ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿವಿ ಸಾಗರ ಡೆಡ್ ಸ್ಟೋರೇಜ್ ಉಳಿಸಲು ಆಗ್ರಹಿಸಿ ಬಂದ್ ಗೆ ಕರೆ

By ಚಿತ್ರದುರ್ಗ ಪ್ರತಿನಿಧಿ
|
Google Oneindia Kannada News

ಹಿರಿಯೂರು, ಜೂನ್ 28: 'ವಿವಿ ಸಾಗರ ಡೆಡ್ ಸ್ಟೋರೇಜ್ ಉಳಿಸಿ ಡ್ಯಾಂ ರಕ್ಷಿಸಿ' ಎಂದು ಜುಲೈ 1ರಂದು ವಾಣಿ ವಿಲಾಸ ಹೋರಾಟ ಸಮಿತಿಯಿಂದ ಹಿರಿಯೂರು ಬಂದ್ ಗೆ ಕರೆ ನೀಡಲಾಗಿದ್ದು, ತಾಲ್ಲೂಕಿನ ಕನ್ನಡಪರ ಸಂಘಟನೆಗಳು, ಸಾಹಿತ್ಯ ಪರಿಷತ್ ಸೇರಿದಂತೆ ಎಲ್ಲ ಸಂಘಟನೆಗಳ ಬೆಂಬಲ ಸೂಚಿಸಲಾಗಿದೆ.

ಹಿರಿಯೂರು ಸತತ ಬರಗಾಲಕ್ಕೆ ತುತ್ತಾಗಿದ್ದು, ಕಳೆದ ಹದಿನೈದು ವರ್ಷಗಳಿಂದ ತಾಲ್ಲೂಕಿನಲ್ಲಿ ಯಾವುದೇ ತರಹದ ಮಳೆಯಾಗಿಲ್ಲ. ತೋಟಗಳೆಲ್ಲಾ ಒಣಗಿ, ಕುಡಿಯುವ ನೀರಿಗೆ ಪರದಾಡಬೇಕಿದೆ. ವಿವಿ ಸಾಗರದ ನೀರು 62 ಅಡಿ ಇದ್ದು, ಜಲಾಶಯದ ಹಿನ್ನೀರಿನ ಮಟ್ಟ ಡೆಡ್ ಸ್ಟೋರೇಜ್ ತಲುಪಿದೆ. ಭದ್ರಾ ಮೇಲ್ದಂಡೆ ಕಾಮಗಾರಿಯೂ ವಿಳಂಬವಾಗಿದ್ದು, ವಿವಿ ಸಾಗರಕ್ಕೆ ಭದ್ರಾ ನೀರು ಹರಿದು ಬರಲು ಕನಿಷ್ಠ ಎರಡು ಮೂರು ತಿಂಗಳಾದರೂ ಹಿಡಿಯುತ್ತದೆ. ಇತ್ತ ಇರುವ ಅಲ್ಪ ಸ್ವಲ್ಪ ಡ್ಯಾಂ ನೀರನ್ನೇ ಬಳಸಲಾಗುತ್ತಿದೆ.

 ಮಲೆನಾಡಾಗಿದ್ದ ಹಿರಿಯೂರು ಇಂದಾಗಿದೆ ಬರದ ನಾಡು ಮಲೆನಾಡಾಗಿದ್ದ ಹಿರಿಯೂರು ಇಂದಾಗಿದೆ ಬರದ ನಾಡು

ಆದ್ದರಿಂದ, ಈ ನೀರನ್ನು ಬಳಸಬೇಡಿ, ಒಂದು ವೇಳೆ ಬಳಸಿದರೆ ಡ್ಯಾಂಗೆ ತೊಂದರೆಯಾಗುತ್ತದೆ, ಜಲಚರಗಳ ಜೀವಕ್ಕೆ ಕುತ್ತು ಬರುತ್ತದೆ, ಪರಿಸರ ನಾಶವಾಗುತ್ತದೆ. ಡೆಡ್ ಸ್ಟೋರೇಜ್ ನೀರು ಬಳಸಬೇಡಿ ಎಂದು ಬಂದ್ ಗೆ ಕರೆ ನೀಡಲಾಗಿದೆ.

protest to protect vv sagar deadstorage water by vv horata samithi

ನಾಳೆ ರೈತ ಮುಖಂಡರು ಹಿರಿಯೂರಿನಲ್ಲಿ ತರಕಾರಿ ಮಾರ್ಕೆಟ್ ಮುಂಭಾಗದಲ್ಲಿ ಸಭೆ ಸೇರಲಿದ್ದು, ಹಿರಿಯೂರು ಶಾಸಕಿ ಕೆ. ಪೂರ್ಣಿಮಾ ಶ್ರೀನಿವಾಸ್, ಚಳ್ಳಕೆರೆ ಶಾಸಕ ಟಿ, ರಘುಮೂರ್ತಿ, ತಿಪ್ಪಾರೆಡ್ಡಿ, ಗೂಳಿಹಟ್ಟಿ ಶೇಖರ್, ಸಂಸದ ಎ. ನಾರಾಯಣ ಸ್ವಾಮಿ, ಶ್ರೀರಾಮುಲು, ಮಾಜಿ ಸಚಿವ ಜಯಚಂದ್ರ, ಡಿ. ಸುಧಕಾರ್, ಸೇರಿಂದತೆ ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಲಿದ್ದಾರೆ.

 ಡೆಡ್ ಸ್ಟೋರೇಜ್ ತಲುಪಿದ ವಾಣಿ ವಿಲಾಸ ಜಲಾಶಯ ನೀರಿನ ಮಟ್ಟ ಡೆಡ್ ಸ್ಟೋರೇಜ್ ತಲುಪಿದ ವಾಣಿ ವಿಲಾಸ ಜಲಾಶಯ ನೀರಿನ ಮಟ್ಟ

ಜುಲೈ 1, ಸೋಮವಾರ ಬಂದ್ ಆಚರಿಸಿ, ಡ್ಯಾಂಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು. ಹೋರಾಟದ ಬಗ್ಗೆ ತಾಲ್ಲೂಕಿನ ಮೂಲೆ ಮೂಲೆಗಳಲ್ಲಿಯೂ ಮಾಹಿತಿ ನೀಡಿದ್ದು, ಬೈಕ್ ಜಾಥಾ, ಪಾದಯಾತ್ರೆ, ಆಟೋದಲ್ಲಿ ಪ್ರಚಾರ ಸೇರಿದಂತೆ ಜಾಗೃತಿ ಮೂಡಿಸಿ ಹೋರಾಟಕ್ಕೆ ಸಹಕರಿಸುವಂತೆ ಮನವಿ ಮಾಡಲಾಗಿದೆ ಎಂದು ವಿವಿ ಸಾಗರ ಹೋರಾಟ ಸಮಿತಿ ಅಧ್ಯಕ್ಷ ಕಸವನಹಳ್ಳಿ ರಮೇಶ್ ತಿಳಿಸಿದ್ದಾರೆ.

English summary
Vani vilasa sagara horata samithi called for protest on july 1 to protect vv sagar deadstorage water. All the organisations in the chitradurga showed their support for this protest.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X