ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಿರಿಯೂರು ವಿಧಾನಸಭಾ ಶೇಕಡಾ 79 ರಷ್ಟು ಮತದಾನ

By ಚಿತ್ರದುರ್ಗ ಪ್ರತಿನಿಧಿ
|
Google Oneindia Kannada News

ಚಿತ್ರದುರ್ಗ, ಮೇ 13: ಜಿಲ್ಲೆಯ ಹಿರಿಯೂರು ವಿಧಾನಸಭಾ ಕ್ಷೇತ್ರದಲ್ಲಿ ಯಾವುದೇ ಅಹಿತಕರ ಘಟನೆ ನೆಡೆಯದೆ ಶಾಂತಿಯುತವಾಗಿ ಶೇಕಡಾ 79 ಮತದಾನವಾಗಿದೆ. ಬೆಳಿಗ್ಗೆ 7 ರಿಂದ ಸಂಜೆ 6. 30 ವರೆಗೆ ಮತದಾನ ನಡೆದಿದೆ.

ಬಿಸಿಲನ್ನು ಉರಿ ಬಿಸಿಲಿನಲ್ಲಿ ಮತದಾರ ಪ್ರಭು ಸಾಲಿನಲ್ಲಿ ನಿಂತು ಶಾಂತಿಯುತವಾಗಿ ಮತದಾನ ನೆಡೆದಿದ್ದು ಆದರೆ ಕ್ಷೇತ್ರದಲ್ಲಿ ಹಣದ ಹೊಣೆಯನ್ನು ಹರಿಸಿದ್ದು ನಮ್ಗೆ ಅವರು ಇಷ್ಟು ಕೊಟ್ರು ನಿಮ್ಗೆ ಎಷ್ಟು ಕೊಟ್ಟರು ಎಂದು ಮತದಾರರ ಗುಸು ಗುಸು ಮಾತುಗಳ ಜೊತೆಗೆ ನಮ್ ಏರಿಯಾಕ್ಕೆ ಈ ಪಕ್ಷದವರು ಬಂದಿದ್ರು ಆ ಪಕ್ಷದವರು ಬಂದಿಲ್ಲ ಎಂಬ ಮಾತುಗಳು ಮತಗಟ್ಟೆಯ ಬಳಿ ಕೇಳಿ ಬರುತ್ತಿದ್ದವು . ಬೆಳಿಗ್ಗೆ ಮತದಾನ ನೀರಸವಾಗಿದ್ದು ಮಧ್ಯಾಹ್ನ ನಂತರ ಮತದಾನ ಚುರುಕು ಗೊಂಡಿತು..

ಕೆಲವೆಡೆ ತಾಂತ್ರಿಕ ತೊಂದರೆ, ಮತದಾನ ಬಹುತೇಕ ಯಶಸ್ವಿ: ಸಂಜೀವ್‌ ಕುಮಾರ್‌ಕೆಲವೆಡೆ ತಾಂತ್ರಿಕ ತೊಂದರೆ, ಮತದಾನ ಬಹುತೇಕ ಯಶಸ್ವಿ: ಸಂಜೀವ್‌ ಕುಮಾರ್‌

ಶಿಸ್ತು ಕಾಪಾಡಿದ ಹರ್ತಿಕೊಟೆ ಮತಗಟ್ಟೆಯ ಮತದಾರ: ಹರ್ತಿಕೊಟೆ ಗ್ರಾಮದ ಮತಗಟ್ಟೆಯಲ್ಲಿ ಸಾಲಿನಲ್ಲಿ ನಿಂತು ಮತದಾನ ಮಾಡಿದ ದೃಶ್ಯ ಕಂಡು ಬಂದಿತು. ಜೊತೆಗೆ ಮಕ್ಕಳನ್ನು ಕರೆದು ಕೊಂಡು ಮತದಾನ ಮಾಡಿದ್ದು ವಿಶೇಷವಾಗಿತ್ತು .

Peaceful polling in Hiriyuru

102 ವರ್ಷದ ವಯೋವೃದ್ದೆಯಾದ ಖಾದರ್ಬಿ ನವರಿಂದ ಮತದಾನ : ಗುಡಿಹಳ್ಳಿ ಮತಗಟ್ಟೆಯಲ್ಲಿ 102 ವರ್ಷದ ಖಾದರ್ಬಿ ಎಂಬುವರು ತನ್ನ ಮೊಮ್ಮಕ್ಕಳ ಸಹಾಯದಿಂದ ಮತಗಟ್ಟೆಗೆ ಬಂದು ಮತದಾನ ಮಾಡಿದರು. ಮತ್ತೊಂದು ಮತಗಟ್ಟೆಯಾದ ಮಸ್ಕಲ್ ಮಟ್ಟಿ 128 ಮತಗಟ್ಟೆಯಲ್ಲಿ ಸುಮಾರು 70 ವರ್ಷದ ವಯೋವೃದ್ದ ಚಲ್ವಕುಮಾರ್ ಸ್ವಾಮಿ ಎಂಬುವರು ತನ್ನ ಸಹಾಯಕರು ತೊಬ್ಳುಬದ ಮೇಲೆ ಬಂದು ಮತದಾನ ಮಾಡಿದರು.

