ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆರ್ ಎಸ್ ಎಸ್ ಮತ್ತು ಬಿಜೆಪಿಗರನ್ನು ತಾಕತ್ತಿದ್ದರೆ ಮುಟ್ಟಲಿ ಎಂದ ಸಚಿವ ಈಶ್ವರಪ್ಪ

|
Google Oneindia Kannada News

ಚಿತ್ರದುರ್ಗ, ಆಗಸ್ಟ್ 8: ಒಂದು ಕಾಲದಲ್ಲಿ ರಾಷ್ಟ್ರೀಯ ಸ್ವಯಂ ಸಂಘ (ಆರ್.ಎಸ್.ಎಸ್) ಮತ್ತು ಭಾರತೀಯ ಜನತಾ ಪಕ್ಷದ ನಾಯಕರನ್ನು ಕೊಲೆ ಮಾಡುತ್ತಿದ್ದರು ಎಂದು ಸಚಿವ ಈಶ್ವರಪ್ಪ ಹೇಳಿದ್ದಾರೆ.
ಚಿತ್ರದುರ್ಗದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಅವರು "ನಮಗೆ ಶಕ್ತಿ ಇರಲಿಲ್ಲ, ಬಿ ಕಾಮ್ ಆಟಲ್ ಕಾಶ್, ಶಕ್ತಿ ಇಲ್ಲ, ಶಾಂತವಾಗಿ ಇರಿ ಎಂದು ನಮ್ಮ ರಾಷ್ಟ್ರೀಯ ನಾಯಕರು ಹೇಳುತ್ತಿದ್ದರು. ಈಗ ನಮ್ಮ ಮೈ ಮುಟ್ಟಲಿ ನೋಡೋಣ," ಎಂದು ಸವಾಲು ಹಾಕಿದ್ದಾರೆ.

Recommended Video

Siddaramaiah ಮೇಲೆ ಆಕ್ರೋಶ ಹೊರ ಹಾಕಿದ ಈಶ್ವರಪ್ಪ | Oneindia Kannada

ಹಾಗಾದರೆ, ಈಶ್ವರಪ್ಪನವರೇ ನಿಮ್ಮ ಪ್ರಕಾರ ಸಿಎಂ ಬೊಮ್ಮಾಯಿ ರಾಷ್ಟ್ರ ವಿರೋಧಿಯೇ?ಹಾಗಾದರೆ, ಈಶ್ವರಪ್ಪನವರೇ ನಿಮ್ಮ ಪ್ರಕಾರ ಸಿಎಂ ಬೊಮ್ಮಾಯಿ ರಾಷ್ಟ್ರ ವಿರೋಧಿಯೇ?

"ಭಾರತದ ಸೈನಿಕರಿಗೆ ಮುಂಚೆ ಭದ್ರತೆಯೇ ಇರಲಿಲ್ಲ. ಸೈನಿಕರು ಸತ್ತರೆ ಅವರ ಹೆಣ ಅಲ್ಲೆ ಬಿದ್ದಿರುತ್ತಿತ್ತು. ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರವು ಅಧಿಕಾರಕ್ಕೆ ಬಂದ್ಮೇಲೆ ಸೈನಿಕರಿಗೆ ಅಧಿಕಾರ ಕೊಟ್ಟಿದ್ದಾರೆ. ಈಗ ಒಬ್ಬ ಸೈನಿಕರು ಹುತಾತ್ಮರಾದರೆ, ಮುಂದಿನ ನಿರ್ಧಾರ ತೆಗೆದುಕೊಳ್ಳಲು ಯೋಧರಿಗೇ ಅಧಿಕಾರ ಕೊಟ್ಟಿದ್ದಾರೆ. ಓರ್ವ ಸೈನಿಕ ಸತ್ತರೆ ಅದಕ್ಕೆ ಸಂಬಂಧಿಸಿದ ಹತ್ತು ಜನರನ್ನು ಹೊಡೆದುರುಳಿಸುವ ಅಧಿಕಾರವನ್ನು ನಮ್ಮ ಯೋಧರಿಗೆ ನೀಡಿದ್ದಾರೆ," ಎಂದು ಈಶ್ವರಪ್ಪ ತಿಳಿಸಿದ್ದಾರೆ.

