ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿತ್ರದುರ್ಗ; ನಾಯಕನಹಟ್ಟಿ ಜಾತ್ರೆ, ವಿಶೇಷ ಬಸ್‌ಗಳ ಸಂಚಾರ

|
Google Oneindia Kannada News

ಚಿತ್ರದುರ್ಗ, ಮಾರ್ಚ್ 17; ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿಯಲ್ಲಿ ಮಾರ್ಚ್‌ 20 ರಂದು ಶ್ರೀ ಗುರು ತಿಪ್ಪೇರುದ್ರಸ್ವಾಮಿ ರಥೋತ್ಸವ ನಡೆಯಲಿದೆ. ಜಾತ್ರೆಗೆ ಆಗಮಿಸುವ ಭಕ್ತರ ಅನುಕೂಲಕ್ಕಾಗಿ ಕೆಎಸ್ಆರ್‌ಟಿಸಿ ದಾವಣಗೆರೆ ವಿಭಾಗ 60 ಹೆಚ್ಚುವರಿ ವಿಶೇಷ ಬಸ್‌ ಓಡಿಸಲಿದೆ.

ಶಿಷ್ಟ ಹಾಗೂ ಬುಡಕಟ್ಟು ಸಂಸ್ಕೃತಿ ಮೇಳೈಸಿರುವ ನಾಡಿನ ಪ್ರಸಿದ್ಧ ಶ್ರೀ ಗುರು ತಿಪ್ಪೇರುದ್ರಸ್ವಾಮಿ ರಥೋತ್ಸವಕ್ಕೆ ರಾಜ್ಯದ ನಾನಾ ಜಿಲ್ಲೆಗಳಿಂದ ಭಕ್ತರು ಆಗಮಿಸುತ್ತಾರೆ. ಕರ್ನಾಟಕ ಮಾತ್ರವಲ್ಲ ಆಂಧ್ರ ಪ್ರದೇಶದಿಂದಲೂ ಸಾವಿರಾರು ಭಕ್ತರು ಬರುತ್ತಾರೆ. ಚಿತ್ರದುರ್ಗ ಜಿಲ್ಲಾಡಳಿತ ಜಾತ್ರೆಗಾಗಿ ಅಗತ್ಯ ವ್ಯವಸ್ಥೆಯನ್ನು ಮಾಡುತ್ತಿದೆ.

ಚಳ್ಳಕೆರೆ ತಿಪ್ಪೇರುದ್ರಸ್ವಾಮಿ ಜಾತ್ರೆ; ಮುಕ್ತಿ ಬಾವುಟ 21 ಲಕ್ಷಕ್ಕೆ ಹರಾಜು ಚಳ್ಳಕೆರೆ ತಿಪ್ಪೇರುದ್ರಸ್ವಾಮಿ ಜಾತ್ರೆ; ಮುಕ್ತಿ ಬಾವುಟ 21 ಲಕ್ಷಕ್ಕೆ ಹರಾಜು

ಮಾರ್ಚ್ 16ರಂದು ರಥಕ್ಕೆ ಕಳಸ ಸ್ಥಾಪನೆ ಮತ್ತು ರಾತ್ರಿ ಗಜವಾಹನೋತ್ಸವ ನಡೆಯಿತು. ಗುರುವಾರ ಸಿಂಹ ವಾಹನೋತ್ಸವ, ಶುಕ್ರವಾರ ಅಶ್ವವಾಹನೋತ್ಸವ ನಡೆಯಲಿದೆ. ಮಾರ್ಚ್ 19ರಂದು ರಥಕ್ಕೆ ತೈಲಾಭಿಷೇಕ ನಡೆಯಲಿದೆ.

