ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿತ್ರದುರ್ಗದಲ್ಲಿ ಆಂಬುಲೆನ್ಸ್ ನಲ್ಲೇ ಮದ್ಯ ಸಾಗಾಟ; ನಾಲ್ವರ ಬಂಧನ

By ಚಿತ್ರದುರ್ಗ ಪ್ರತಿನಿಧಿ
|
Google Oneindia Kannada News

ಚಿತ್ರದುರ್ಗ, ಏಪ್ರಿಲ್ 21: ಲಾಕ್ ಡೌನ್ ಆದ್ದರಿಂದ ಮದ್ಯ ಮಾರಾಟವನ್ನೂ ನಿಷೇಧಿಸಲಾಗಿದೆ. ಹೀಗಾಗಿ ಎಲ್ಲಾ ಬಾರ್ ಗಳು ಬಂದ್ ಆಗಿವೆ. ಈ ನಡುವೆ ಅಲ್ಲಲ್ಲಿ ಮದ್ಯವನ್ನು ಕಳ್ಳತನ ಮಾಡುತ್ತಿರುವ ಪ್ರಕರಣಗಳೂ ನಡೆಯುತ್ತಿವೆ.

ಆದರೆ ಚಿತ್ರದುರ್ಗದಲ್ಲಿ ಸರ್ಕಾರಿ ಆಂಬುಲೆನ್ಸ್ ಅನ್ನೇ ಮದ್ಯ ಸಾಗಾಟಕ್ಕೆ ಬಳಸಿಕೊಂಡಿದ್ದಾರೆ. ಆಂಬುಲೆನ್ಸ್ ನಲ್ಲಿ ಮದ್ಯ ಸಾಗಾಟ ಮಾಡುತ್ತಿದ್ದವರನ್ನು ಪತ್ತೆ ಹಚ್ಚಿ ಚಿತ್ರಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಹೊಳಲ್ಕೆರೆ ತಾಲ್ಲೂಕಿನ ಹೊರಕೆದೇವಪು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸೇರಿದ ಆಂಬುಲೆನ್ಸ್ ನಲ್ಲಿ ಮದ್ಯ ತುಂಬಿಕೊಂಡು ಮಲ್ಲಾಡಿಹಳ್ಳಿ ಹತ್ತಿರ ಅದನ್ನು ಓಮ್ನಿ ಗಾಡಿಗೆ ಶಿಫ್ಟ್ ಮಾಡುವಾಗ ಚಿತ್ರಹಳ್ಳಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಅಬಕಾರಿ ಸಚಿವರ ಜಿಲ್ಲೆಯಲ್ಲಿ ಅಕ್ರಮ ಮದ್ಯ ಮಾರಾಟಅಬಕಾರಿ ಸಚಿವರ ಜಿಲ್ಲೆಯಲ್ಲಿ ಅಕ್ರಮ ಮದ್ಯ ಮಾರಾಟ

ಲ್ಯಾಬ್ ಟೆಕ್ನೆಷಿಯನ್ ಸಂತೋಷ್, ಆಂಬುಲೆನ್ಸ್ ಚಾಲಕ ಸುಭಾನ್, ಜೀವನ್, ಗಿರೀಶ್ ಸೇರಿದಂತೆ ನಾಲ್ವರು ಆರೋಪಿಗಳು 14 ಮದ್ಯದ ಬಾಕ್ಸ್ ಗಳನ್ನು ಸಾಗಿಸುತ್ತಿದ್ದರು. ಉಳ್ಳಾರ್ತಿ ಗ್ರಾಮದ ಎರಡು ಬಾರ್ ಗಳಿಂದ ಮದ್ಯವನ್ನು ಓಮಿನಿಯಲ್ಲಿ ಬೇರೆಡೆಗೆ ಮದ್ಯ ಸಾಗಿಸುತ್ತಿದ್ದರೆಂದು ತಿಳಿದುಬಂದಿದೆ. 90 ರೂ ಬೆಲೆಬಾಳುವ ಮದ್ಯದ ಪೌಚ್ ಗಳನ್ನು 500 ರೂಗೆ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ.

Police Arrested Four For Transporting Alcohol By Ambulance In Holalkere

ಸುಮಾರು 69 ಸಾವಿರದ ಮದ್ಯ, ಆಂಬುಲೆನ್ಸ್ ಮತ್ತು ಓಮ್ನಿ ಗಾಡಿಯನ್ನು ಪೋಲಿಸರು ವಶಪಡಿಸಿಕೊಂಡಿದ್ದಾರೆ. ಚಿತ್ರಹಳ್ಳಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

English summary
Police arrested four in relation to transporting alcohol by ambulance in holalkere of chitradurga district,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X