ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿತ್ರದುರ್ಗದಲ್ಲಿ ಕೊರೊನಾ "ರೀಜನಲ್ ವ್ಯಾಕ್ಸಿನ್ ಸ್ಟೋರೇಜ್" ಕೇಂದ್ರ

|
Google Oneindia Kannada News

ಚಿತ್ರದುರ್ಗ, ನವೆಂಬರ್ 28: ದೇಶದಲ್ಲಿ ಕೊರೊನಾ ಪ್ರಕರಣಗಳಲ್ಲಿ ದಿನಕಳೆದಂತೆ ಇಳಿಕೆ ಕಾಣುತ್ತಿದೆ. ಕೊರೊನಾ ಸೋಂಕಿಗೆ ಸೂಕ್ತ ಚಿಕಿತ್ಸೆ, ಲಸಿಕೆ ನೀಡಲು ಅಂತಿಮ ಹಂತದಲ್ಲಿ ಸಿದ್ಧತೆಗಳು ನಡೆಯುತ್ತಿವೆ. ರಾಜ್ಯಗಳಲ್ಲಿ ಲಸಿಕೆಗಳನ್ನು ಶೇಖರಣೆ ಮಾಡಲು ಅಗತ್ಯ ತಯಾರಿಗೆ ಕೇಂದ್ರ ಸರ್ಕಾರ ಸೂಚಿಸಿದೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ಶನಿವಾರ ಪ್ರಧಾನಿ ಮೋದಿ ಹೈದರಾಬಾದ್, ಅಹ್ಮದಾಬಾದ್ ಮತ್ತು ಪೂನಾದಲ್ಲಿ ಸಿದ್ಧವಾಗಿರುವ ಕೋವಿಡ್ ವ್ಯಾಕ್ಸಿನ್ ಕೋಲ್ಡ್ ಸ್ಟೋರೇಜ್ ಕೇಂದ್ರಗಳಿಗೆ ಭೇಟಿ ನೀಡಲಿದ್ದಾರೆ.

ರಾಜ್ಯಾದ್ಯಂತ 29,451 ಲಸಿಕೆ ವಿತರಣೆ ಕೇಂದ್ರ: ಸಚಿವ ಡಾ.ಕೆ.ಸುಧಾಕರ್ ರಾಜ್ಯಾದ್ಯಂತ 29,451 ಲಸಿಕೆ ವಿತರಣೆ ಕೇಂದ್ರ: ಸಚಿವ ಡಾ.ಕೆ.ಸುಧಾಕರ್

ಕರ್ನಾಟಕದ ಹಲವು ಜಿಲ್ಲೆಗಳಲ್ಲೂ ಲಸಿಕೆ ಸಂಗ್ರಹಕ್ಕೆ ತಯಾರಿ ನಡೆಯುತ್ತಿದ್ದು, ಚಿತ್ರದುರ್ಗ ಜಿಲ್ಲೆಯಲ್ಲಿ "ರೀಜನಲ್ ವ್ಯಾಕ್ಸಿನ್ ಸ್ಟೋರೇಜ್ ಸೆಂಟರ್" ತೆರೆಯಲು ಆರೋಗ್ಯ ಇಲಾಖೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ನಗರದ ಡಿಎಚ್ ಒ ಕಚೇರಿಯಲ್ಲಿ ವ್ಯಾಕ್ಸಿನ್ ಸಂಗ್ರಹಣ ಘಟಕ ತೆರೆಯಲು ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.

Chitradurga: Preparations Of Regional Vaccine Storage Centre

ಲಸಿಕೆ ಶೇಖರಣಾ ಕೇಂದ್ರದಲ್ಲಿ ಸುಮಾರು 30 ಲಕ್ಷ ಡೋಸ್ ನಷ್ಟು ವ್ಯಾಕ್ಸಿನ್ ಸಂಗ್ರಹಿಸಿಡುವ ಸಾಮರ್ಥ್ಯ ಇದೆ. ಚಿತ್ರದುರ್ಗದಿಂದ ನೆರೆಹೊರೆಯ ದಾವಣಗೆರೆ, ಶಿವಮೊಗ್ಗ ಮತ್ತು ಬಳ್ಳಾರಿ ಜಿಲ್ಲೆಗಳಿಗೂ ವ್ಯಾಕ್ಸಿನ್ ಸರಬರಾಜು ಮಾಡಲು ಸಿದ್ಧತೆ ನಡೆಯುತ್ತಿದೆ. ಚಿತ್ರದುರ್ಗ ಜಿಲ್ಲೆಯಿಂದ ವೇಗವಾಗಿ ಬಹುತೇಕ ಎಲ್ಲಾ ಜಿಲ್ಲೆಗಳಿಗೂ ಲಸಿಕೆ ಸರಬರಾಜು ಮಾಡಲು ಅನುಕೂಲವಾಗಬಹುದು ಎನ್ನುವ ನಿಟ್ಟಿನಲ್ಲಿ ನಗರದಲ್ಲಿ ವ್ಯಾಕ್ಸಿನ್ ಸಂಗ್ರಹಣ ಕೇಂದ್ರ ತೆರೆಯಲಾಗಿದೆ ಎಂದು ಚಿತ್ರದುರ್ಗ ಡಿಎಚ್ ಒ ಡಾ. ಪಾಲಾಕ್ಷ ಸುದ್ದಿಗಾರರೊಂದಿಗೆ ಮಾಹಿತಿ ನೀಡಿದ್ದಾರೆ.

ಚಿತ್ರದುರ್ಗದ ಕೊರೊನಾ ಸೋಂಕಿನ ಪ್ರಕರಣ; ನ.27ರ ವರದಿಯಂತೆ ಚಿತ್ರದುರ್ಗ ಜಿಲ್ಲೆಯಲ್ಲಿ ಇದುವರೆಗೂ 13501 ಕೊರೊನಾ ಸೋಂಕಿನ ಪ್ರಕರಣಗಳು ದಾಖಲಾಗಿದ್ದು, 13136 ಮಂದಿ ಗುಣಮುಖರಾಗಿದ್ದಾರೆ. 302 ಸಕ್ರಿಯ ಪ್ರಕರಣಗಳಿದ್ದು, ಇದುವರೆಗೂ 63 ಮಂದಿ ಸಾವನ್ನಪ್ಪಿದ್ದಾರೆ.

Recommended Video

ಕಾನೂನು ಬಾಹಿರ ಮತಾಂತರ ನಿಷೇಧ ಸುಗ್ರೀವಾಜ್ಞೆ | UP | Oneindia Kannada

English summary
The Health Department is preparing for "Regional Vaccine Storage Center" in Chitradurga district. The DHO office has provided the necessary facilities to open a vaccine collection unit,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X