ದೇವನಹಳ್ಳಿ; ವಜ್ರ, ರತ್ನ ಖಚಿತ ವೇಣುಗೋಪಾಲ ಸ್ವಾಮಿ ಜಾತ್ರೆ ದೇವನಹಳ್ಳಿ; ವಜ್ರ, ರತ್ನ ಖಚಿತ ವೇಣುಗೋಪಾಲ ಸ್ವಾಮಿ ಜಾತ್ರೆ

Nayakanahatti Sri Guru Thipperudra Swamy Jatre On March 20th

ಮಾರ್ಚ್ 20ರಂದು ಪ್ರಾತಃ ಕಾಲದಲ್ಲಿ ವೃಷಭ ವಾಹನದೊಂದಿಗೆ ಚಿಕ್ಕ ರಥೋತ್ಸವ ನಡೆಯಲಿದೆ. ಮಧ್ಯಾಹ್ನ 3 ಗಂಟೆಯ ನಂತರ ದೊಡ್ಡ ರಥೋತ್ಸವ ನಡೆಯಲಿದೆ. ಚಿತ್ರದುರ್ಗ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನೀಕೇರಿ ಮಾತನಾಡಿ, "ರಥೋತ್ಸವಕ್ಕೆ ಅಗತ್ಯವಾದ ಎಲ್ಲಾ ಸಿದ್ಧತೆಗಳನ್ನು ದೇವಾಲಯದ ಇಒ ಹಾಗೂ ಇನ್ನಿತರೆ ಇಲಾಖೆ ಅಧಿಕಾರಿಗಳು ಕೈಗೊಳ್ಳುವರು" ಎಂದು ಹೇಳಿದ್ದಾರೆ.

ಮೈಸೂರಿನ ಐತಿಹಾಸಿಕ ಮುಡುಕುತೊರೆ ಜಾತ್ರೆ ರದ್ದು ಮೈಸೂರಿನ ಐತಿಹಾಸಿಕ ಮುಡುಕುತೊರೆ ಜಾತ್ರೆ ರದ್ದು

ಜಾತ್ರೆಗೆ ಆಗಮಿಸುವ ಭಕ್ತರಿಗೆ ಅಗತ್ಯವಾದ ವಿದ್ಯುತ್ ದೀಪ, ಕುಡಿಯುವ ನೀರು, ಶೌಚಾಲಯ ಸೇರಿದಂತೆ ಅಗತ್ಯ ವ್ಯವಸ್ಥೆ ಮಾಡಲಾಗುತ್ತಿದೆ. 27 ಪೊಲೀಸ್‌ ಸಹಾಯವಾಣಿ ಕೇಂದ್ರ, 7 ಪಾರ್ಕಿಂಗ್ ಲಾಟ್‌ಗಳು, ಬ್ಯಾರಿಕೇಡ್ ವ್ಯವಸ್ಥೆ ಮಾಡಲಾಗುತ್ತಿದೆ.

60 ಹೆಚ್ಚುವರಿ ಬಸ್; ಶ್ರೀ ಗುರು ತಿಪ್ಪೇರುದ್ರಸ್ವಾಮಿ ರಥೋತ್ಸವಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಬರುವ ಭಕ್ತಾದಿಗಳ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ದಾವಣಗೆರೆ ವಿಭಾಗದ ವಿವಿಧ ಘಟಕಗಳಿಂದ 60 ಹೆಚ್ಚುವರಿ ವಿಶೇಷ ಬಸ್ ಓಡಿಸಲಾಗುತ್ತಿದೆ.

ಪ್ರಯಾಣಿಕರ ಜನದಟ್ಟಣೆಗನುಗುಣವಾಗಿ ಹೆಚ್ಚುವರಿ ಬಸ್ ಕಾರ್ಯಾಚರಣೆ ಮಾಡಲಾಗುತ್ತದೆ. ಭಕ್ತಾದಿಗಳು ವಿಶೇಷ ಬಸ್ ವ್ಯವಸ್ಥೆಯ ಸದುಪಯೋಗವನ್ನು ಉತ್ತಮ ರೀತಿಯಿಂದ ಪಡೆದುಕೊಂಡು ಶ್ರೀ ಗುರುವಿನ ಕೃಪೆಗೆ ಪಾತ್ರರಾಗುವಂತೆ ಮನವಿ ಮಾಡಲಾಗಿದೆ.

