ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿತ್ರದುರ್ಗ; ವರುಣನ ಆರ್ಭಟಕ್ಕೆ ತತ್ತರಿಸಿದ ಜನರು

By ಚಿತ್ರದುರ್ಗ ಪ್ರತಿನಿಧಿ
|
Google Oneindia Kannada News

ಚಿತ್ರದುರ್ಗ, ಅಕ್ಟೋಬರ್ 12; ಚಿತ್ರದುರ್ಗ ಜಿಲ್ಲೆಯಲ್ಲಿ ಸೋಮವಾರ ತಡರಾತ್ರಿ ಸುರಿದ ಮಳೆಗೆ ಜನರು ತತ್ತರಿಸಿದ್ದಾರೆ. ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಜಿಲ್ಲೆಯ ಹಲವು ಭಾಗಗಳಲ್ಲಿ ಅವಾಂತರ ಸೃಷ್ಟಿಯಾಗಿದೆ.

ಚಳ್ಳಕೆರೆಯ ಅಂಬೇಡ್ಕರ್ ನಗರದಲ್ಲಿ ಮನೆ ಗೊಡೆ ಕುಸಿದಿದೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ, ಮನೆಯಲ್ಲಿದ್ದವರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಮನೆಯಲ್ಲಿದ್ದ ಪಾತ್ರೆ, ಪೀಠೋಪಕರಣಗಳು ಜಖಂಗೊಂಡಿವೆ. ಚಳ್ಳಕೆರೆಯಲ್ಲಿ ಸುಮಾರು 20ಕ್ಕೂ ಹೆಚ್ಚು ಮನೆಗಳು ಜಲಾವೃತವಾಗೊಂಡಿವೆ.

ಚಿತ್ರದುರ್ಗ; ಮೋಡ ಕವಿದ ವಾತಾವರಣ, ಕೆಲಕಾಲ ಸುರಿದ ಮಳೆ ಚಿತ್ರದುರ್ಗ; ಮೋಡ ಕವಿದ ವಾತಾವರಣ, ಕೆಲಕಾಲ ಸುರಿದ ಮಳೆ

ಮನೆಯೊಳಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ. ಭಾರೀ ಮಳೆಯಾಗಿದ್ದು ನಗರದ ರಸ್ತೆಗಳು ನದಿಯಂತೆ ಉಕ್ಕಿ ಹರಿದಿವೆ. ಮಳೆ ನೀರು ಮನೆಗೆ ನುಗ್ಗಿದ್ದರಿಂದ ಜನರು ಜನಪ್ರತಿನಿಧಿಗಳು ಹಾಗೂ ನಗರಸಭೆ ಅಧಿಕಾರಿಗಳ ವಿರುದ್ಧ ಹಿಡಿಶಾಪ ಹಾಕಿದ್ದಾರೆ. ಚಳ್ಳಕೆರೆ ತಾಲ್ಲೂಕಿನಲ್ಲಿ 34 ಮಿ. ಮೀ., ದೇವರ ಮರಿಕುಂಟೆ 7.3, ಮಿ. ಮೀ. ಮಳೆಯಾಗಿದೆ.

ಅ.16ರವರೆಗೆ ರಾಜ್ಯದ ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಅಧಿಕ ಮಳೆಅ.16ರವರೆಗೆ ರಾಜ್ಯದ ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಅಧಿಕ ಮಳೆ

ಹಿರಿಯೂರು ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಉತ್ತಮ ಮಳೆಯಾಗಿದೆ. ರಾತ್ರಿ ಸುರಿದ ಮಳೆಗೆ ಹಳ್ಳ-ಕೊಳ್ಳಗಳು, ಚೆಕ್ ಡ್ಯಾಂ ಭರ್ತಿಯಾಗಿವೆ. ಇನ್ನೂ ತಾಲ್ಲೂಕಿನ ಕಾತ್ರಿಕೇನಹಳ್ಳಿ ಅಣೆಕಟ್ಟು ಮೈದುಂಬಿ ಹರಿಯುತ್ತಿದೆ. ಇತ್ತ ಚಿಕ್ಕಮಗಳೂರು ಹಾಗೂ ಚಿತ್ರದುರ್ಗ ಭಾಗದಲ್ಲಿ ಭಾರೀ ಮಳೆಯಾಗಿದ್ದು ತಾಲೂಕಿನ ವೇದಾವತಿ ನದಿ ಅರ್ಧದಷ್ಟು ತುಂಬಿ ಹರಿಯುತ್ತಿವೆ. ಹಿರಿಯೂರು ನಗರದ ವೇದಾವತಿ ನದಿಯ ದಡದಲ್ಲಿರುವ ಶಿವನ ದೇವಾಲಯ ಅರ್ಧಕ್ಕೆ ಮುಳುಗಡೆಯಾಗಿದೆ.

