ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಳ್ಳಕೆರೆ ಶಾಸಕನಿಂದ ದಿನನಿತ್ಯ ಬಡವರಿಗೆ ಅನ್ನದಾಸೋಹ

By ಚಿತ್ರದುರ್ಗ ಪ್ರತಿನಿಧಿ
|
Google Oneindia Kannada News

ಚಿತ್ರದುರ್ಗ, ಏಪ್ರಿಲ್ 25: ಕಳೆದ ಒಂದು ತಿಂಗಳಿನಿಂದ ಲಾಕ್ ಡೌನ್ ಜಾರಿಯಾಗಿದ್ದು, ಬಡಜನರು, ಕೂಲಿ ಕಾರ್ಮಿಕರು ಆಹಾರವಿಲ್ಲದೇ ಪರದಾಡುತ್ತಿದ್ದಾರೆ. ಈ ನಡುವೆ ಜಿಲ್ಲೆಯಲ್ಲಿ ಇಂಥ ಬಡವರಿಗೆ, ನಿರ್ಗತಿಕ ಜನರಿಗೆ ಮಧ್ಯಾಹ್ನದ ಊಟ ನೀಡಿ ಹಸಿವು ನೀಗಿಸುವ ಕೆಲಸಕ್ಕೆ ಮುಂದಾಗಿದ್ದಾರೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಕ್ಷೇತ್ರದ ಶಾಸಕ ಟಿ. ರಘುಮೂರ್ತಿ.

ದಾವಣಗೆರೆಯಲ್ಲಿ ಮಳೆ, ಗಾಳಿಗೆ ಅಲೆಮಾರಿಗಳ ಬದುಕು ಬೀದಿಗೆದಾವಣಗೆರೆಯಲ್ಲಿ ಮಳೆ, ಗಾಳಿಗೆ ಅಲೆಮಾರಿಗಳ ಬದುಕು ಬೀದಿಗೆ

ಕಳೆದ ಏಳು ವರ್ಷಗಳಿಂದಲೂ ಹಲವು ಜನಪರ ಕೆಲಸಗಳಲ್ಲಿ ತೊಡಗಿಕೊಂಡಿರುವ ರಘುಮೂರ್ತಿ ಅವರು ಲಾಕ್ ಡೌನ್ ಸಮಯದಲ್ಲಿ ಬಡವರ ನೆರವಿಗೆ ಮುಂದಾಗಿ ದಿನವೂ ಸುಮಾರು 500 ಮಂದಿಗೆ ಅನ್ನದಾನ ಮಾಡುತ್ತಿದ್ದಾರೆ. ಪ್ರತಿನಿತ್ಯ ಹಳ್ಳಿಗಳಿಗೆ ಭೇಟಿ ನೀಡಿ ರೈತರ ಸಮಸ್ಯೆ ಹಾಗೂ ಜನರ ಪಡಿತರ ಸಮಸ್ಯೆಗೆ ಸ್ಪಂದಿಸುವ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ.

MLA Raghumurthy Providing Food To Poor People

ಶಾಸಕರ ಈ ಜನಪರ ಕಾರ್ಯಗಳಿಗೆ ಕ್ಷೇತ್ರದ ಜನತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮೊನ್ನೆ ಹಿರಿಯೂರು ತಾಲೂಕಿನ ವಿವಿ ಸಾಗರ ಜಲಾಶಯದಿಂದ 0.25 ಟಿಎಂಸಿ ನೀರನ್ನು ವೇದಾವತಿ ನದಿ ಮೂಲಕ ಚಳ್ಳಕೆರೆ ತಾಲ್ಲೂಕಿಗೆ ಹರಿಸುವ ಕಾರ್ಯಕ್ಕೆ ಚಾಲನೆ ನೀಡಿದಾಗ ಅಲ್ಲಿನ ಜನತೆ ಹೂವು ಸುರಿದು ಸ್ವಾಗತಿಸಿದ್ದಾರೆ.

English summary
Challakere Mla T Raghumurthy is providing food to hundreds of poor people daily,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X