ಜಾತ್ರೆಗೆ ಆಗಮಿಸುವ ಭಕ್ತರು ವಾಹನಗಳನ್ನು ನಿಲ್ಲಿಸಲು 7 ಕಡೆ ಪಾರ್ಕಿಂಗ್ ಲಾಟ್ ನಿರ್ಮಾಣ ಮಾಡಲಾಗಿದೆ. ಸಚಿವ ಬಿ. ಶ್ರೀರಾಮುಲು ಅದಿಕಾರಿಗಳ ಜೊತೆ ಸಭೆ ನಡೆಸಿ ಭಕ್ತರಿಗೆ ಅಗತ್ಯವಿರುವ ಸೌಲಭ್ಯ ಕಲ್ಪಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.

ಪೊಲೀಸ್ ಇಲಾಖೆ ನಿಗದಿಪಡಿಸಿರುವ ಬಸ್ ನಿಲ್ದಾಣ ದೂರವಿದೆ. ಅಲ್ಲಿಂದ ವೃದ್ಧರು, ಮಹಿಳೆಯರು, ಮಕ್ಕಳು ಸುಮಾರು 3 ಕಿ. ಮೀ. ನಡೆಯಬೇಕಿದೆ. ಆದ್ದರಿಂದ ದೇವಾಲಯಕ್ಕೆ ಸಮೀಪದಲ್ಲಿಯೇ ತಾತ್ಕಾಲಿಕ ಬಸ್ ನಿಲ್ದಾಣಕ್ಕೆ ಅವಕಾಶ ನೀಡಬೇಕು ಎಂದು ಸಚಿವರು ಸೂಚಿಸಿದ್ದಾರೆ.

ಅಪಾರ ಭಕ್ತರಿದ್ದಾರೆ; ಅವಧೂತ ಪರಂಪರೆಗೆ ಸೇರಿದ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಪವಾಡ ಮಾಡಿದ ಸ್ಥಳ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ. ತೆಲಗು ಮತ್ತು ಕನ್ನಡ ಭಾಷಿಕರನ್ನು ಬೆಸೆಯುವ ಧಾರ್ಮಿಕ ಸ್ಥಳವಿದು.

ಕಾಯಕ ತತ್ವವನ್ನು ಜನರಿಗೆ ತಿಳಿಸಲು ಶ್ರೀ ಗುರು ತಿಪ್ಪೇರುದ್ರಸ್ವಾಮಿ ಆಂಧ್ರ ಪ್ರದೇಶದ ರಾಯದುರ್ಗ ಕಡೆಯಿಂದ ಮೊಳಕಾಲ್ಮೂರು ಬಳಿ ಬಂದು ಪವಾಡ ಮಾಡಿ ಬಿಸಿನೀರಿನ ಚಿಲುವೆ ಸೃಷ್ಟಿಸಿದರು. ನಂತರ ಪಾವಗಡದ ಮಾರ್ಗವಾಗಿ ಭಕ್ತ ಪಣಿಯಪ್ಪನ ಜೊತೆ ನಾಯಕನಹಟ್ಟಿಗೆ ಬಂದು ನೆಲೆಸಿದರು ಎಂಬ ಇತಿಹಾಸವಿದೆ.

ಶ್ರೀ ಗುರು ತಿಪ್ಪೇರುದ್ರಸ್ವಾಮಿಗಳು ಆಂಧ್ರ ಪ್ರದೇಶ ಮೂಲದವರು. ಆ ರಾಜ್ಯದ ಜನರಿಗೂ ಗುರುಗಳ ಮೇಲೆ ಅಪಾರವಾದ ಭಕ್ತಿ ಇದೆ. ಆದ್ದರಿಂದ ಜಾತ್ರೆಯ ಸಂದರ್ಭದಲ್ಲಿ ಸಾವಿರಾರು ಭಕ್ತರು ಆಗಮಿಸುತ್ತಾರೆ.

Recommended Video

Puneeth RajKumar ಹಳ್ಳಿಯಿಂದ ದಿಲ್ಲಿಯವರೆಗೂ ಟ್ರೆಂಡಿಂಗ್ | Oneindia Kannada

English summary
Chitradurga district Challakere taluk Nayakanahatti sri Guru Thipperudra Swamy Jatre on March 20th. Special bus arrangement made to help devotees.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X