ವಿಡಿಯೋ; ಬೆಂಗಳೂರಲ್ಲಿ ಮತ್ತೆ ಧಾರಾಕಾರ ಮಳೆ, ರಸ್ತೆಗಳು ಜಲಾವೃತವಿಡಿಯೋ; ಬೆಂಗಳೂರಲ್ಲಿ ಮತ್ತೆ ಧಾರಾಕಾರ ಮಳೆ, ರಸ್ತೆಗಳು ಜಲಾವೃತ

Rain Lashes Chitradurga Districts Water Logging In House

ತಾಲ್ಲೂಕಿನ ವಿವಿ ಪುರ ಗ್ರಾಮದಲ್ಲಿ 5 ಮನೆಗಳು, ಕೂಡ್ಲಹಳ್ಳಿ, ಯರಬಳ್ಳಿ, ಖಂಡೇನಹಳ್ಳಿ , ಗೊಲ್ಲಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಒಟ್ಟು 21 ಮನೆಗಳು ಬಿದ್ದಿದ್ದು, ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಹಾನಿಯಾಗಿರುವ ವರದಿಯಾಗಿದೆ. ಹಿರಿಯೂರು ಕಸಬಾ ಹೋಬಳಿಯಲ್ಲಿ 46.2. ಮಿ. ಮೀ., ಬಬ್ಬೂರು 30.6 ಮಿ. ಮೀ., ಇಕ್ಕನೂರು 19.4 ಮಿ. ಮೀ., ಜವನಗೊಂಡನಹಳ್ಳಿ 27.0 ಮಿ. ಮೀ, ಸೂಗೂರು 13.2 ಮಿ. ಮೀ. ಮಳೆ ವರದಿಯಾಗಿದೆ.

ಹೊಸದುರ್ಗದಲ್ಲಿ ಭಾರೀ ಮಳೆ: ಹೊಸದುರ್ಗ ತಾಲ್ಲೂಕಿನಲ್ಲಿ ವರುಣನ ಆರ್ಭಟ ಜೋರಾಗಿದೆ. ತಾಲೂಕಿನಲ್ಲಿ ಭಾರೀ ಮಳೆಯಾಗಿದ್ದು ಜನಜೀವನ ಸಂಪೂರ್ಣ ಹದಗೆಟ್ಟಿದೆ. ತಾಲೂಕಿನ ದೇವರಪುರದಹಟ್ಟಿ ಬಳಿ ಹೀರೆಹಳ್ಳದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅಡಿಯಲ್ಲಿ ಕಾಮಗಾರಿ ನಡೆಯುತ್ತಿದ್ದು, ರಾತ್ರಿ ಸುರಿದ ಮಳೆಗೆ ಕಾಮಗಾರಿ ಸಾಮಾಗ್ರಿಗಳು, ಟ್ಯಾಂಕರ್ ನೀರಿನಲ್ಲಿ, ಕೊಚ್ಚಿ ಹೋಗಿದೆ.

Rain Lashes Chitradurga Districts Water Logging In House

ಹೊಸದುರ್ಗ ತಾಲ್ಲೂಕಿನಲ್ಲಿ 8 ಮನೆಗಳು ಭಾಗಶಃ ಹಾನಿಯಾಗಿದೆ. ತಾಲ್ಲೂಕಿನ 20.2 ಸಾರಾಸಾರಿಯಲ್ಲಿ ಮಿ. ಮೀ. ಮಳೆಯಾಗಿದೆ. ಮಳೆಯಿಂದಾಗಿ ಅವಾಂತರ ಸೃಷ್ಟಿಯಾದ ಪ್ರದೇಶಗಳಿಗೆ ಶಾಸಕ ಗೂಳಿಹಟ್ಟಿ ಡಿ. ಶೇಖರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅರೆ ಮಲೆನಾಡು ಎಂದು ಕರೆಸಿಕೊಳ್ಳುವ ಹೊಳಲ್ಕೆರೆ ತಾಲ್ಲೂಕಿನಲ್ಲಿ ಭಾರೀ ಮಳೆಯಾಗಿದೆ. 46.83 ಮಿ. ಮೀ. ಸರಾಸರಿ ಮಳೆಯಾಗಿದೆ.

