ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಷ್ಟ್ರಧ್ವಜಕ್ಕೆ ಗೌರವ ನೀಡುವುದನ್ನು ಕಾಂಗ್ರೆಸ್‌ನಿಂದ ಕಲಿಯಬೇಕಿಲ್ಲ: ಸಚಿವ ಬಿಸಿ ಪಾಟೀಲ್

By ಚಿತ್ರದುರ್ಗ ಪ್ರತಿನಿಧಿ
|
Google Oneindia Kannada News

ಚಿತ್ರದುರ್ಗ, ಆ.15 : ಕಾಂಗ್ರೆಸ್‌ನವರು ಈ ಹಿಂದೆ ರಾಷ್ಟ್ರಧ್ವಜಕ್ಕೆ ಬಿಜೆಪಿ ಅವರು ಅವಮಾನ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು. ಇದಕ್ಕೆ ಚಿತ್ರದುರ್ಗದಲ್ಲಿ ಕೃಷಿ ಸಚಿವ ಬಿಸಿ ಪಾಟೀಲ್‌ ಪ್ರತಿಕ್ರಿಯಿಸಿ, ರಾಷ್ಟ್ರಧ್ವಜಕ್ಕೆ ಗೌರವ ನೀಡುವುದನ್ನು ಕಾಂಗ್ರೆನ್‌ನಿಂದ ಕಲಿಯಬೇಕಿಲ್ಲ ಕಿಡಿಕಾರಿದರು.

ಜಾಹೀರಾತಿನಲ್ಲಿ ನೆಹರು ಚಿತ್ರ ಬಿಟ್ಟ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು ನೆಹರು ಚಿತ್ರ ಕೈಬಿಟ್ಟಿದ್ದಕ್ಕೆ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಸರ್ಕಾರದ ಜಾಹಿರಾತೋ ಅಥವಾ ಆರ್‌ಎಸ್‌ಎಸ್‌ ನೀಡಿದ ಜಾಹಿರಾತೋ ಎಂದು ಸಿದ್ದರಾಮಯ್ಯ ಟೀಕಿಸಿದ್ದರು. "ನಾನು ಸರ್ಕಾರ ನೀಡಿದ ಜಾಹೀರಾತು ನೋಡಿಲ್ಲ. ರಾಷ್ಟ್ರಧ್ವಜಕ್ಕೆ ಗೌರವ ನೀಡುವುದು ಕಾಂಗ್ರೆಸ್‌ನಿಂದ ಕಲಿಬೇಕಿಲ್ಲ" ಎಂದು ಗುಡುಗಿದರು.

ಸರ್ಕಾರ ನಡೀತಿಲ್ಲ, ಮ್ಯಾನೇಜ್ ಮಾಡುತ್ತಿದ್ದೇವೆ ಎಂಬ ಸಚಿವ ಮಾಧುಸ್ವಾಮಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ಅವರು "ಸಚಿವ ಮಾಧುಸ್ವಾಮಿ ನಾಲಿಗೆ ನಾನಲ್ಲ, ನಾವು ಸರ್ಕಾರ ನಡೆಸುತ್ತಿದ್ದೇವೆ. ಅವರ ಮಾತಿಗೆ ಅರ್ಥ ಕಲ್ಪಿಸುವ ಅವಶ್ಯಕತೆ ಇಲ್ಲ. ನಾವು ದಕ್ಷವಾಗಿ, ಸುಭದ್ರವಾಗಿ, ಪ್ರಾಮಾಣಿಕವಾಗಿ ಆಡಳಿತ ನಡೆಸುತ್ತಿದ್ದೇವೆ," ಎಂದರು.

Respect for the national flag should not be learned from the Congress: Minister BC Patil

ಆಡಳಿತ ನಡೆಸಲು ಸಿದ್ಧರಾಮಯ್ಯನವರ ಒಪ್ಪಿಗೆ ಬೇಕಿಲ್ಲ
ಸಿಎಂ ಬೊಮ್ಮಾಯಿ ಅವರು ಬಿಜೆಪಿ ಸರ್ಕಾರದ ಸಿಎಂ ಆಗಿದ್ದಾರೆ. ರಾಜ್ಯದ ಏನೇ ವಿಚಾರಗಳಿದ್ದರೂ, ಆ ಬಗ್ಗೆ ಏನು ಕ್ರಮ ಕೈಗೊಳ್ಳಬೇಕು ಎಂಬುದು ಸಿಎಂ ಅವರಿಗೆ ಗೊತ್ತಿರುತ್ತದೆ. ಅವರು ಸಮರ್ಥ ಆಡಳಿತ ನಡೆಸುತ್ತಿದ್ದಾರೆ ಎಂದು ಹೇಳಿದರು. "ಅಂದು ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಸಿದ್ದರಾಮಯ್ಯ ಹುಟ್ಟಿರಲಿಲ್ಲ, ನಾನು ಹುಟ್ಟಿರಲಿಲ್ಲ." ದೇಶಕ್ಕೆ ಸ್ವಾತಂತ್ರ್ಯ ಬರುವ ಸಂದರ್ಭದಲ್ಲಿ ಎಲ್ಲ ಭಾರತೀಯರು ಹೋರಾಟ ಮಾಡಿದ್ದಾರೆ. ಸ್ವತಂತ್ರ್ಯಕ್ಕಾಗಿ ಹೋರಾಟ ಮಾಡಿದ್ದ ಕಾಂಗ್ರೆಸ್ ಪಕ್ಷ ಬೇರೆ. ಈಗಿನ ಕಾಂಗ್ರೆಸ್ ಪಕ್ಷ ಕುಟುಂಬಕ್ಕಾಗಿ ಉಳಿದ ಪಕ್ಷ. ಕಾಂಗ್ರೆಸ್ ಪಕ್ಷದಿಂದ ಸಿಡಿದು ಬಂದವರು ಇದ್ದಾರೆ ಎಂದು ತಿಳಿಸಿದರು.

