ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾಡುಗೊಲ್ಲರ ಹಟ್ಟಿಯಲ್ಲಿ ಶಾಸಕ ಸುಧಾಕರ್ ಗ್ರಾಮ ವಾಸ್ತವ್ಯ!

By ಹಿರಿಯೂರು ಪ್ರತಿನಿಧಿ
|
Google Oneindia Kannada News

ಹಿರಿಯೂರು, ಮಾರ್ಚ್ 26: 2018ರ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ರಾಜಕೀಯ ನಾಯಕರು ಮತದಾರರ ಬಳಿಗೆ ತೆರಳುವ ಪ್ರಕ್ರಿಯೆ ಎಲ್ಲೆಡೆ ಮುಂದುವರೆದಿದೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕು ಜವಗೊಂಡನಹಳ್ಳಿ ಹೋಬಳಿಯ ಕಿಲಾರದಹಳ್ಳಿ ಗೊಲ್ಲರಹಟ್ಟಿಯಲ್ಲಿ ಈಗ ಗ್ರಾಮ ವಾಸ್ತವ್ಯದ ಸಂಭ್ರಮ ಕಂಡು ಬಂದಿದೆ.

ಹಮ್ಮಿಕೊಂಡಿದ್ದ ಕಾಂಗ್ರೆಸ್ ಪಕ್ಷದ ನಡಿಗೆ ಗೊಲ್ಲರಹಟ್ಟಿಯ ಕಡೆಗೆ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಶಾಸಕ ಡಿ. ಸುಧಾಕರ್ ಉಧ್ಘಾಟಿಸಿದರು.ನಂತರ ಮಾತನಾಡಿದ ಶಾಸಕ ಡಿ. ಸುಧಾಕರ್ ಕಾಡುಗೊಲ್ಲ ಸಮುದಾಯ ಮೂಢನಂಬಿಕೆಗಳಿಂದ ಹೊರ ಬರಬೇಕು. ಶೈಕ್ಷಣಿಕವಾಗಿ. ಆರ್ಥಿಕವಾಗಿ ಮುಂದೆ ಬರಬೇಕು ಎಂದು ಹೇಳಿದರು.

ನಾನು ಯಾವುದೇ ಜಾತಿ ರಾಜಕೀಯ ಮಾಡಿಲ್ಲ. ನನಗೆ ಯಾವುದೇ ಜಾತಿ ಇಲ್ಲ. ನಾನು ಶ್ರೀಕೃಷ್ಣನ ಪರಮ ಭಕ್ತ ಎಂದು ಹೇಳಿದರು.

ಕ್ಷೇತ್ರ: ಬರದ ನಾಡಿನ ವೈವಿಧ್ಯಮಯ ಕ್ಷೇತ್ರ ಹಿರಿಯೂರುಕ್ಷೇತ್ರ: ಬರದ ನಾಡಿನ ವೈವಿಧ್ಯಮಯ ಕ್ಷೇತ್ರ ಹಿರಿಯೂರು

ಹಿರಿಯೂರಿನಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಗೊಲ್ಲ ಸಮುದಾಯದ ಮೇಲೆ ಯಾವುದೇ ಕೇಸು ದಾಖಲಿಸಿಲ್ಲ. ಗೊಲ್ಲರಹಟ್ಟಿಗಳಿಗೆ ಸಾಕಷ್ಟು ಅಭಿವೃದ್ಧಿ ಆಖಬೇಕು ಎಂದರು. ಅನುದಾನದಲ್ಲಿ ಹೆಚ್ಚು ಗೊಲ್ಲರಿಗೆ ಸೌಲಭ್ಯ ಕಲ್ಪಿಸಿದ್ದೇನೆ. ಈ ವರ್ಷದಲ್ಲಿ 70 ಗಂಗಾಕಲ್ಯಾಣ ಬೋರ್ ವೆಲ್ ಗಳನ್ನ ಕೊಡಲಾಗಿದೆ ಎಂದು ಹೇಳಿದರು.

ಸಮುದಾಯದ ಮೇಲೆ ಯಾವುದೇ ಕೇಸು ದಾಖಲಿಸಿಲ್ಲ

ಸಮುದಾಯದ ಮೇಲೆ ಯಾವುದೇ ಕೇಸು ದಾಖಲಿಸಿಲ್ಲ

ಹಿರಿಯೂರಿನಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಗೊಲ್ಲ ಸಮುದಾಯದ ಮೇಲೆ ಯಾವುದೇ ಕೇಸು ದಾಖಲಿಸಿಲ್ಲ. ಗೊಲ್ಲರಹಟ್ಟಿಗಳಿಗೆ ಸಾಕಷ್ಟು ಅಭಿವೃದ್ಧಿ ಆಖಬೇಕು ಎಂದರು. ಅನುದಾನದಲ್ಲಿ ಹೆಚ್ಚು ಗೊಲ್ಲರಿಗೆ ಸೌಲಭ್ಯ ಕಲ್ಪಿಸಿದ್ದೆನೆ. ಈ ವರ್ಷದಲ್ಲಿ 70 ಗಂಗಾಕಲ್ಯಾಣ ಬೋರ್ ವೆಲ್ ಗಳನ್ನ ಕೊಡಲಾಗಿದೆ ಎಂದು ಹೇಳಿದರು.

