• search
 • Live TV
ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವಿಶೇಷ ವರದಿ; ಅನಾಥವಾದ ಹಿರಿಯೂರಿನ ಎಪಿಎಂಸಿ ವಸತಿ ಗೃಹಗಳು

By ಚಿದಾನಂದ್ ಮಸ್ಕಲ್
|
Google Oneindia Kannada News

ಚಿತ್ರದುರ್ಗ, ಆಗಸ್ಟ್ 01; ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದ ಕೃಷಿ ಮಾರುಕಟ್ಟೆ ಸಮಿತಿ ಆವರಣದಲ್ಲಿ (ಎಪಿಎಂಸಿ) ನಿರ್ಮಿಸಿರುವ ಸಿಬ್ಬಂದಿ ವಸತಿ ಗೃಹಗಳನ್ನು ಉದ್ದೇಶಕ್ಕೆ ಬಳಸದ ಕಾರಣ ಅನಾಥವಾಗಿದ್ದು, ಕಟ್ಟಡಗಳು ಕುಸಿದು ಬೀಳುವ ಹಂತ ತಲುಪಿವೆ.

1998ರಲ್ಲಿ ಅರಣ್ಯ ಸಚಿವರಾಗಿದ್ದ ದಿವಂಗತ ಡಿ. ಮಂಜುನಾಥ್, ಗೃಹ ಮಂಡಳಿ ಅಧ್ಯಕ್ಷರಾಗಿದ್ದ ಈಗಿನ ಹಾಲಿ ಶಾಸಕ ಜಿ. ಹೆಚ್. ತಿಪ್ಪಾರೆಡ್ಡಿ ಶಂಕುಸ್ಥಾಪನೆ ಮಾಡಿದ ಬಳಿಕ ಎರಡು ವಸತಿ ಗೃಹಗಳು ನಿರ್ಮಾಣವಾಗಿದ್ದವು. ಈಗ ಕೃಷಿ ಮಾರುಕಟ್ಟೆಯ ವಸತಿ ಗೃಹಗಳನ್ನು ಯಾರು ಕೇಳುವವರು ಗತಿ ಇಲ್ಲಾದಂತಾಗಿದೆ.

ಹಿರಿಯೂರು: ಕಾಂಗ್ರೆಸ್‌ಗೆ ಗೆಲುವು, ನೆಲಕಚ್ಚಿದ ಬಿಜೆಪಿ; ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸೋಲಿನ ಮುನ್ಸೂಚನೆ!ಹಿರಿಯೂರು: ಕಾಂಗ್ರೆಸ್‌ಗೆ ಗೆಲುವು, ನೆಲಕಚ್ಚಿದ ಬಿಜೆಪಿ; ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸೋಲಿನ ಮುನ್ಸೂಚನೆ!

ಹಿರಿಯೂರು ನಗರದ ಕೃಷಿ ಮಾರುಕಟ್ಟೆ ಆವರಣದಲ್ಲಿ ನಿರ್ಮಾಣಗೊಂಡಿರುವ ವಸತಿ ಗೃಹಗಳು ಶಿಥಿಲಗೊಂಡಿದ್ದು ಕುಸಿದು ಬೀಳುವ ಹಂತಕ್ಕೆ ತಲುಪಿವೆ. ಮತ್ತೆರಡು ಕಟ್ಟಡಗಳು ಬಳಕೆಯಾಗದೆ ಹಾಗೆ ಉಳಿದಿದ್ದು ಯಾರು ಕೇಳುವವರಿಲ್ಲ ಇಲ್ಲದಂತಾಗಿದೆ.

 ದಿಡ್ಡಳ್ಳಿ ನಿರಾಶ್ರಿತರ ಮನೆಗಳಲ್ಲಿ ಫಲಾನುಭವಿಗಳು ವಾಸಿಸದಿದ್ದರೆ ಮನೆ ಸರ್ಕಾರಕ್ಕೆ ವಾಪಸ್‌ ದಿಡ್ಡಳ್ಳಿ ನಿರಾಶ್ರಿತರ ಮನೆಗಳಲ್ಲಿ ಫಲಾನುಭವಿಗಳು ವಾಸಿಸದಿದ್ದರೆ ಮನೆ ಸರ್ಕಾರಕ್ಕೆ ವಾಪಸ್‌