'ಆಗಿನ ಕಾಂಗ್ರೆಸ್‌ ಬೇರೆ, ಈಗಿನ ಕಾಂಗ್ರೆಸ್‌ ಪಕ್ಷ ಬೇರೆ'
ಅಂದು ಎಲ್ಲರ ಒಂದೇ ದೃಷ್ಟಿಕೋನ ಆಗಿತ್ತು. ದೇಶಕ್ಕೆ ಸ್ವಾತಂತ್ರ್ಯ ಬೇಕು ಎನ್ನುವ ಒಂದೇ ದೃಷ್ಟಿಕೋನ ಆಗಿತ್ತು. ಸ್ವಾತಂತ್ರ್ಯಕ್ಕಾಗಿ ಸಿದ್ದರಾಮಯ್ಯ ಹೋರಾಡಿಲ್ಲ, ನಾನು ಹೋರಾಡಿಲ್ಲ. ಸ್ವಾತಂತ್ರ್ಯ ಅನುಭವಿಸುವ ವೇಳೆ ನಾಲಿಗೆ ಹಿಡಿತ ಇಲ್ಲದೆ ಮಾತನಾಡುತ್ತಾರೆ. "ರಾಜ್ಯದಲ್ಲಿ ಸಿಎಂ ಬದಲಾವಣೆ ಇಲ್ಲ, ಕಾಂಗ್ರೆಸ್‌ಗೆ ಮಾಡಲು ಕೆಲಸ ಇಲ್ಲ. ಸುಮ್ಮನೆ ಸಿಎಂ ಬದಲಾವಣೆ ವಧಂತಿ ಹಬ್ಬಿಸುತ್ತಿದ್ದಾರ," ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ.

Respect for the national flag should not be learned from the Congress: Minister BC Patil

ನಗರದ ಜಿಲ್ಲಾಡಳಿತದ ವತಿಯಿಂದ ನಗರದ ಸರ್ಕಾರಿ ವಿಜ್ಞಾನ ಕಾಲೇಜು ಮೈದಾನದಲ್ಲಿ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು ಪ್ರತಿ ವರ್ಷ ಅಗಸ್ಟ್ 15 ನಮ್ಮ ದೇಶದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದ ಮಹತ್ವದ ದಿನ. ದಾಸ್ಯದ ಕತ್ತಲೆ ಕಳೆದು ಸ್ವಾತಂತ್ರ್ಯ, ಸ್ವಾಭಿಮಾನದ ಬದುಕಿಗೆ ಬೆಳಕಾದ ದಿನ. ಜಗತ್ತಿನ ಇತಿಹಾಸದಲ್ಲೇ ಮಹತ್ವದ ಸ್ಥಾನ ಪಡೆದಿರುವ ಈ ನಮ್ಮ ಭರತ ಖಂಡ ಎಂದರು.

ಪ್ರಜಾಪ್ರಭುತ್ವ ವ್ಯವಸ್ಥೆಯಂತಹ ಒಂದು ಸುಂದರ ಆಡಳಿತ ಅವಕಾಶವನ್ನು ನಮ್ಮ ಸ್ವಾತಂತ್ರ್ಯ ಚಳವಳಿಯ ಹರಿಕಾರರು ನಮಗೆ ಕಟ್ಟಿಕೊಟ್ಟಿದ್ದಾರೆ. ಅವರ ಬೆವರು ಮತ್ತು ರಕ್ತ ತರ್ಪಣಗಳಿಂದಾಗಿಯೇ ಇವತ್ತು ನಾವು ಸಮೃದ್ಧ ಮತ್ತು ಶಾಂತಿಯುತ ಜೀವನ ನಡೆಸುವಂತಾಗಿದೆ. ಇಂತಹ ದಿಗ್ಗಜರುಗಳ ಹೆರುಗಳನ್ನು ಪಟ್ಟಿ ಮಾಡುತ್ತಾ ಹೋದರೆ, ಭಾರತದಷ್ಟೇ ಬೃಹತ್ ಪಟ್ಟಿಯಾಗುತ್ತದೆ. ನವದೆಹಲಿಯ ಐತಿಹಾಸಿಕ ಕಲ್ಲಿಕೋಟೆಯ ಮೇಲೆ ಮೊದಲ ಸ್ವಾತಂತ್ರ್ಯೋತ್ಸವದ ತ್ರಿವರ್ಣ ಧ್ವಜವನ್ನು ಹಾರಿಸುವ ಗಳಿಗೆಯವರೆಗೆ ನಡೆದ ಎಲ್ಲ ಘಟನೆಗಳೂ , ಪ್ರಯತ್ನಗಳೂ ರಾಷ್ಟ್ರೀಯ ಚಳವಳಿಯ ಭಾಗಗಳೇ ಆಗಿವೆ ಎಂದರು.

English summary
Minister BC Patil said we shuld not learned from Congress to respect national flag, know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X