ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಒನ್ಇಂಡಿಯಾ ಇಂಪ್ಯಾಕ್ಟ್; ನಜೀರ್ ಸಾಬ್ ಕಾಲೋನಿಗೆ ಮತ್ತೊಂದು ಅಧಿಕಾರಿಗಳ ತಂಡ ಭೇಟಿ

By ಚಿತ್ರದುರ್ಗ ಪ್ರತಿನಿಧಿ
|
Google Oneindia Kannada News

ಸೋಮವಾರ ಹಿರಿಯೂರು ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಹನುಮಂತಪ್ಪ, ಪಂಚಾಯತಿ ಪಿಡಿಒ, ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್ ಅವರ ಆಪ್ತ ಸಹಾಯಕ ನಿರಂಜನ್ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರ ಮತ್ತೊಂದು ತಂಡ ಭೇಟಿ ನೀಡಿ ಕಾಲೋನಿಯ ನಿವಾಸಿಗಳ ಸಮಸ್ಯೆ ಬಗೆಹರಿಸಲು ಮುಂದಾಗಿದ್ದಾರೆ. "ಎರಡು ಗ್ರಾ.ಪಂ ನಡುವೆ ಅಡ್ಡ ಕತ್ತರಿಯಲ್ಲಿ ಸಿಲುಕಿದ ನತದೃಷ್ಟ ಗ್ರಾಮ' ಎಂಬ ಶಿರ್ಷಿಕೆ ಅಡಿಯಲ್ಲಿ ಒನ್ಇಂಡಿಯಾ ವರದಿ ಭಿತ್ತರಿಸಿತ್ತು. ಈ ಗ್ರಾಮದ ಕುಟುಂಬಗಳು ಅರಣ್ಯ ಪ್ರದೇಶದಲ್ಲಿ ಸುಮಾರು 30-40 ವರ್ಷಗಳಿಂದ ವಾಸವಾಗಿದ್ದಾರೆ.

ಒನ್ಇಂಡಿಯಾ ಇಂಪ್ಯಾಕ್ಟ್: ನಜೀರ್ ಸಾಬ್ ಕಾಲೋನಿಗೆ ತಹಶೀಲ್ದಾರ, ಕಂದಾಯ ಅಧಿಕಾರಿ ಭೇಟಿ ಒನ್ಇಂಡಿಯಾ ಇಂಪ್ಯಾಕ್ಟ್: ನಜೀರ್ ಸಾಬ್ ಕಾಲೋನಿಗೆ ತಹಶೀಲ್ದಾರ, ಕಂದಾಯ ಅಧಿಕಾರಿ ಭೇಟಿ

ಗುಡಿಸಲು ಕಟ್ಟಿಕೊಂಡು ವಾಸಿಸುತ್ತಿದ್ದಾರೆ

ಗುಡಿಸಲು ಕಟ್ಟಿಕೊಂಡು ವಾಸಿಸುತ್ತಿದ್ದಾರೆ

ಈ ಕುಗ್ರಾಮದವರಿಗೆ ಬೀದಿ ದೀಪ, ರಸ್ತೆ, ಮನೆ ಸೌಲಭ್ಯ,‌ ಶಾಲೆ, ವಾಹನ ಸೌಕರ್ಯ ಹಾಗೂ ಇತರೆ ಯಾವುದೇ ಸೌಲಭ್ಯಗಳು ಇಲ್ಲದ ಕಾರಣ ನರಕಯಾತನೆಯಲ್ಲಿ ತೊಡಗಿದ್ದಾರೆ. 124 ಸರ್ವೇ ನಂಬರ್ ನಲ್ಲಿ ಬರುವ 404 ಎಕರೆ 36 ಗುಂಟೆ ಅರಣ್ಯ ಪ್ರದೇಶಕ್ಕೆ ವಲಸೆ ಹೋಗಿ ಅಲ್ಲಿಯೇ ಇದ್ದು, ಅರಣ್ಯ ಪ್ರದೇಶವನ್ನು ಒತ್ತುವರಿ ಮಾಡಿಕೊಂಡು ಗುಡಿಸಲು ಕಟ್ಟಿಕೊಂಡು ವಾಸಿಸುತ್ತಿದ್ದಾರೆ.