ಮೊದಲನೇ ವಸತಿ ಗೃಹಗಳು ಒಂದೆರಡು ವರ್ಷಗಳ ಕಾಲ ಮಾತ್ರ ಬಳಕೆ ಮಾಡಲಾಗಿತ್ತು. ಬಳಿಕ ಇಲ್ಲಿಯವರೆಗೆ ಸುಮಾರು 20 ವರ್ಷ ಕಳೆದರೂ ಯಾರು ಕೂಡ ಸಿಬ್ಬಂದಿಗಳು ಬಳಸಿಕೊಳ್ಳಲು ಮುಂದೆ ಬರುತ್ತಿಲ್ಲ. ಇನ್ನು 2014ರಲ್ಲಿ ಮತ್ತೆರಡು ಹೊಸ ಸಿಬ್ಬಂದಿ ವಸತಿ ಗೃಹಗಳನ್ನು ಸುಮಾರು 15 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ್ದು, ಮೂಲಭೂತ ಸೌಕರ್ಯಗಳನ್ನು ಅಳವಡಿಕೆ ಮಾಡಲಾಗಿದೆ. ಆದರೆ ಯಾರು ಬಳಕೆ ಮಾಡುವವರು ಇಲ್ಲದಂತಾಗಿದೆ.

ಪಾಲಿಕೆ ಆಯುಕ್ತರ ಮನೆ ಮುಂದೆ ಕಸ ಸುರಿದ ಬಿಜೆಪಿ ಶಾಸಕ! ಪಾಲಿಕೆ ಆಯುಕ್ತರ ಮನೆ ಮುಂದೆ ಕಸ ಸುರಿದ ಬಿಜೆಪಿ ಶಾಸಕ!

ಎಲ್ಲಾ ವ್ಯವಸ್ಥೆ ಇದ್ದರೂ ಬಳಕೆ ಇಲ್ಲ

ಎಲ್ಲಾ ವ್ಯವಸ್ಥೆ ಇದ್ದರೂ ಬಳಕೆ ಇಲ್ಲ

ವಿಪರ್ಯಾಸವೆಂದರೆ ದಿವಂಗತ ಮಾಜಿ ಸಚಿವ ಡಿ. ಮಂಜುನಾಥ್ ನಿಧನ ಹೊಂದಿದರೂ ವಸತಿ ಗೃಹಗಳು ಮಾತ್ರ ಬಳಕೆಯಾಗದೆ ಹಾಗೆ ಉಳಿದಿವೆ. ಈ ಗೃಹಗಳು ಗಾಳಿ, ಬೆಳಕು, ರಸ್ತೆ, ವಿದ್ಯುತ್ ಸೇರಿದಂತೆ ಎಲ್ಲಾ ವ್ಯವಸ್ಥೆ ಒಳಗೊಂಡಿದ್ದು ಬಳಕೆ ಮಾಡಿಕೊಳ್ಳಲು ಮಾತ್ರ ಸಿಬ್ಬಂದಿ ಮುಂದೆ ಬರುತ್ತಿಲ್ಲ. ದುರಂತವೆಂದರೆ ಕೃಷಿ ಮಾರುಕಟ್ಟೆ ಇಲಾಖೆಯಲ್ಲಿ ಒಟ್ಟು 13 ಹುದ್ದೆಗಳಿವೆ. ಇದರಲ್ಲಿ ಮೂರು ಮಂದಿ ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕೆಲವರು ನಿವೃತ್ತಿ ಹೊಂದಿದರೆ, ಇನ್ನು ಕೆಲವರು ಬೇರೆ ಕಡೆಗೆ ವರ್ಗಾವಣೆ ಆಗಿ ಹೋಗಿದ್ದಾರೆ. ಉಳಿದ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳದ ಸರ್ಕಾರ ಇರುವ 3 ಜನರಿಂದಲೇ ಕೆಲಸ ಮಾಡಿಸುತ್ತದೆ ಎಂಬ ಆರೋಪ ಕೂಡ ಕೇಳಿ ಬಂದಿದೆ. ಇತರೇ ಸಿಬ್ಬಂದಿ ಇಲ್ಲದ ಕಾರಣ ಮೂರು ಜನರ ಸಿಬ್ಬಂದಿಗೆ ಕೆಲಸದ ಹೊರೆ ಹೆಚ್ಚು ಎಂದರೆ ತಪ್ಪಾಗಲಾರದು.