Peaceful polling in Hiriyuru

ಸಖಿ ಪಿಂಕ್ ಮತಗಟ್ಟೆಯ ವಿಶೇಷ: ಹಿರಿಯೂರು ವಿಧಾನಸಭಾ ಚುನಾವಣೆ ಮತ್ತು ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಇದೆ ಮೊದಲನೆ ಬಾರಿಗೆ ಸಖಿ ಪಿಂಕ್ ಮತಗಟ್ಟೆ ವಿಶೇಷವಾಗಿತ್ತು . ಪಿಂಕ್ ಬಣ್ಣದ ಸ್ಯಾರಿ, ಪಿಂಕ್ ಸ್ಯಾರಿ ತೊಟ್ಟ ಚುನಾವಣಾ ಮಹಿಳಾ ಸಿಬ್ಬಂದಿ, ಬಲೂನ್ ಗಳಿಂದ ಶೃಂಗಾರ ಗೊಂಡಿದ್ದ ಮತಗಟ್ಟೆ 177 ರಲ್ಲಿ ಉತ್ಸಾಹದಿಂದ ಬಂದು ಮತದಾನ ಮಾಡಿ ಗಂಡ , ಹೆಂಡತಿ, ಮಕ್ಕಳು ಸೇರಿದಂತೆ ಸೇಲ್ಪಿ ತೆಗೆದುಕೊಂಡು ಖುಷಿ ಪಟ್ಟರು.

6 ಗಂಟೆ ಹೊತ್ತಿಗೆ ರಾಜ್ಯದ ಒಟ್ಟು ಶೇಕಡವಾರು ಮತದಾನ ಪ್ರಮಾಣ 70%6 ಗಂಟೆ ಹೊತ್ತಿಗೆ ರಾಜ್ಯದ ಒಟ್ಟು ಶೇಕಡವಾರು ಮತದಾನ ಪ್ರಮಾಣ 70%

Peaceful polling in Hiriyuru

ಜೆಡಿಎಸ್ ಅಭ್ಯರ್ಥಿ ಡಿ. ಯಶೋಧರ ಮತದಾನ: ಹಿರಿಯೂರು ವೆದಾವತಿ ನಗರದ ಮತಗಟ್ಟೆ 155 ರಲ್ಲಿ ಜೆಡಿಎಸ್ ಅಭ್ಯರ್ಥಿ ಡಿ. ಯಶೋಧರ ನವರು ಮತದಾನ ಮಾಡಿದರು.

Peaceful polling in Hiriyuru

ರಾಜ್ಯ ಓಬಿಸಿ ಉಪಾಧ್ಯಕ್ಷರಾದ ಡಿ.ಟಿ ಶ್ರೀನಿವಾಸ್ ಚುನಾವಣೆ ಕುರಿತು ಹಿತನುಡಿಗಳು: ಹಿರಿಯೂರು ವಿಧಾನಸಭಾ ಚುನಾವಣೆ ಶಾಂತಿಯುತವಾಗಿ ನೆಡೆದಿದ್ದು ಡಿ. ಟಿ. ಶ್ರೀನಿವಾಸ್ ನವರು ಭಾರತಿಯ ಜನತಾ ಪಕ್ಷ ಮತ್ತು ಹಿರಿಯೂರು ಬಿಜೆಪಿ ಕಾರ್ಯಕರ್ತರ ಪರವಾಗಿ ಮತದಾರರಿಗೆ ಅಭಿನಂದನೆ ಸಲ್ಲಿಸಿದರು. ನಾನು ಕೂಡ ಮಾಜಿ ಪೋಲಿಸ್ ಅಧಿಕಾರಿಯಾಗಿದ್ದು ಕಾನೂನು ಸುವ್ಯವಸ್ಥೆ ಕಾಪಾಡುವುದು ನಮ್ಮ ಕರ್ತವ್ಯ ಎಂದರು.

English summary
Around 79 percent voters ha e exercised their right in Hiriyuru constituency of Chitradurga district on Saturday with peaceful manner.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X