Once upon a time RSS and BJP leaders are Killed by outlaw: Minister Eshwarappa

ತಾಕತ್ತಿದ್ದರೆ ಆರ್ ಎಸ್ಎಸ್ ಮತ್ತು ಬಿಜೆಪಿಗರನ್ನು ಮುಟ್ಟಿ:
"ದೇಶದಲ್ಲಿ ಈ ಮೊದಲು ಭಾರತೀಯ ಜನತಾ ಪಾರ್ಟಿ ಕಾರ್ಯಕರ್ತರನ್ನು ಮುಟ್ಟಿದಾಗ ಏನೂ ಮಾಡುವುದಕ್ಕೆ ಶಕ್ತಿ ಇಲ್ಲದೇ, ಬಾಯಿ ಮುಚ್ಚಿಕೊಂಡು ಇದ್ದೆವು. ತಾಕತ್ತಿದ್ದರೆ ಈಗ ಬಿಜೆಪಿ ಮತ್ತು ಆರ್ ಎಸ್ ಎಸ್ ನಾಯಕರು ಮತ್ತು ಕಾರ್ಯಕರ್ತರನ್ನು ಮುಟ್ಟಲಿ ನೋಡೋಣ," ಎಂದು ಈಶ್ವರಪ್ಪ ಸವಾಲು ಹಾಕಿದ್ದಾರೆ. ಅಲ್ಲದೇ,ಇಡೀ ದೇಶದಲ್ಲಿ ನಾವು ಬೆಳೆದು ನಿಂತಿದ್ದೇವೆ. ನಾವು ಯಾರನ್ನೂ ಕೊಲೆ ಮಾಡಿಲ್ಲ, ನಮ್ಮ ಸುದ್ದಿ ಬಂದರೆ ಬ್ರಹ್ಮ ಬಂದರೂ ಬಿಡುವುದಿಲ್ಲ ಎಂದು ತಿಳಿಸಿದರು.

ರಾಜ್ಯದಲ್ಲಿ ಪೂರ್ಣ ಬಹುಮತದ ಸರ್ಕಾರ ರಚನೆ:
"ಕರ್ನಾಟಕದಲ್ಲಿ ಒಂದು ವರ್ಷ ಹತ್ತು ತಿಂಗಳು ಬಿಜೆಪಿ ಸರ್ಕಾರವು ಆಡಳಿತ ನಡೆಸಿದೆ. ಭಾರತೀಯ ಜನತಾ ಪಕ್ಷದಲ್ಲಿ ಒಂದು ವ್ಯವಸ್ಥೆಯಿದ್ದು, ಹಿರಿಯರು ಕುಳಿತು ಚರ್ಚಿಸಿ ಖಾತೆ ಹಂಚಿಕೆ ಮಾಡಲಾಗಿದೆ. ಎಲ್ಲ ಸಚಿವರು ತಮ್ಮ ತಮ್ಮ ಪ್ರತಿಭೆಗೆ ಅನುಸಾರವಾಗಿ ಕೆಲಸ ಮಾಡುತ್ತಾರೆ. ರಾಜ್ಯದಲ್ಲಿ ಬಿಜೆಪಿಗೆ ಅಧಿಕಾರ ನಡೆಸುವುದಕ್ಕೆ ನಾಲ್ಕು ಬಾರಿ ಅವಕಾಶ ನೀಡಿದರೂ, ಪೂರ್ಣ ಅವಧಿ ಪೂರೈಸುವುದಕ್ಕೆ ಸಾಧ್ಯವಾಗಿಲಿಲ್ಲ. ಪಕ್ಷಕ್ಕೆ ಪೂರ್ಣ ಬಹುಮತ ಸಿಗದಿರುವುದು ಜನತೆಯ ತಪ್ಪಲ್ಲ, ನಮ್ಮ ತಪ್ಪು. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 224 ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡುತ್ತೇವೆ. ಸಂಘಟನೆ ಮುಖಾಂತರ ಪಕ್ಷದ ನಿಷ್ಠಾವಂತ ಕಾರ್ಯಕರ್ತರ ಮೂಲಕ ಪೂರ್ಣ ಬಹುಮತ ಪಡೆದುಕೊಳ್ಳುತ್ತೇವೆ," ಎಂದು ಈಶ್ವರಪ್ಪ ಹೇಳಿದ್ದಾರೆ.

