ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಷ್ಟು ದಿನ ಅಧಿಕಾರದಲ್ಲಿ ಇರ್ತೀವಿ ಅನ್ನೋದಲ್ಲ, ಏನು ಮಾಡ್ತೀವಿ ಅದು ಮುಖ್ಯ; ಸಿ.ಟಿ.ರವಿ

By ಚಿತ್ರದುರ್ಗ ಪ್ರತಿನಿಧಿ
|
Google Oneindia Kannada News

ಚಿತ್ರದುರ್ಗ, ಸೆಪ್ಟೆಂಬರ್ 14: "ಡಿಕೆಶಿ ಅವರನ್ನು ನ್ಯಾಯಾಂಗದ ಕಸ್ಟಡಿಗೆ ಕೊಟ್ಟಿರುವುದು ನ್ಯಾಯಾಲಯ, ಬಿಜೆಪಿ ಅಲ್ಲ. ನ್ಯಾಯಾಲಯದ ತೀರ್ಪಿಗೆ ಎಲ್ಲರೂ ತಲೆ ಬಾಗಲೇಬೇಕು. ನ್ಯಾಯಾಲಯದ ಮುಂದೆ ಯಾರೂ ದೊಡ್ಡವರಲ್ಲ ಎಂದು ಹೇಳಿದ್ದಾರೆ ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ. ರವಿ.

ಒಕ್ಕಲಿಗರಿಗೆ ಆದರ್ಶ ಯಾರಾಗಬೇಕು? ಪ್ರತಿಭಟನೆ ವಿರುದ್ಧ ಮಾತಾಡಿದ ಸಚಿವ ಸಿ.ಟಿ ರವಿಒಕ್ಕಲಿಗರಿಗೆ ಆದರ್ಶ ಯಾರಾಗಬೇಕು? ಪ್ರತಿಭಟನೆ ವಿರುದ್ಧ ಮಾತಾಡಿದ ಸಚಿವ ಸಿ.ಟಿ ರವಿ

"ನ್ಯಾಯಾಲಯ ಎಲ್ಲವನ್ನೂ ತೀರ್ಮಾನಿಸುತ್ತದೆ. ನಾವು ಎಷ್ಟು ದಿನ ಅಧಿಕಾರದಲ್ಲಿ ಇರ್ತೀವಿ ಅನ್ನುವುದು ಮುಖ್ಯವಲ್ಲ. ಇದ್ದಾಗ ಎಷ್ಟು ಕೆಲಸ ಮಾಡುತ್ತೇವೆ ಅನ್ನುವುದು ಮುಖ್ಯ. ಯಾರ ಹಣೆ ಬರಹವನ್ನು ಯಾರೂ ನಿರ್ಧರಿಸಿರುವುದಿಲ್ಲ" ಎಂದು ತಿರುಗೇಟು ನೀಡಿದ್ದಾರೆ.

No Matter How Many Days We Are In Power It Is Important What We Did Said CT Ravi

"ರಾಮ ಮಂದಿರವನ್ನು ಕಟ್ಟುವುದು ನಮ್ಮ ಆದ್ಯ ಕರ್ತವ್ಯವಾಗಿತ್ತು. ಇಂದಿಗೂ ಅದನ್ನೇ ಪ್ರತಿಪಾದಿಸುತ್ತೇವೆ. ಈ ವಿಷಯದಿಂದ ಹಿಂದೆ ಸರಿಯುವುದಿಲ್ಲ. ಆಕ್ರಮಣಕಾರಿಗಳನ್ನು ವೈಭವೀಕರಿಸುವುದನ್ನು ದೇಶಭಕ್ತರು ಸಹಿಸುವುದಿಲ್ಲ" ಎಂದು ಹೇಳಿದರು. ಇದೇ ಸಂದರ್ಭ, ಐಬಿಪಿಎಸ್ ಪರೀಕ್ಷೆಯನ್ನು ಪ್ರಾದೇಶಿಕ ಭಾಷೆಯಲ್ಲಿ ಕೊಡಬೇಕು ಎಂದು ಆಗ್ರಹಿಸಲಾಗಿದ್ದು, ಅದರ ಕಡೆಗಣನೆ ಕುರಿತು ಕೇಂದ್ರ ಸಚಿವರ ಜೊತೆ ಚರ್ಚಿಸಿ ತಿದ್ದುಪಡಿಗೆ ಒತ್ತಾಯಿಸಲಾಗುವುದು ಎಂದು ತಿಳಿಸಿದರು.

ಇದೇ ಸಂದರ್ಭ ಚಿತ್ರದುರ್ಗದ ಏಳು ಸುತ್ತಿನ ಕೋಟೆಯನ್ನು ವೀಕ್ಷಿಸಿದರು.

English summary
"The court will decide everything. It is not important how many days we are in power, what we did is important" said ct ravi in chitradurga.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X