ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿತ್ರದುರ್ಗಕ್ಕೆ ಮಾದರಿಯಾದ ಮರಡಿಹಳ್ಳಿ ಕೋವಿಡ್ ಆಸ್ಪತ್ರೆ

By ಚಿದಾನಂದ್ ಮಸ್ಕಲ್
|
Google Oneindia Kannada News

ಚಿತ್ರದುರ್ಗ, ಜೂನ್ 18; ಕೊರೊನಾ ಕಾಲದಲ್ಲಿ ರೋಗಿಗಳನ್ನು ಆರೈಕೆ ಮಾಡುವ ನಿಟ್ಟಿನಲ್ಲಿ ಚಿತ್ರದುರ್ಗ ಜಿಲ್ಲೆಯಲ್ಲಿಯೇ ಒಂದು ಮಾದರಿ ಕೋವಿಡ್ ಆಸ್ಪತ್ರೆಯಾಗಿ ಹೊರಹೊಮ್ಮಿದೆ. ಹಿರಿಯೂರು ತಾಲ್ಲೂಕಿನ ಮರಡಿಹಳ್ಳಿ ಸಮುದಾಯ ಆರೋಗ್ಯ ಕೇಂದ್ರ.

ಮೊದಲನೇ ಅಲೆಯಿಂದ ಹಿಡಿದು ಎರಡನೇ ಅಲೆಯ ಇಲ್ಲಿಯವರೆಗೆ ಸಾಕಷ್ಟು ಸೋಂಕಿತರಿಗೆ ಚಿಕಿತ್ಸೆಯನ್ನು ಇಲ್ಲಿ ನೀಡಲಾಗಿದೆ. ಅನೇಕ ಜನರು ಚೇತರಿಸಿಕೊಳ್ಳಲು ಮರಡಿಹಳ್ಳಿ ಸಮುದಾಯ ಆರೋಗ್ಯ ಕೇಂದ್ರ ಸಹಾಯಕವಾಗಿದೆ. ಈ ಆಸ್ಪತ್ರೆಯಲ್ಲಿ ಒಟ್ಟು 30 ಬೆಡ್ ಇದ್ದು, ಇವುಗಳಲ್ಲಿ 15 ಆಕ್ಸಿಜನ್ ಬೆಡ್ ಆಗಿದೆ.

ಹಿರಿಯೂರು ಕೋವಿಡ್ ಸೆಂಟರ್‌ನಲ್ಲಿ ಸೋಂಕಿತರಿಗಾಗಿ ವ್ಯಾಯಾಮ ಮತ್ತು ಡ್ಯಾನ್ಸ್ಹಿರಿಯೂರು ಕೋವಿಡ್ ಸೆಂಟರ್‌ನಲ್ಲಿ ಸೋಂಕಿತರಿಗಾಗಿ ವ್ಯಾಯಾಮ ಮತ್ತು ಡ್ಯಾನ್ಸ್

4 ಜನ ವೈದ್ಯರು, 5 ಸ್ಟಾಫ್‌ನರ್ಸ್, 9 ಜನ 'ಡಿ' ಗ್ರೂಪ್ ನೌಕರರು, ಓರ್ವ ಫಾರ್ಮಸಿಸ್ಟರ್ ಸೇರಿದಂತೆ ಇತರೆ ಸಿಬ್ಬಂದಿಗಳನ್ನು ಒಳಗೊಂಡ ಈ ಆಸ್ಪತ್ರೆ ಜನರ ನಿರೀಕ್ಷೆ ಅರಿತು ಕಾರ್ಯ ನಿರ್ವಹಿಸುತ್ತಿದೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡುವುದು, ರೋಗಿಗಳ ತಪಾಸಣೆ ಹಾಗೂ ಆರೈಕೆ ಮಾಡುವ ರೀತಿ ಉತ್ತಮವಾಗಿದೆ.