ಕಾಂಗ್ರೆಸ್ಸಿನಲ್ಲಿ ಸಿದ್ದರಾಮಯ್ಯ ಲೆಕ್ಕಕ್ಕೇ ಇಲ್ಲ:
ಕರ್ನಾಟಕದಲ್ಲಿ ಮೋಸದಿಂದಲೇ ಕಾಂಗ್ರೆಸ್ ಸರ್ಕಾರ ಪತನವಾಗಿದೆ. ದಲಿತ ನಾಯಕ ಜಿ. ಪರಮೇಶ್ವರ್ ಸೋಲಿಸಿದ ಸಿದ್ದರಾಮಯ್ಯ ಇದೀಗ ಬಿಜೆಪಿಯವರು ದಲಿತರನ್ನು ಸಿಎಂ ಮಾಡಬೇಕು ಎಂದು ಹೇಳುತ್ತಿದ್ದಾರೆ. ರಾಜ್ಯದಲ್ಲಿ ಮೊದಲು ಸರ್ಕಾರ ಕಳೆದುಕೊಂಡಿರಿ, ನೀವು ಚುನಾವಣೆಯಲ್ಲೂ ಸೋತು ಬಿಟ್ರಿ, ಕಾಂಗ್ರೆಸ್ಸಿನಲ್ಲಿ ನೀವು ಈಗ ಲೆಕ್ಕಕ್ಕೆ ಇಲ್ಲ. ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡ ದಿನದಿಂದ ನಿತ್ಯವೂ ಕೆಟ್ಟ ಕನಸು ಕಾಣುತ್ತಿದ್ದಾರೆ. ಆದ್ದರಿಂದ ಬರೀ ಟೀಕೆ ಮಾಡುವುದನ್ನೇ ತಮ್ಮ ಕೆಲಸ ಮಾಡಿಕೊಂಡು ಬರುತ್ತಿದ್ದಾರೆ ಎಂದರು. ರಾಜ್ಯ ಸರ್ಕಾರ ಬೀಳುತ್ತದೆ, ಬಿಜೆಪಿಯಲ್ಲಿ ಭಿನ್ನಮತ ಸ್ಪೋಟವಾಗುತ್ತದೆ ಎಂದು ಹೇಳುತ್ತಿದ್ದಾರೆ. ಅವರ ಕೆಟ್ಟ ಕನಸು ಯಾವತ್ತೂ ಫಲಿಸುವುದಿಲ್ಲ ಸಿದ್ದರಾಮಯ್ಯ ವಿರುದ್ಧ ಈಶ್ವರಪ್ಪ ಸಿಡಿಮಿಡಿಗೊಂಡಿದ್ದಾರೆ.

ದಲಿತರು ಕೇಂದ್ರದಲ್ಲಿ ಸಚಿವರಾಗಿದ್ದಾರೆ:
"ದೇಶದಲ್ಲಿ ಸ್ವಾತಂತ್ರ್ಯ ಬಂದಾಗಿನಿಂದಲೂ ಇಲ್ಲಿಯವರೆಗೂ ಒಬ್ಬರೇ ಒಬ್ಬರ ದಲಿತರು ಮುಖ್ಯಮಂತ್ರಿ ಆಗಿಲ್ಲ. ಆದರೆ ಕೇಂದ್ರದಲ್ಲಿ ನಾರಾಯಣಸ್ವಾಮಿ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಕೇಂದ್ರದಲ್ಲಿ 47 ಜನ ಇತಿಹಾಸದಲ್ಲೇ ಹಿಂದುಳಿದವರು, ದಲಿತರು ಸಚಿವರಾಗಿದ್ದಾರೆ. ಕುರುಬ ಹಾಗೂ ದಲಿತ ಸಮುದಾಯದಲ್ಲಿ ಜಾಗೃತಿ ಮೂಡಿಸಬೇಕಿದೆ. ಚುನಾವಣೆ ಬಂದಾಗ ಹೆಂಡ ಕುಡಿಸಿ, ದುಡ್ಡು ಹಂಚಿ ನಮ್ಮ ಓಟು ತಗೆದುಕೊಂಡು ಹೋಗುತ್ತಾರೆ. ನಾವು ಹಾಳಾಗಿರುವುದು ನಿಮ್ಮಿಂದಲೇ, ನಾವೆಲ್ಲರೂ ಒಂದು ಭಾವನೆಗೆ ಬರುವವರೆಗೂ ಹಿಂದುಳಿದವರು ಉದ್ಧಾರವಾಗಲ್ಲ," ಎಂದು ಸಚಿವ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ.

English summary
Once upon a time RSS and BJP leaders are Killed by outlaw: Minister Eshwarappa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X