• search
 • Live TV
ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಭಾಗ್ಯಗಳ ಹೆಸರಿನಲ್ಲಿ ರಾಜ್ಯಕ್ಕೆ ದೌರ್ಭಾಗ್ಯ ತಂದಿದ್ದಾರೆ: ಪ್ರತಾಪ್ ಸಿಂಹ

|

ಚಿತ್ರದುರ್ಗ, ನವೆಂಬರ್ 28: ಮಾಜಿ ಸಿಎಂ ಸಿದ್ದರಾಮಯ್ಯನವರು ಭಾಗ್ಯಗಳ ಹೆಸರಿನಲ್ಲಿ ರಾಜ್ಯಕ್ಕೆ ದೌರ್ಭಾಗ್ಯ ತಂದಿಟ್ಟಿದ್ದಾರೆ ಎಂದು ಹೇಳಿದ್ದಾರೆ ಸಂಸದ ಪ್ರತಾಪ್ ಸಿಂಹ.

ಪೇಟೆರೌಡಿಗೆ ಹೋಲಿಸಿ ಮಾತನಾಡಿದ ಸುಮಲತಾ ಮೇಲೆ ಪ್ರತಾಪ್ ಸಿಂಹ ವಾಗ್ದಾಳಿ

ಚಿತ್ರದುರ್ಗದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರಾವಳಿಯಲ್ಲಿ ರಿಯಾಜ್ ಭಟ್ಕಳ್, ಯಾಸೀನ್ ಭಟ್ಕಳ್ ಗಳಿಂದ ದೇಶ ವಿರೋಧಿ ಚಟುವಟಿಕೆಗೆ ಕುಮ್ಮಕ್ಕು ನೀಡುತ್ತಿದ್ದಾರೆ. ಕೇರಳ ಮಾದರಿ ಕೊಲೆಗಳು ಸಹ ಮಂಗಳೂರಿನಲ್ಲೇ ಆರಂಭವಾಗಿದೆ. ಈಗ ರಾಜ್ಯದಾದ್ಯಂತ ಕೇರಳ ಮಾದರಿ ಕೊಲೆಗಳು ಹರಡಿದೆ. ಗೃಹ ಸಚಿವರು, ‌ಸಿಎಂ ಈ ಬಗ್ಗೆ ಕ್ರಮ ವಹಿಸಬೇಕು ಎಂದು ತಿಳಿಸಿದರು.

   Hardik Pandya ಕೇವಲ ಬ್ಯಾಟ್‌ನಿಂದಲೇ ಪಂದ್ಯ ಗೆಲ್ಲಿಸ ಬಲ್ಲರು | Oneindia Kannada

   ಈಗಿನ ಬಿಜೆಪಿ ಸರ್ಕಾರ ದಿವಾಳಿಯಾಗಿದೆ ಎಂದಿದ್ದ ಸಿದ್ದರಾಮಯ್ಯ ಅವರ ಹೇಳಿಕೆಗೆ ತಿರುಗೇಟು ನೀಡಿ, ಬಿಜೆಪಿ ಸರ್ಕಾರ ದಿವಾಳಿ ಆಗಿದೆ ಎಂದ ಸಿದ್ದರಾಮಯ್ಯ ಅವರಿಗೆ ನೈತಿಕತೆ ಇಲ್ಲ. ಭಾಗ್ಯಗಳ ಹೆಸರಿನಲ್ಲಿ ರಾಜ್ಯಕ್ಕೆ ದೌರ್ಭಾಗ್ಯ ತಂದಿದ್ದಾರೆ. ಬಿಜೆಪಿ ಸರ್ಕಾರದ ಬಗ್ಗೆ ಮಾತನಾಡುವ ಅರ್ಹತೆ ಯಾವುದೂ ಅವರಿಗೆ ಇಲ್ಲ ಎಂದಿದ್ದಾರೆ. ಅವರ ಅವಧಿಯಲ್ಲಿ ರಾಜ್ಯದ ಸ್ಥಿತಿ ಹೇಗಿತ್ತು ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.

   English summary
   MP Pratap Simha reacted to the allegation of Former CM Siddaramaiah regarding BJP ruling,
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X