ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಭೆಯಲ್ಲಿ ಕೂತ ಅಧಿಕಾರಿ ವಾಟ್ಸ್‌ಆಪ್ ನಲ್ಲಿ ಸರಸ ಸಲ್ಲಾಪ

By Manjunatha
|
Google Oneindia Kannada News

ಚಿತ್ರದುರ್ಗ, ಜುಲೈ 11: ಚಿತ್ರದುರ್ಗದಲ್ಲಿ ನಡೆದ ಜನಪ್ರತಿನಿಧಿ-ಅಧಿಕಾರಿ (ಕೆಡಿಪಿ) ಸಭೆಯಲ್ಲಿ ಅಧಿಕಾರಿಯೊಬ್ಬರು ವಾಟ್ಸ್‌ಆಪ್‌ನಲ್ಲಿ ಚಕ್ಕಂದ ಆಡುವಾಗ ಮಾಧ್ಯಮದವರ ಕೈಗೆ ಸಿಕ್ಕಿಬಿದ್ದಾರೆ.

ಚಿತ್ರದುರ್ಗದ ಜಿಲ್ಲಾಪಂಚಾಯಿತಿ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಅಕ್ಷರ ದಾಸೋಹ ಅಧಿಕಾರಿಯೊಬ್ಬರು ವಾಟ್ಸ್‌ಆಪ್‌ನಲ್ಲಿ ಒಂದೇ ಬಾರಿ ಇಬ್ಬರು ಯುವತಿಯರೊಂದಿಗೆ ಸರಸ ಸಲ್ಲಾಪವಾಡುತ್ತಿದ್ದುದು ಕ್ಯಾಮೆರಾದಲ್ಲಿ ಸೆರೆಯಾಗಿದೆ.

ವಾಟ್ಸಾಪ್ ವದಂತಿ: ನವಜಾತ ಶಿಶುಗಳಿಗೆ ಲಸಿಕೆ ಹಾಕಿಸಲು ಪೋಷಕರ ಹಿಂದೇಟುವಾಟ್ಸಾಪ್ ವದಂತಿ: ನವಜಾತ ಶಿಶುಗಳಿಗೆ ಲಸಿಕೆ ಹಾಕಿಸಲು ಪೋಷಕರ ಹಿಂದೇಟು

ಸಭೆಯಲ್ಲಿ ಭಾಗವಹಿಸಿದ್ದ ಅಕ್ಷರ ದಾಸೋಹ ಅಧಿಕಾರಿ ದಾರುಕೇಶ್ ಅವರು ಸಭೆ ನಡೆಯುವಾಗ ವಾಟ್ಸ್‌ಆಫ್ ಮೆಸೆಜ್ ಮಾಡುತ್ತಿದ್ದರು. ಅದೂ ಒಂದೇ ಸಮಯದಲ್ಲಿ ಇಬ್ಬರು ಮಹಿಳೆಯರೊಂದಿಗೆ ಚಾಟ್ ಮಾಡುತ್ತಿದ್ದರು.

Officer sitting in meeting busy in whats app chat with girls

'ನಿನ್ನ ಮನೆ ಬಾಗಿಲು ಯಾವಾಗಲೂ ಬಂದ್ ಆಗಿರುತ್ತದೆ, ಯಾವಾಗ ಬಾಗಿಲು ತೆಗೆಯುತ್ತೀಯಾ? ಮನೆ ಹತ್ರ ಬರ್ತೀನಿ' ಎಂದು ಮೆಸೆಜ್ ಮಾಡುತ್ತಿರುವುದು ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದೆ. ಇದೇ ಮಹಿಳೆಗೆ ಅಧಿಕಾರಿಯು 'ಐ ಲವ್ ಯೂ' ಎಂದು ಸಂದೇಶವನ್ನೂ ಕಳುಹಿಸಿದ್ದಾರೆ. ಮೆಸೆಜ್ ಮಾಡುತ್ತಿದ್ದ ಮತ್ತೊಬ್ಬ ಮಹಿಳೆ ಅಧಿಕಾರಿಯ ಹೆಂಡತಿಯೇ ಎಂದು ಹೇಳಲಾಗುತ್ತಿದೆ.

ಸುಳ್ಳು ಸಂದೇಶಗಳ ರಹದಾರಿ; ವಾಟ್ಸಾಪ್ ನಿಷೇಧಿಸಬೇಕೇ? ಬೇಡವೇ? ಸುಳ್ಳು ಸಂದೇಶಗಳ ರಹದಾರಿ; ವಾಟ್ಸಾಪ್ ನಿಷೇಧಿಸಬೇಕೇ? ಬೇಡವೇ?

ಕೇವಲ ಈ ಅಧಿಕಾರಿ ಮಾತ್ರವಲ್ಲದೆ ಸಭೆಯಲ್ಲಿ ಹಾಜರಿದ್ದ ಹಲವು ಅಧಿಕಾರಿಗಳು ಚರ್ಚೆಯನ್ನು ಬಿಟ್ಟು ಮೊಬೈಲ್‌ನಲ್ಲಿ ಮುಳುಗಿದ್ದರು, ಜನಪ್ರತಿನಿಧಿಗಳೂ ಸಹ ಇದೇ ಕಾರ್ಯದಲ್ಲಿದ್ದರು. ಕೆಲವರಂತೂ ನಿದ್ದೆಗೆ ಜಾರಿದ್ದರು.

English summary
In Chitradurga a officer caught in camera doing whats app chat with girls. Not only that officer many officer in that meeting were busy with their mobile.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X