ ಕೆಲಸ ಮಾಡಿದರೆ, ಭಾರತಕ್ಕೆ ಉತ್ತಮ ಭವಿಷ್ಯವಿದೆ. ಆಗಾಗಿ ಸಮಾಜದಲ್ಲಿ ಭಕ್ತಿಭಾವ ಬರಬೇಕು. ಅದು ಬಂದರೆ ಸುಳ್ಳು ಸಮಾಜ ಹೋಗುತ್ತದೆ . ನಾವು ಪರಮಾರ್ಥವನ್ನು ಹೇಳಲು ಬಂದಿಲ್ಲ, ನಿಮ್ಮೊಂದಿಗೆ ಕೆಲಸ ಮಾಡಲು ಬಂದಿದ್ದೇನೆ. ಸಂಘ ಹಾಗೂ ಸಮಾಜದಲ್ಲಿನ ಸಮಸ್ಯೆಗಳನ್ನು ಚರ್ಚಿಸಲು ಇಲ್ಲಿಗೆ ಬಂದಿದ್ದೇನೆ" ಎಂದು ಭಾಗವತ್ ತಿಳಿಸಿದರು.

Recommended Video

ಭಾರತದ ವಿರುದ್ಧ ಇಂಗ್ಲೆಂಡ್ ಹೀನಾಯವಾಗಿ ಸೋತ್ಮೇಲೆ ನಗೆ ಪಾಟಲಿಗೀಡಾದ Michael Vaughan | *Cricket | OneIndia

English summary
Rashtriya swayam Sangh Sarsanghchalak Mohan Bhagwat comment on Dalits And Hindu. He is Karnataka tour and met swamiji's in Chitradurga.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X