• search
 • Live TV
ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಚಿತ್ರದುರ್ಗ: ಚಳ್ಳಕೆರೆ ತಾಲೂಕಿನಲ್ಲಿ 36 ಲಕ್ಷ ಹಣ ಪತ್ತೆ

By ಚಿತ್ರದುರ್ಗ ಪ್ರತಿನಿಧಿ
|

ಚಿತ್ರದುರ್ಗ, ಅಕ್ಟೋಬರ್ 8: ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಬುಕ್ಲಾರಹಳ್ಳಿ ಗೇಟ್ ಬಳಿಯ ಜಮೀನೊಂದರಲ್ಲಿ ಸುಮಾರು 36 ಲಕ್ಷ ಹಣ ಪತ್ತೆಯಾಗಿದೆ.

ಇಷ್ಟೊಂದು ಹಣ ಯಾರದ್ದು, ಯಾರಿಗೆ ಸೇರಿದ್ದು ಎಂಬ ಕುರಿತು ಚಳ್ಳಕೆರೆ ಪೋಲಿಸರು ತನಿಖೆ ಆರಂಭಿಸಿದ್ದಾರೆ. ಚಳ್ಳಕೆರೆ ತಾಲೂಕಿನ ತಳಕು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಬುಕ್ಲಾರಳ್ಳಿ ಗೇಟ್ ಬಳಿ "ದಿಲೀಪ್ ಬಿಲ್ಡ್ಕನ್ " ಎಂಬ ಕಂಪನಿಯ ಹಿಂಭಾಗದ ಜಮೀನಿನಲ್ಲಿ ಇಂದು‌ ಸುಮಾರು 36 ಲಕ್ಷ ಹಣ ಪತ್ತೆಯಾಗಿದೆ. ಆದರೆ ಈ ಹಣ ಯಾರದ್ದು ಎಂದು ಪತ್ತೆಯಾಗಿಲ್ಲ.

ವಿವಿ ಸಾಗರ ಜಲಾಶಯದ ಹಿನ್ನೀರಿನಲ್ಲಿ ವಿದ್ಯಾರ್ಥಿಗಳಿಗೆ ಈಜು ತರಬೇತಿ

ವಿಷಯ ತಿಳಿದ ತಕ್ಷಣ ಪೊಲೀಸರು ಶ್ವಾನ ದಳದೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಮಾತನಾಡಿದ ಚಿತ್ರದುರ್ಗ ಜಿಲ್ಲಾ ವರಿಷ್ಠಾಧಿಕಾರಿ ಜಿ.ರಾಧಿಕಾ, ಕಳೆದ ಒಂದು ವಾರದ ಹಿಂದೆ "ದಿಲೀಪ್ ಬಿಲ್ಡ್ಕನ್" ಎಂಬ ಕಂಪನಿಯವರು ಸುಮಾರು 36 ಲಕ್ಷ ಹಣವನ್ನು ಕಂಪನಿಯ ಕೆಲಸಗಾರರಿಗೆ ವೇತನ‌ ನೀಡಲು ತರಲಾಗಿದ್ದು, ಅದು ಕಳವು ಆಗಿದೆ ಎಂದು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿಸಿದರು.

   Political Popcorn with Lavanya : Satish Jarkiholi, ರಾಗಿ ಮುದ್ದೆ ಗು ಸೈ ಜೋಳದ ರೊಟ್ಟಿಗೆ ಜೈ | part 02

   ಈ ಹಣ ಅವರಿಗೆ ಸೇರಿರಬಹುದು ಎಂಬ ಶಂಕೆ ವ್ಯಕ್ತಪಡಿಸಿದ್ದಾರೆ. ಆದರೆ ಈ ಹಣ ಹೇಗೆ ಬಂತು, ಎಂಬುದರ ಬಗ್ಗೆ ತನಿಖೆ ನಡೆಸಲಾಗುವುದು. ಒಂದು ವೇಳೆ ದಿಲಿಪ್ ಬಿಲ್ಡ್ಕನ್ ಅವರದು ಆಗಿದ್ದರೆ ಅದನ್ನು ಅವರಿಗೆ ಹಿಂತಿರುಗಿಸಲಾಗುವುದು ಎಂದರು. ಹಣ ಕಳ್ಳತನವಾಗಿದ್ದರೆ ಆರೋಪಿಗಳು ಯಾರು ಎಂದು ಪತ್ತೆ ಮಾಡಿ ಕ್ರಮ ಜರುಗಿಸಲಾಗುತ್ತದೆ ಎಂದು ಚಿತ್ರದುರ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ ಹೇಳಿದರು.

   English summary
   About Rs 36 lakh Cash have been found in a farm near Buklarrahalli Gate of Challakere Taluk in Chitradurga district.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X