ಎಲ್ಲಿ, ಎಷ್ಟು ಮಳೆ; ಚಿತ್ರದುರ್ಗ ಜಿಲ್ಲೆಯಲ್ಲಿ ಅಕ್ಟೋಬರ್ 11ರಂದು ಬಿದ್ದ ಮಳೆಯ ವಿವರದನ್ವಯ ಮೊಳಕಾಲ್ಮೂರು ತಾಲ್ಲೂಕಿನ ರಾಂಪುರದಲ್ಲಿ 53.2 ಮಿ.ಮೀ ಮಳೆಯಾಗಿದೆ. ಇದು ಜಿಲ್ಲೆಯ ಅತ್ಯಧಿಕ ಮಳೆಯಾಗಿದೆ. ಮೊಳಕಾಲ್ಮೂರಿನಲ್ಲಿ 12, ದೇವಸಮುದ್ರದಲ್ಲಿ 43.2, ರಾಯಾಪುರ 9.2 ಮಿ.ಮೀ ಮಳೆಯಾಗಿದೆ.

ಚಳ್ಳಕೆರೆ ತಾಲ್ಲೂಕಿನ ಚಳ್ಳಕೆರೆ 16.8 ಮಿ.ಮೀ, ನಾಯಕನಹಟ್ಟಿ 4.4. ಮಿ.ಮೀ, ಮಳೆಯಾಗಿದೆ. ಹಿರಿಯೂರು ತಾಲ್ಲೂಕಿನ ಹಿರಿಯೂರಿನಲ್ಲಿ 13.5, ಬಬ್ಬೂರು 4, ಈಶ್ವರಗೆರೆ 2, ಸುಗೂರಿನಲ್ಲಿ 9.1 ಮಿ.ಮೀ ಮಳೆಯಾಗಿದೆ. ಹೊಸದುರ್ಗ ತಾಲ್ಲೂಕಿನ ಹೊಸದುರ್ಗದಲ್ಲಿ 50.4, ಬಾಗೂರು 13.2, ಮತ್ತೋಡು 3.2, ಶ್ರೀರಾಂಪುರ 2, ಮಾಡದಕೆರೆ 20 ಮಿ.ಮೀ ಮಳೆಯಾಗಿದೆ.

ಹೊಳಲ್ಕೆರೆ ತಾಲ್ಲೂಕಿನ ಹೊಳಲ್ಕೆರೆಯಲ್ಲಿ 8.2 ರಾಮಗಿರಿ 10.2 ಚಿಕ್ಕಜಾಜೂರು 3.2, ಬಿ.ದುರ್ಗ 15.2, ಹೆಚ್.ಡಿ.ಪುರ 9.2, ತಾಳ್ಯ 2.2 ಮಿ.ಮೀ ಮಳೆಯಾಗಿದೆ.

ಇನ್ನು ಚಿತ್ರದುರ್ಗ ತಾಲ್ಲೂಕಿನ ಚಿತ್ರದುರ್ಗ-1 ರಲ್ಲಿ 50.6, ಚಿತ್ರದುರ್ಗ-2 ರಲ್ಲಿ 7.3, ಹಿರೇಗುಂಟನೂರು 1, ಭರಮಸಾಗರ 40.2, ಸಿರಿಗೆರೆ 22.2, ತುರುವನೂರಿನಲ್ಲಿ 5.4, ಐನಹಳ್ಳಿ 30.8 ಮಿ.ಮೀ ಮಳೆಯಾಗಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಒಟ್ಟಾರೆಯಾಗಿ ಚಿತ್ರದುರ್ಗ ಜಿಲ್ಲೆಯ ವಿವಿಧ ಭಾಗಗಳಲ್ಲಿ ತಡರಾತ್ರಿ ಮಳೆರಾಯನ ಅಬ್ಬರಕ್ಕೆ ಜನರು ತತ್ತರಿಸಿದ್ದಾರೆ. ಜನಜೀವನ ಅಸ್ತವ್ಯಸ್ತಗೊಂಡಿದೆ. ಇಂದು ಸಹ ಮಳೆಯಾಗುವ ಸಾಧ್ಯತೆ ಇದೆ.

Recommended Video

ಚೀನಾ ಮತ್ತು ಭಾರತದ ನಡುವೆ ಯುದ್ಧವಾದ್ರೆ ಭಾರತ ಸೋಲೋದು ಗ್ಯಾರಂಟಿ!! | Oneindia Kannada

English summary
Heavy rain in Chitradurga district. Over night rain lased Challakere, Holalkere and Hiriyur taluks.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X