ಪ್ರಸ್ತುತ ಇವರ ಆಧಾರ್ ಕಾರ್ಡ್ ರೇಷನ್ ಕಾರ್ಡ್ ಇತರೆ ದಾಖಲೆಗಳು ಗೌಡನಹಳ್ಳಿ ಗ್ರಾಮ ಪಂಚಾಯತಿ ವಿಳಾಸಕ್ಕೆ ಸೇರಿದ್ದವು. ಆದರೆ ಚುನಾವಣೆ ಸಂದರ್ಭದಲ್ಲಿ ಮತದಾನ ಮಾಡುವ ಮತದಾನದ ಹಕ್ಕು ಉಡುವಳ್ಳಿ ಗ್ರಾ.ಪಂ ಬೂತನಹಟ್ಪಿ ಸೇರಿದೆ. ಇದರಿಂದ

ನಮಗೆ ಆಧಾರ್ ಕಾರ್ಡ್, ರೇಷನ್ ಕಾರ್ಡ್, ಮತದಾನ ಕಾರ್ಡ್ ಎಲ್ಲವೂ ಇದೆ ಪಡಿತರ ಪದಾರ್ಥಗಳು ಬಿಟ್ಟರೆ ಬೇರೆ ಯಾವುದೇ ಸೌಲಭ್ಯಗಳು ಸಿಗುತ್ತಿಲ್ಲ ಎಂದು ಗ್ರಾಮಸ್ಥರು ನೋವು ತೋಡಿಕೊಂಡಿದ್ದರು.

ಸಾಗುವಳಿ ಚೀಟಿ ಕೊಟ್ಟಿಲ್ಲ

ಸಾಗುವಳಿ ಚೀಟಿ ಕೊಟ್ಟಿಲ್ಲ

ನಾವು ವಾಸಿಸುವ ಜಾಗಕ್ಕೆ ಮತ್ತು ಜಮೀನಿಗಳಿಗೆ ಕಂದಾಯ ಕಟ್ಟಿಕೊಂಡು ಬಂದಿದ್ದೇವೆ ಜೊತೆಗೆ ಅಂದಿನಿಂದ ಇಂದಿನವರೆಗೂ ಜಮೀನಿನಲ್ಲಿ ಉಳಿಮೆ ಮಾಡಿಕೊಂಡು ಬರುತ್ತಿದ್ದೇವೆ. ಆದರೂ ಸಾಗುವಳಿ ಚೀಟಿ ಕೊಟ್ಟಿಲ್ಲ, ಜೊತೆಗೆ ಇದುವರಿಗೂ ಯಾವುದೇ ಸೌಲಭ್ಯಗಳು ಸಿಗುತ್ತಿಲ್ಲ ಹಾಗೂ "ಹುಲ್ಬಂದಿ ಖರಾಬ್' ಆಗಿತ್ತು ನಂತರ 2001ರಲ್ಲಿ ಈ ಜಾಗವನ್ನು ಅರಣ್ಯ ಇಲಾಖೆ ವ್ಯಾಪ್ತಿಗೆ ಸೇರಿಸಲಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದರು.