 ಬೆಂಗಳೂರಿನ ಪ್ರತಿ ಕ್ಷೇತ್ರದಲ್ಲೂ ಒಂದೊಂದು ಸರ್ಕಾರಿ ಆಸ್ಪತ್ರೆ ನಿರ್ಮಾಣ ಬೆಂಗಳೂರಿನ ಪ್ರತಿ ಕ್ಷೇತ್ರದಲ್ಲೂ ಒಂದೊಂದು ಸರ್ಕಾರಿ ಆಸ್ಪತ್ರೆ ನಿರ್ಮಾಣ

ಆಕ್ಸಿಜನ್ ವ್ಯವಸ್ಥೆ, ಲ್ಯಾಬ್ ವ್ಯವಸ್ಥೆ, ಔಷಧಿ ಸೇರಿದಂತೆ ಕೋವಿಡ್‌ಗೆ ಸಂಬಂಧಿಸಿದಂತೆ ಎಲ್ಲಾ ರೀತಿಯ ವ್ಯವಸ್ಥೆ ಈ ಆಸ್ಪತ್ರೆ ಒಳಗೊಂಡಿದೆ. ಇದರ ಜೊತೆಗೆ ಉತ್ತಮ ಗಾಳಿ, ಬೆಳಕು, ಪರಿಸರದ ವ್ಯವಸ್ಥೆಯೂ ಇಲ್ಲಿದೆ.

ಸರ್ಕಾರಿ ಆಸ್ಪತ್ರೆ ಕಥೆ: ಸರ್ಕಾರಿ ಆಸ್ಪತ್ರೆ ಕಥೆ:

ಆಸ್ಪತ್ರೆಯಲ್ಲಿ 7 ಜನರು ಸಾವು

ಆಸ್ಪತ್ರೆಯಲ್ಲಿ 7 ಜನರು ಸಾವು

ಮೊದಲ ಅಲೆಯಲ್ಲಿ 312 ಜನ ಸೋಂಕಿತರು ದಾಖಲಾಗಿದ್ದರು. ಉತ್ತಮ ಚಿಕಿತ್ಸೆ ನೀಡುವ ಮೂಲಕ ಅಷ್ಟು ಸೋಂಕಿತರು ಗುಣಮುಖರಾದರು. ಈ ಹಂತದಲ್ಲಿ ಯಾವುದೇ ಸಾವು ಸಂಭವಿಸಲಿಲ್ಲ. ಇನ್ನು ಎರಡನೇ ಹಂತದಲ್ಲಿ 261 ಮಂದಿ ಸೋಂಕಿತರು ದಾಖಲಾಗಿದ್ದರು. ಇವರಿಗೆ ಸಹ ವೈದ್ಯರು ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡುತ್ತಾ ಬಂದರು. 254 ಜನರೂ ಕೊರೊನಾ ಗೆದ್ದರು. 2ನೇ ಅಲೆಯಲ್ಲಿ 7 ಜನ ಮಾತ್ರ ಸಾವನ್ನಪ್ಪಿದ್ದಾರೆ. ಇವರು ಕೊರೊನಾವಲ್ಲ ಬದಲಿಗೆ ಅನ್ಯಕಾರಣಗಳಿಂದ ಮೃತಪಟ್ಟಿದ್ದಾರೆ.

ಆಸ್ಪತ್ರೆಯಲ್ಲಿ ಶುಚಿ-ರುಚಿ

ಆಸ್ಪತ್ರೆಯಲ್ಲಿ ಶುಚಿ-ರುಚಿ

ಕೋವಿಡ್ ಕೇಂದ್ರದಲ್ಲಿ ಎಲ್ಲಾ ವ್ಯವಸ್ಥೆ ಉತ್ತಮವಾಗಿದೆ. ರೋಗಿಗಳಿಗೆ ಕುಡಿಯಲು ಬಿಸಿ ನೀರು, ಕಾಫಿ, ಟೀ ಇದೆ. ಬೆಳಗ್ಗೆ ತಿಂಡಿಗೆ ಚಿತ್ರಾನ್ನ, ಪಲಾವ್, ಇಡ್ಲಿ ಮಾಡಲಾಗುತ್ತದೆ. ಮಧ್ಯಾಹ್ನದ ಊಟಕ್ಕೆ ಚಪಾತಿ, ಪಲ್ಯ, ಅನ್ನ-ಸಾಂಬಾರ್ ನೀಡಲಾಗುತ್ತದೆ. ಸಂಜೆ 4-5 ಗಂಟೆಗೆ ಟೀ, ಕಾಫಿ ವ್ಯವಸ್ಥೆ ಇದೆ. ರಾತ್ರಿ ಊಟಕ್ಕೆ ಮುದ್ದೆ, ಸೊಪ್ಪು ಸಾರು, ಚಪಾತಿ, ರೈಸ್, ಮೊಟ್ಟೆ, ಬಾಳೆ ಹಣ್ಣು ನೀಡಲಾಗುತ್ತದೆ. ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಇದ್ದು, ನೀರಿನ ಕೊರತೆ ಸಹ ಇಲ್ಲ.