ಸಿಬ್ಬಂದಿ ಬೇರೆ ಮನೆಯಲ್ಲಿದ್ದಾರೆ

ಸಿಬ್ಬಂದಿ ಬೇರೆ ಮನೆಯಲ್ಲಿದ್ದಾರೆ

ಈ ಕುರಿತು ಒನ್ ಇಂಡಿಯಾ ಕನ್ನಡದ ಪ್ರತಿನಿಧಿ ಜೊತೆ ಮಾತನಾಡಿದ ಹಿರಿಯೂರಿನ ಕೃಷಿ ಮಾರುಕಟ್ಟೆ ಪ್ರಭಾರ ಕಾರ್ಯದರ್ಶಿ ತಿಪ್ಪೇಸ್ವಾಮಿ. "1998 ರಲ್ಲಿ ನಿರ್ಮಾಣವಾದ ಕಾರ್ಯದರ್ಶಿ ವಸತಿ ಗೃಹಗಳಲ್ಲಿ ಕೆಲವು ವರ್ಷಗಳ ಕಾಲ ಮಾತ್ರ ಅಧಿಕಾರಿಗಳು ವಾಸವಾಗಿದ್ದರು. ಬೇರೆ-ಬೇರೆ ಕಾರಣಗಳಿಂದ ಬಂದ ಸಿಬ್ಬಂದಿಯವರು ಬೇರೆ ಮನೆಯಲ್ಲಿದ್ದಾರೆ. ಇದುವರೆಗೂ ಯಾರು ಸಹ ವಸತಿ ಗೃಹಗಳಿಗೆ ಬಾಡಿಗೆ ಬರಲಿಲ್ಲ" ಎಂದು ಹೇಳಿದ್ದಾರೆ.

"ನಮ್ಮ ಇಲಾಖೆಯಲ್ಲಿ ಪ್ರಸ್ತುತ 3 ಜನ ಸಿಬ್ಬಂದಿಗಳು ಮಾತ್ರ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಸ್ವಂತ ಮನೆಗಳಿವೆ. ನಮ್ಮ ಇಲಾಖೆಯಲ್ಲಿ ಹೆಚ್ಚು ಸಿಬ್ಬಂದಿಗಳು ಇಲ್ಲದ ಕಾರಣ ಬಳಕೆಯಾಗಾದೇ ವಸತಿ ಗೃಹಗಳು ಹಾಗೆ ಉಳಿದಿವೆ. 'ಡಿ' ಗ್ರೂಪ್ ನೌಕರರನ್ನು ಹೊರೆತುಪಡಿಸಿ ಉಳಿದ ಯಾವುದೇ ಸರ್ಕಾರಿ ಇಲಾಖೆಯವರು ಬಂದು ಕೇಳಿದರೆ ನಾವು ಅವುಗಳನ್ನು ಬಾಡಿಗೆ ನೀಡುತ್ತವೆ. ಒಮ್ಮೆ ಅಬಕಾರಿ ಇಲಾಖೆಯವರು ಕೇಳಿದ್ದರು ಮತ್ತೆ ಅವರು ಕೇಳಲಿಲ್ಲ" ಎನ್ನುತ್ತಾರೆ ತಿಪ್ಪೇಸ್ವಾಮಿ.

