ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಿ ಪ್ರತಿಭಟನೆ

By ಚಿತ್ರದುರ್ಗ ಪ್ರತಿನಿಧಿ
|
Google Oneindia Kannada News

ಚಿತ್ರದುರ್ಗ, ಜುಲೈ 15: ಸಾಸ್ವೆಹಳ್ಳಿ ಏತ ನೀರಾವರಿ ಎರಡನೇ ಹಂತದ ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ, ಹಸಿರುಸೇನೆ, ಅಖಂಡ ಕರ್ನಾಟಕ ರೈತ ಸಂಘದ ಸಾವಿರಾರು ರೈತರು ಒನಕೆ ಓಬವ್ವ ವೃತ್ತದಲ್ಲಿ ಇಂದು ಬೃಹತ್ ಪ್ರತಿಭಟನೆ ನಡೆಸಿದರು.

"ನಾವು ನೀರಿಗಾಗಿ ನಿರಂತರ ಹೋರಾಟ ನಡೆಸಿಕೊಂಡು ಬರುತ್ತಿದ್ದೇವೆ. ಮೊದಲು ರೈತರು ಸಂಘಟಿತರಾಗಬೇಕು. ಮುಂದೊಂದು ದಿನ ನೀರು ಬರುತ್ತದೆಂದು ಸುಮ್ಮನೆ ಕೂತರೆ ಪ್ರಯೋಜನವಿಲ್ಲ. ಹಿರಿಯೂರಿನ ವಾಣಿವಿಲಾಸ ಸಾಗರಕ್ಕೂ ನೀರು ಬರಬೇಕು. ರಾಜಕಾರಣಿಗಳೇ, ಜನರಿಗೆ ನೀವು ನೀಡಿರುವ ವಾಗ್ದಾನ ಪೂರೈಸಿಕೊಳ್ಳುವುದಕ್ಕಾದರೂ ನೀರು ಕೊಡಿ" ಎಂದು ಆಗ್ರಹಿಸಿದರು.

 ಚಿತ್ರದುರ್ಗದ ಕೋಟೆ, ಸ್ಮಾರಕಗಳನ್ನು ರಕ್ಷಿಸಲು ಮುರುಘಾ ಶ್ರೀಗಳ ಕರೆ ಚಿತ್ರದುರ್ಗದ ಕೋಟೆ, ಸ್ಮಾರಕಗಳನ್ನು ರಕ್ಷಿಸಲು ಮುರುಘಾ ಶ್ರೀಗಳ ಕರೆ

"ನಾನು ನೀರಿಗಾಗಿ ಬೀದಿಗಿಳಿದು ಹೋರಾಡೋಣ ಎಂದು ಕರೆದಾಗ ನೀವ್ಯಾರೂ ಬರಲಿಲ್ಲ. ಈಗ ಸಮಯ ಬಂದಿದೆ. ನೀರಿಗಾಗಿ ಸರ್ಕಾರಕ್ಕೆ ಹಕ್ಕೊತ್ತಾಯ ಮಾಡೋಣ. ಇಲ್ಲವಾದಲ್ಲಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಬೃಹತ್ ಪ್ರತಿಭಟನೆ ನಡೆಸೋಣ. ಇದಕ್ಕೆ ನಿಮ್ಮೆಲ್ಲರ ಬೆಂಬಲ ಇರಬೇಕು. ಚಿತ್ರದುರ್ಗ ಜಿಲ್ಲೆಯ ಎಲ್ಲಾ ತಾಲ್ಲೂಕುಗಳು ಬರದಿಂದ ತತ್ತರಿಸಿವೆ. ಸಾಂಘಿಕ ಹೋರಾಟ ಮಾಡೋಣ. ರೈತರೆಲ್ಲಾ ಒಟ್ಟಾಗಿದ್ದರೆ ಖಂಡಿತ ನೀರು ಬಂದೇ ಬರುತ್ತದೆ" ಎಂದು ಆತ್ಮಸ್ಥೈರ್ಯ ತುಂಬಿದರು.

protest in chitradurga for implementation of sasvehalli Irrigation Project

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್, ಸದಸ್ಯೆ ಜಯಪ್ರತಿಭಾ, ತಾ.ಪಂ.ಅಧ್ಯಕ್ಷ ಡಿ.ಎಂ.ಲಿಂಗರಾಜು, ರೈತ ಮುಖಂಡರಾದ ಬಸ್ತಿಹಳ್ಳಿ ಸುರೇಶ್‌ಬಾಬು, ಮಂಜಣ್ಣ, ರವಿಕುಮಾರ್, ನಾಗರಾಜ್, ಎಂ.ಬಿ.ತಿಪ್ಪೇಸ್ವಾಮಿ, ಸಿ.ಆರ್.ತಿಮ್ಮಣ್ಣ, ಭೀಮರೆಡ್ಡಿ, ಕುರುಬರಹಳ್ಳಿ ಶಿವಣ್ಣ ಮುಂತಾದವರು ವೇದಿಕೆಯಲ್ಲಿದ್ದರು. ನೂರಾರು ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

English summary
Hundreds of farmers from karanataka state farmers association, hasiru sene, akhanda karnataka raita sangha protested near onake obavva circle demanding implemantation of sasvehalli 2nd state irrigation project.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X