ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಂಪುಟ ವಿಸ್ತರಣೆ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳುವುದೇನು?

By ಚಿತ್ರದುರ್ಗ ಪ್ರತಿನಿಧಿ
|
Google Oneindia Kannada News

ಚಿತ್ರದುರ್ಗ, ಡಿಸೆಂಬರ್ 16: ಉಪಚುನಾವಣೆಯಲ್ಲಿ ಬಿಜೆಪಿ ಜಯ ಸಾಧಿಸಿದ ನಂತರ ಸಂಪುಟ ವಿಸ್ತರಣೆ ಕುರಿತು ಎಲ್ಲೆಲ್ಲೂ ಚರ್ಚೆ ನಡೆಯುತ್ತಿದೆ. ಚಿತ್ರದುರ್ಗಕ್ಕೆ ಭೇಟಿ ನೀಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಕೂಡ ಈ ಕುರಿತು ಮಾತನಾಡಿ, "ಸರ್ಕಾರದಲ್ಲಿ ಯಾರಿಗೆ ಯಾವ ಖಾತೆ ಕೊಡಬೇಕು ಅನ್ನೋದು ಮುಖ್ಯಮಂತ್ರಿಯವರ ಪರಮೋಚ್ಛ ಅಧಿಕಾರವಾಗಿದ್ದು, ಅವರೇ ಯಾರಿಗೆ ಯಾವ ಖಾತೆಯನ್ನು ಕೊಡಬೇಕು ಎಂಬುದನ್ನು ನಿರ್ಧರಿಸುತ್ತಾರೆ" ಎಂದರು.

ಚಿತ್ರದುರ್ಗದ ಮುರುಘಾ ಮಠಕ್ಕೆ ಭೇಟಿ ನೀಡಿದ ಅವರು ಮಾತನಾಡಿ, "ರಾಜ್ಯಾಧ್ಯಕ್ಷರ ಕೈಯಲ್ಲಿ ಸಚಿವ ಸ್ಥಾನದ ತೀರ್ಮಾನ ಇರುವುದಿಲ್ಲ. ಸಿಎಂ ನಿರ್ಧಾರ ತೆಗೆದುಕೊಂಡ ಬಳಿಕ ಜೊತೆಯಲ್ಲಿ ಚರ್ಚಿಸುತ್ತೇವೆ" ಎಂದರು.

ಯಾವುದೂ ನಿರೀಕ್ಷೆಯಂತೆ ನಡೆಯುವುದಿಲ್ಲ ಎಂದು ಹಿಂದೆಯೂ ಸಾಬೀತಾಗಿದೆ: ಸಿಟಿ ರವಿಯಾವುದೂ ನಿರೀಕ್ಷೆಯಂತೆ ನಡೆಯುವುದಿಲ್ಲ ಎಂದು ಹಿಂದೆಯೂ ಸಾಬೀತಾಗಿದೆ: ಸಿಟಿ ರವಿ

ಇನ್ನು ಚಿತ್ರದುರ್ಗ ಜಿಲ್ಲೆಯ ಶಾಸಕರ ಸಚಿವ ಸ್ಥಾನ ಲಾಬಿ ವಿಚಾರವಾಗಿ ಮಾತನಾಡಿ, "ಎಲ್ಲರಿಗೂ ಆಸೆ ಇರತ್ತದೆ, ಎಲ್ಲ ಜಿಲ್ಲೆಗಳಿಗೂ ನ್ಯಾಯ ಒದಗಿಸುವ ಕೆಲಸ ಮಾಡುತ್ತೇವೆ" ಎಂದಷ್ಟೇ ಹೇಳಿದರು. ಇದೇ ವೇಳೆ ಪೌರತ್ವ ತಿದ್ದುಪಡಿ ಮಸೂದೆಗೆ ಕಾಂಗ್ರೆಸ್ ವಿರೋಧಿಸುತ್ತಿರುವ ಕುರಿತು ಮಾತನಾಡಿ, "ಕಾಂಗ್ರೆಸ್ ಈಗಾಗಲೇ ದಿವಾಳಿಯಾಗಿದೆ. ಕಾಂಗ್ರೆಸ್ ಬೌದ್ಧಿಕ, ವೈಚಾರಿಕ, ಸಂಘಟನಾತ್ಮಕವಾಗಿ ದಿವಾಳಿಯಾಗಿದೆ" ಎಂದರು.

Nalin Kumar Kateel Reaction On Cabinet Expansion

"ರಾಜಕಾರಣ ಬೇರೆ ಮನುಷತ್ವವೇ ಬೇರೆ: ಖಾತೆ ಬಗ್ಗೆ ಕೇಳಬೇಡಿ" ಎಂದ ಕೌರವ!

"ಪೌರತ್ವ ತಿದ್ದುಪಡಿಯಿಂದ ಇಲ್ಲಿನ ಮುಸ್ಲಿಂ ಸಮುದಾಯದವರಿಗೆ ಯಾವುದೇ ತೊಂದರೆ ಆಗುವುದಿಲ್ಲ" ಎಂದರು. ನಂತರ ಚಿತ್ರದುರ್ಗದ ವಿವಿಧ ಮಠಗಳಿಗೆ ಭೇಟಿ ನೀಡಿದರು.

English summary
BJP President Nalin Kumar Katil who visited Chitradurga muruga mutt reacted on cabinet expansion
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X