ಹೆಚ್ಚಿನ ಸೋಂಕಿತರು ದಾಖಲು

ಹೆಚ್ಚಿನ ಸೋಂಕಿತರು ದಾಖಲು

"ಕೋವಿಡ್ ಎರಡನೇ ಅಲೆ ಸಂದರ್ಭದಲ್ಲಿ ಸೋಂಕಿತ ಪ್ರಕರಣಗಳು ಹೆಚ್ಚಾದಾಗ 30 ಬೆಡ್‌ ವ್ಯವಸ್ಥೆಯನ್ನು 40ಕ್ಕೆ ಏರಿಕೆ ಮಾಡಲಾಯಿತು. ಮೊದಲು ಆಕ್ಸಿಜನ್ ಪೂರೈಕೆ ಕಡಿಮೆ ಇತ್ತು, 15 ದಿನಗಳ ನಂತರ ಎಲ್ಲಾ ರೀತಿಯ ವ್ಯವಸ್ಥೆ ಆಯಿತು. ಮೊದಲ ಹಂತದಲ್ಲಿದಿಂದ ಕೆಲಸ ನಿರ್ವಹಿಸುತ್ತಿರುವುದರಿಂದ ನಮಗೆ ಯಾವುದೇ ರೀತಿಯಲ್ಲಿ ಭಯ ಇರಲಿಲ್ಲ. ನಾವು ಕೂಡ ಲಸಿಕೆ ಪಡೆದುಕೊಂಡಿದ್ದರಿಂದ ಭಯ ಪಡದೇ ಸೋಂಕಿತರ ಜೊತೆ ಬೇರೆಯುತಿದ್ದೆವು. ಸಾವಿನ ಸಂಖ್ಯೆ ಹೆಚ್ಚಾದಾಗ ಸೋಂಕಿತರು ತುಂಬಾ ಭಯ ಪಡುತ್ತಿದ್ದರು. ನಾವು ಆಗ ಧೈರ್ಯ ತುಂಬಿದೆವು" ಎಂದು ವೈದ್ಯೆ ಲಕ್ಷ್ಮೀ ಹೇಳಿದ್ದಾರೆ.

ಒಳ್ಳೆಯ ಸೇವೆ ಸಲ್ಲಿಸುವುದಕ್ಕೆ ಅವಕಾಶ

ಒಳ್ಳೆಯ ಸೇವೆ ಸಲ್ಲಿಸುವುದಕ್ಕೆ ಅವಕಾಶ

"ರೋಗಿಗಳು ನಮಗೆ ಉತ್ತಮ ರೀತಿಯಲ್ಲಿ ಸಹಕಾರ ನೀಡಿದರು. ನಾವು ಅವರಿಗೆ ಧೈರ್ಯ ಹೇಳುವ ಮೂಲಕ ಚಿಕಿತ್ಸೆ ನೀಡಿದೆವು. ನಾವು ಅವರನ್ನು ಕುಟುಂಬದ ಸದಸ್ಯರಲ್ಲೊಬ್ಬರು ಎಂದು ಆರೈಕೆ ಮಾಡುತ್ತಿದ್ದೆವು. ಸಿಬ್ಬಂದಿಗಳ ಸಹಕಾರ, ಕ್ಷೇತ್ರದ ಶಾಸಕರ ಜೊತೆ ನಿರಂತರ ಸಂಪರ್ಕ, ಮೇಲಾಧಿಕಾರಿಗಳ ಸಹಾಯದಿಂದ ಉತ್ತಮ ರೀತಿಯಲ್ಲಿ ಸೇವೆ ಸಲ್ಲಿಸುವುದಕ್ಕೆ ಅವಕಾಶ ಸಿಕ್ಕಿದೆ" ಎಂದು ಡಾ. ಲಕ್ಷ್ಮೀ ಹೇಳಿದ್ದಾರೆ.

Recommended Video

ಜೆಡಿಎಸ್ ನಂತೆಯೇ ರಾಕ್ಷಸ ಕುಟುಂಬ ರಾಜಕಾರಣ ಬಿಜೆಪಿಯಲ್ಲೂ ಇದೆ | Oneindia Kannada

English summary
Maradihalli community health center in Hiriyur taluk of Chitradurga district model for other Covid hospital. Health center has 30 bed facility.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X