ಕೆಪಿಸಿಸಿ ಹಿಂದುಳಿದ ರಾಜ್ಯ ಉಪಾಧ್ಯಕ್ಷ

ಕೆಪಿಸಿಸಿ ಹಿಂದುಳಿದ ರಾಜ್ಯ ಉಪಾಧ್ಯಕ್ಷ

ನಂತರ ಮಾತನಾಡಿದ ಕೆಪಿಸಿಸಿ ಹಿಂದುಳಿದ ರಾಜ್ಯ ಉಪಾಧ್ಯಕ್ಷ ,ಈ ದೊಡ್ಡನಾಗಯ್ಯ ಕಾಡುಗೊಲ್ಲರು ಹಿಂದುಳಿದಿದ್ದು ಮೂಲ ಭೂತ ಸೌಕರ್ಯಗಳಿಂದ ಹಿಂದುಳಿದಿದ್ದು ತಮ್ಮದೆ ಆದ ಆಚಾರ ವಿಚಾರಗಳನ್ನು ಹೊಂದಿದ್ದು ಬದುಕನ್ನು ಕಟ್ಟಿಕೊಂಡು ಸ್ವಾಭಿಮಾನಿಗಳಾಗಿ ಬದುಕುತ್ತಿದ್ದಾರೆ ಎಂದರು. ರಾಜ್ಯದ ತುಮಕೂರು ಮತ್ತು ಚಿತ್ರದುರ್ಗ ದಲ್ಲಿ ಅತಿ ಹೆಚ್ಚಾಗಿ ಕಾಡುಗೊಲ್ಲರು ವಾಸಿಸುತ್ತಿದ್ದು ಇನ್ನು ಸಾಕಷ್ಟು ಗೊಲ್ಲರಹಟ್ಟಿಗಳು ಅಭಿವೃದ್ಧಿ ಹೊಂದಬೇಕು ಎಂದರು.

ಎಂ. ಎಲ್. ಸಿ. ಜಯಮ್ಮ ಬಾಲರಾಜ್

ಎಂ. ಎಲ್. ಸಿ. ಜಯಮ್ಮ ಬಾಲರಾಜ್

ಸ್ವಾತಂತ್ಯ ಭಾರತದಲ್ಲಿ ಮೊದಲನೆ ಬಾರಿಗೆ ವಿಧಾನ ಸೌಧ ಪ್ರವೇಶಿಸಿದ ಕೀರ್ತಿ ಕಾಡುಗೊಲ್ಲ ಮಹಿಳೆ ಎಂ. ಎಲ್. ಸಿ. ಜಯಮ್ಮ ಬಾಲರಾಜ್ ನವರನ್ನು ನೇಮಕ ಮಾಡಿದ ಕಾಂಗ್ರೇಸ್ ಸರ್ಕಾರದ ಸಿದ್ದರಾಮಯ್ಯನವರಿಗೆ ಅಭಿನಂದನೆಗಳು ಎಂದರು.

ಗೊಲ್ಲರಹಟ್ಟಿಗಳು ಸಾಕಷ್ಟು ಬೆಳವಣಿಗೆ

ಗೊಲ್ಲರಹಟ್ಟಿಗಳು ಸಾಕಷ್ಟು ಬೆಳವಣಿಗೆ

ಅಲೆಮಾರಿಗಳಾದ ನಮಗೆ ಸರ್ಕಾರದಿಂದ 100 ಕೋಟಿ ಅನುದಾನ ನೀಡಿದ್ದು. ಮುಂದಿನ ದೀನಗಳಲ್ಲಿ ಗೊಲ್ಲರಹಟ್ಟಿಗಳು ಸಾಕಷ್ಟು ಬೆಳವಣಿಗೆ ಆಗಬೇಕು ಎಂದರು. ಕಾಡುಗೊಲ್ಲರಿಗೆ ಚಿತ್ರದುರ್ಗ ಜಿಲ್ಲೆಯಲ್ಲಿ ಒಂದು ಟಿಕೆಟ್ ಕೊಡುವ ಮೂಲಕ ರಾಜಕೀಯ ಪ್ರಾದಿನಿತ್ಯತೆ ಕಲ್ಪಿಸಬೇಕು ಎಂದು ಹೇಳಿದರು.

ಕಾಂಗ್ರೆಸ್ ಕಾರ್ಯಕರ್ತರು

ಕಾಂಗ್ರೆಸ್ ಕಾರ್ಯಕರ್ತರು

ಇದೇ ಸಂದರ್ಭದಲ್ಲಿ ಎಂ. ಎಲ್. ಸಿ. ಜಯಮ್ಮ ಬಾಲರಾಜ್. ಜಿ.ಪ. ಸದಸ್ಯ ಪಾಪಣ್ಣ. ನಾಗೆಂದ್ರನಾಯ್ಕ. ಮೀಸೆ ಮಹಾಲಿಂಗಪ್ಪ. ಪಾತಲಿಂಗಪ್ಪ. ಚಿದಾನಂದಪ್ಪ. ರಂಗಯ್ಯ. ಸಮಾಜದ ಮುಖಂಡರು ಮತ್ತು ಸಾವಿರಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು. ಕಾರ್ಯಕ್ರಮ ಆರಂಭಕ್ಕೂ ಮುನ್ನ ವಿವಿಧ ಕಾರ್ಯಕ್ರಮಗಳೊಂದಿಗೆ ಆರಂಭವಾಯಿತು..

English summary
Hiriyur MLA D Sudhakar and other congress leaders march towards Kadugollarahatti as a part of village stay programme.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X