ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನುಡಿದಂತೆ ನಡೆದ ಹಿರಿಯೂರಿನ ಶಾಸಕಿ ಕೆ. ಪೂರ್ಣಿಮಾ ಶ್ರೀನಿವಾಸ್

By ಹಿರಿಯೂರು ಪ್ರತಿನಿಧಿ
|
Google Oneindia Kannada News

Recommended Video

ನುಡಿದಂತೆ ನಡೆದಿದ್ದಾರೆ ಹಿರಿಯೂರಿನ ಶಾಸಕಿ ಕೆ ಪೂರ್ಣಿಮಾ ಶ್ರೀನಿವಾಸ್

ಹಿರಿಯೂರು, ಜೂನ್ 19: ಚುನಾವಣೆಯ ಪೂರ್ವದಲ್ಲಿ ಮೂಲಭೂತ ಸೌಕರ್ಯಗಳಿಗೆ ಆದ್ಯತೆ ನೀಡುವುದಾಗಿ ಹೇಳಿದ ಹಿರಿಯೂರು ವಿಧಾನಸಭಾ ಕ್ಷೇತ್ರದ ನೂತನ ಶಾಸಕಿ ಕೆ. ಪೂರ್ಣಿಮಾ ಶ್ರೀನಿವಾಸ್ ಅದರಂತೆಯೇ ಮೊದಲನೇ ಬಾರಿಗೆ ಪಟ್ರೆಹಳ್ಳಿಯಲ್ಲಿ ಕುಡಿಯುವ ನೀರಿಗೆ ಬೋರ್ ವೆಲ್ ಕೊರೆಸಿ ನೀರಿನ ಸಮಸ್ಯೆ ಬಗೆಹರಿಸಿದರು.

ಉಳಿದಂತೆ ಕೆ.ಸಿ.ರೊಪ್ಪ , ಪಾಲವ್ವನಹಳ್ಳಿ , ಹುಚ್ಚವ್ವನಹಳ್ಳಿ, ಯಲಕೂರನಹಳ್ಳಿ ಸೇರಿದಂತೆ ವಿವಿಧ ಹಳ್ಳಿಗಳಲ್ಲಿ ಬೋರ್ ವೆಲ್ ಕೊರೆಸಿ ನೀರಿನ ಸಮಸ್ಯೆ ಬಗೆಹರಿಸಿದರು.

ಕೋಟೆ ನಾಡಿನ ಒನಕೆ ಹಿಡಿದ ಕೆ. ಪೂರ್ಣಿಮಾ ಶ್ರೀನಿವಾಸ್ ಕೋಟೆ ನಾಡಿನ ಒನಕೆ ಹಿಡಿದ ಕೆ. ಪೂರ್ಣಿಮಾ ಶ್ರೀನಿವಾಸ್

ಹಿರಿಯೂರು ತಾಲೂಕು ಕೂನಿಕೆರೆ ಪಂಚಾಯಿತಿ ವ್ಯಾಪ್ತಿಯ ಸಿಗೆಹಟ್ಟಿ ಗ್ರಾಮದ ಕರಿಯಪ್ಪ ಎಂಬುವರ ಮನೆ ಆಕಸ್ಮಿಕ ಬೆಂಕಿ ತಗುಲಿ ಸುಟ್ಟು ಹೋಗಿದ್ದು, ಕರಿಯಪ್ಪ ಮನೆಗೆ ಭೇಟಿ ನೀಡಿದ ಶಾಸಕರು ವೈಯಕ್ತಿಕ ಧನ ಸಹಾಯ ಮಾಡುವ ಮೂಲಕ ಹಿರಿಯೂರನ್ನು ಗುಡಿಸಲು ಮುಕ್ತ ಮಾಡುವುದಾಗಿ ಭರವಸೆ ನೀಡಿದರು.

Poornima Srinivas has made drinking water facilities in Patrehalli

ಈಗಾಗಲೇ ತಾಲೂಕಿಗೆ 30 ಸಾವಿರ ಮನೆಗಳಿಗೆ ಅನುದಾನ ಮಂಜೂರು ಮಾಡುವಂತೆ ಮುಖ್ಯಮಂತ್ರಿ ಅವರಿಗೆ ಮನವಿ ಮಾಡಿದ್ದು, ರಸ್ತೆ ಆಗಲೀಕರಣ, ಸಾರ್ವಜನಿಕ ಶೌಚಾಲಯ ನಿರ್ಮಾಣ, ನಗರದ ಗುಂಡಿಬಿದ್ದ ರಸ್ತೆಗಳು, ನಗರದ ಸ್ವಚ್ಛತೆಗೆ ಆದ್ಯತೆ ನೀಡುವುದಾಗಿ ತಿಳಿಸಿದರು.

ಇದೇ ತಿಂಗಳು ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ವೀಕ್ಷಣೆಗೆ ಅಧಿಕಾರಿಗಳು, ಪಕ್ಷದ ಮುಖಂಡರು ಮತ್ತು ವಿವಿಧ ರೈತರ ಜೊತೆ ಹೋಗಲು ಸಿದ್ಧತೆ ನೆಡೆಸಿದ್ದೇವೆ ಎಂದು ತಮ್ಮ ಮುಂದಿನ ಯೋಜನೆಗಳ ಬಗ್ಗೆ ಚರ್ಚಿಸಿದರು.

Poornima Srinivas has made drinking water facilities in Patrehalli

ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಓಬಿಸಿ ಉಪಾಧ್ಯಕ್ಷ ಡಿ.ಟಿ ಶ್ರೀನಿವಾಸ್, ತಾಲೂಕು ನಗರಸಭೆ ಅಧ್ಯಕ್ಷ ಕೆ. ಚಂದ್ರಶೇಖರ್, ಬಿಜೆಪಿ ತಾಲೂಕು ಯುವ ಮೋರ್ಚಾ ಅಧ್ಯಕ್ಷ ಕೃಷ್ಣಮೂರ್ತಿ ಹಾಜರಿದ್ದರು.

English summary
New MLA of the Hiriyur assembly constituency Poornima Srinivas has made drinking water facilities in Patrehalli for the first time.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X