ರೆಗ್ಯುಲೇಷನ್ ಕಳುಹಿಸಲು ತಿಳಿಸಲಾಗಿದೆ

ರೆಗ್ಯುಲೇಷನ್ ಕಳುಹಿಸಲು ತಿಳಿಸಲಾಗಿದೆ

1978-1980ರಿಂದ ಸುಮಾರು 30 ಕುಟುಂಬಗಳು ಅರಣ್ಯ ಪ್ರದೇಶದಲ್ಲಿ ವಾಸಿಸುತ್ತಿರುವ ಕುಟುಂಬಗಳಿಗೆ ಬೀದಿ ದೀಪ, ರಸ್ತೆ, ಮನೆ ಸೌಲಭ್ಯ,‌ಶಾಲೆ, ವಾಹನ ಸೌಕರ್ಯ ಇತರೆ ಯಾವುದೇ ಸೌಲಭ್ಯಗಳು ಇಲ್ಲದೆ ನರಕಯಾತನೆಯಲ್ಲಿ ತೊಡಗಿದ್ದರು. ಒನ್ಇಂಡಿಯಾ ಕನ್ನಡ ವಿಸ್ತೃತ ವರದಿ ಮಾಡಿತ್ತು. ಸೋಮವಾರ ತಾಲೂಕು ಪಂಚಾಯಿತಿ ಇಒ ಭೇಟಿ ನೀಡಿ, ಸಮಸ್ಯೆಯ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಇನ್ನು ಈ ಕುರಿತು ಮಾತನಾಡಿದ ತಾಲೂಕು ಪಂಚಾಯಿತಿ ಇಒ ಹನುಮಂತಪ್ಪ, ಆ ಕಾಲೋನಿಯಲ್ಲಿ ಮೂಲಭೂತ ಸೌಕರ್ಯ ಇಲ್ಲ, ಅಲ್ಲಿನ ನಿವಾಸಿಗಳು ಅರಣ್ಯ ಪ್ರದೇಶದಲ್ಲಿ ಮನೆ ಕಟ್ಟಿಕೊಂಡು ವಾಸಿಸುತ್ತಿದ್ದಾರೆ ಅವರ ಸಮಸ್ಯೆ ಬಗೆಹರಿಸಲು "ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ' ಈ ನಿವಾಸಿಗಳ ಸಮಸ್ಯೆ ಬಗ್ಗೆ ಮಂಡನೆ ಮಾಡಿ, ತಾಲೂಕು ಪಂಚಾಯತಿಗೆ ರೆಗ್ಯುಲೇಷನ್ ಕಳುಹಿಸಲು ತಿಳಿಸಲಾಗಿದೆ ಎಂದರು.

ಹಕ್ಕುಪತ್ರ ವಿತರಣೆ ಮಾಡಲು ಏರ್ಪಾಟು

ಹಕ್ಕುಪತ್ರ ವಿತರಣೆ ಮಾಡಲು ಏರ್ಪಾಟು

ರೆಗ್ಯುಲೇಷನ್ ಬಂದ ನಂತರ ಡಿಸಿ ಮತ್ತು ಎಸಿಯವರಿಗೆ ಈ ರೀತಿ ನಿವೇಶನ ರಹಿತ ಪಟ್ಟಿ ಮಾಡಿ ಅರಣ್ಯ ಹಕ್ಕು ಸಮಿತಿಯಲ್ಲಿ ಮುಂದಿಡುತ್ತೇವೆ. ರೆಗ್ಯುಲೇಷನ್ ಪ್ರಕಾರ ಮನೆ ಕಟ್ಟಿಕೊಂಡಿರುವ ನಿವಾಸಿಗಳಿಗೆ ಹಕ್ಕುಪತ್ರ ವಿತರಣೆ ಮಾಡಲು ಏರ್ಪಾಟು ಮಾಡಲಾಗುತ್ತದೆ ಎಂದು ಭರವಸೆ ನೀಡಿದರು. ಪಿಡಿಒ, ಶಾಸಕರ ಆಪ್ತ ಸಹಾಯಕ ನಿರಂಜನ್, ಸ್ಥಳಿಯ ಗ್ರಾಮ ಪಂಚಾಯತಿ ಸದಸ್ಯರು ಭೇಟಿ ನೀಡಿ, ಪರಿಶೀಲಿಸಿದರು.

English summary
Hiriyur Taluk Panchayat Executive Officer Hanumanthappa and the gram Panchayati PDO's headed team visited the Facility deprived village Najir Saab Colony.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X