ಅನೈತಿಕ ಚಟುವಟಿಕೆಗಳ ತಾಣ

ಅನೈತಿಕ ಚಟುವಟಿಕೆಗಳ ತಾಣ

ವಸತಿ ಗೃಹಗಳನ್ನು ಬಳಕೆ ಮಾಡದೇ ಹಾಗೇ ಇರುವುದರಿಂದ ಸಂಜೆಯಾಗುತ್ತಿದ್ದಂತೆ ಇವುಗಳು ಕುಡುಕರ ಮತ್ತು ಅನೈತಿಕತೆ ಚಟುವಟಿಕೆಗಳ ತಾಣವಾಗಿ ಮಾರ್ಪಾಡಾಗುತ್ತವೆ ಎಂಬ ಆರೋಪವೂ ಇದೆ. ಇದರಿಂದ ಅಕ್ಕಪಕ್ಕದ ಮನೆಯವರಿಗೆ ತೊಂದರೆ ಉಂಟಾಗುತ್ತಿದೆ. ಈಗಾಗಲೇ ಹಳೆಯ ವಸತಿ ಗೃಹಗಳ ಕಿಟಾಕಿಗಳು ಕಿತ್ತು ಹೋಗಿದ್ದು, ಕಾಂಪೌಂಡ್ ಗೋಡೆಯ ಗೇಟ್ ಸಹ ಕಣ್ಮರೆಯಾಗಿದೆ, ಗೋಡೆಯ ಕಾಂಪೌಂಡ್ ಬಾಗಿಲಿಗೆ ಮುಳ್ಳಿನ ಬೇಲಿ ಹಾಕಿದ್ದಾರೆ.

  ಮಗುವಿನ ಪ್ರೀತಿಗೆ ಹಂಬಲಿಸಿದ ಗೊರಿಲ್ಲಾ | Oneindia Kannada
  ವಸತಿ ಗೃಹ ಬಳಕೆಗೆ ಆಗ್ರಹ

  ವಸತಿ ಗೃಹ ಬಳಕೆಗೆ ಆಗ್ರಹ

  "ನಮ್ಮ ಹಿರಿಯೂರು ತಾಲ್ಲೂಕಿನ ಕೃಷಿ ಮಾರುಕಟ್ಟೆ ಆವರಣದಲ್ಲಿ ಮೂರು ವಸತಿ ಗೃಹಗಳನ್ನು ಸರ್ಕಾರದ ಅನುದಾನದಲ್ಲಿ ನಿರ್ಮಾಣ ಮಾಡಿ ಸುಮಾರು ವರ್ಷಗಳು ಕಳೆದರೂ ಬಳಕೆಯಾಗದೆ ಹಾಗೆ ಉಳಿದುಕೊಂಡಿವೆ. ವಸತಿ ಗೃಹಗಳು ಎಂದು ನಾಮಫಲಕ ಬರೆದಿದ್ದಾರೆ. ಇದುವರೆಗೂ ಯಾವ ಸಿಬ್ಬಂದಿಗಳು ಅಲ್ಲಿ ವಾಸಿಸುತ್ತಿಲ್ಲ. ಸರ್ಕಾರದ ಇತರೇ ಅನೇಕ ಇಲಾಖೆಯ ಸಿಬ್ಬಂದಿಗಳು ಬಿಲ್ಡಿಂಗ್ ಇಲ್ಲ ಎಂದು ಬಾಡಿಗೆ ಬಿಲ್ಡಿಂಗ್ ನಲ್ಲಿದ್ದಾರೆ. ಹೀಗೆ ಸರ್ಕಾರದ ದುಡ್ಡನ್ನು ದುಂದು ವೆಚ್ಚ ಮಾಡುವುದು ಸರಿಯಲ್ಲ. ವಸತಿ ಗೃಹಗಳನ್ನು ಖಾಲಿ ಬಿಟ್ಟರೆ ಅನೈತಿಕ ಚಟುವಟಿಕೆಗಳಿಗೆ ದಾರಿಯಾಗುತ್ತದೆ. ಲಕ್ಷ ಲಕ್ಷ ರೂಪಾಯಿ ಖರ್ಚು ಮಾಡಿ ನಿರ್ಮಾಣ ಮಾಡಿ ಅದನ್ನು ಖಾಲಿ ಬಿಡುವುದು ಒಳ್ಳೆಯದಲ್ಲ. ಸಂಬಂಧ ಪಟ್ಟ ಅಧಿಕಾರಿಗಳು ಗಮನ ಹರಿಸಬೇಕು" ಎಂದು ರೈತ ಸಂಘದ ಅಧ್ಯಕ್ಷ ಕೆ. ಟಿ. ತಿಪ್ಪೇಸ್ವಾಮಿ ಆಗ್ರಹಿಸಿದ್ದಾರೆ.

  English summary
  Officials not using quarters in Chitradurga district Hiriyur APMC. Due to non maintenance quarters now in poor condition.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X