ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲಾಕ್ ಡೌನ್ ಮಧ್ಯೆಯೂ ತರಕಾರಿ ಕೊಳ್ಳಲು ಮುಗಿಬಿದ್ದ ಕೋಟೆನಾಡಿನ ಜನ

|
Google Oneindia Kannada News

ಚಿತ್ರದುರ್ಗ, ಮಾರ್ಚ್ 24: ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಇಂದಿನಿಂದ ಮಾರ್ಚ್ 31ರವರೆಗೆ ಕರ್ನಾಟಕ ಸಂಪೂರ್ಣವಾಗಿ ಆಗಲಿದೆ. ಕೆಲವು ಅಗತ್ಯ ಸೇವೆಗಳು ಮಾತ್ರ ದೊರೆಯಲಿದೆ. ಹಾಲು, ಪತ್ರಿಕೆ, ಹಣ್ಣು, ತರಕಾರಿ ಮಾರಾಟ ಪ್ರಾರಂಭವಾಗಿದ್ದು, ಜಿಲ್ಲೆಯಲ್ಲಿ 144 ಸೆಕ್ಷನ್ ಜಾರಿಯಲ್ಲಿದೆ. ಮಾನವನ ದಿನನಿತ್ಯ ಬಳಕೆಯ ಅವಶ್ಯಕ ವಸ್ತುಗಳನ್ನು ಕೊಳ್ಳಲು ಮಾರುಕಟ್ಟೆಯಲ್ಲಿ ಮುಗಿಬಿದ್ದಿದ್ದಾರೆ.

ಜಿಲ್ಲೆಯ ಹಿರಿಯೂರು, ಚಳ್ಳಕೆರೆ, ಮೊಳಕಾಲ್ಮೂರು, ಹೊಸದುರ್ಗ, ಹೊಳಲ್ಕೆರೆ ತಾಲ್ಲೂಕಿನಲ್ಲಿ ಬೆಳ್ಳಂಬೆಳಗ್ಗೆ ವ್ಯಾಪಾರ ವಹಿವಾಟು ಜೋರಾಗಿ ನಡೆದಿದೆ. ಜಿಲ್ಲೆಯಲ್ಲಿ 144 ಸೆಕ್ಷನ್ ಜಾರಿ ಮಾಡಿ ಜಿಲ್ಲಾಧಿಕಾರಿ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ. ಸಾರ್ವಜನಿಕರು ಇದ್ಯಾವುದನ್ನೂ ಲೆಕ್ಕಿಸದೆ ಬೀದಿಗಿಳಿಯುತ್ತಿದ್ದಾರೆ.

Live Updates : ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 37ಕ್ಕೆ ಏರಿಕೆLive Updates : ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 37ಕ್ಕೆ ಏರಿಕೆ

ಗಗನಕ್ಕೆ ಏರಿದ ತರಕಾರಿ ಬೆಲೆ: ಕೊರೊನಾ ಸೋಂಕು ತಡೆಗಟ್ಟಲು ಕರ್ನಾಟಕ ಲಾಕ್ ಡೌನ್ ಆಗಿದ್ದು, 144 ಸೆಕ್ಷನ್ ಜಾರಿ ಮಾಡಲಾಗಿದೆ. ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಜನರು ಹಣ್ಣು, ತರಕಾರಿ ಕೊಳ್ಳಲು ಮಾರುಕಟ್ಟೆಯಲ್ಲಿ ಮುಗಿಬಿದ್ದಿದ್ದು, ತರಕಾರಿ ಮಾರಾಟದ ಬೆಲೆ ಗಗನಕ್ಕೇರುತ್ತಿದೆ. ನಗರದಲ್ಲಿ ಬೀದಿ ವ್ಯಾಪಾರ ನಿಷೇಧ ಮಾಡಿರುವುದರಿಂದ ತರಕಾರಿ ಕೊಳ್ಳಲು ಮಾರುಕಟ್ಟೆಗೆ ಹೋಗಬೇಕು. ಹಿರಿಯೂರಿನ ಮಾರುಕಟ್ಟೆಯಲ್ಲಿ ಒಂದು ಕೆ.ಜಿ ಟೊಮೋಟೊ 20 ರೂ ಆಗಿದೆ.

People Rushed To Buy Vegetables Behalf Of 144 Section Imposed In District

 ಕರ್ನಾಟಕ ಲಾಕ್ ಡೌನ್: ಅಗತ್ಯ ವಸ್ತುಗಳ ಪೂರೈಕೆಯಲ್ಲಿ ವ್ಯತ್ಯಯ ಇಲ್ಲ! ಕರ್ನಾಟಕ ಲಾಕ್ ಡೌನ್: ಅಗತ್ಯ ವಸ್ತುಗಳ ಪೂರೈಕೆಯಲ್ಲಿ ವ್ಯತ್ಯಯ ಇಲ್ಲ!

ಉಳಿದಂತೆ ಆಲೂಗಡ್ಡೆ, ಹುರುಳಿಕಾಯಿ, ಬೊಂಡ ಮೆಣಸಿನಕಾಯಿ, ಕ್ಯಾರೆಟ್ ಸೇರಿದಂತೆ ಮತ್ತಿತರ ತರಕಾರಿಗಳು 120ರಿಂದ 130ವರೆಗೆ ಮಾರಾಟವಾಗಿದೆ. ತರಕಾರಿ ಸಿಗುತ್ತಿಲ್ಲ ಎಂದು ಹೇಳಿ ಹೆಚ್ಚಿನ ಬೆಲೆಗೆ ತರಕಾರಿ ಮಾರಾಟ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.

English summary
Karnataka will going to lock down till march 31 due to coronavirus. So only daily needed items will be available. So people rushed to buy vegetables in chitradurga
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X