ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮತಾಂತರ ಕುರಿತು ಸದನದಲ್ಲಿ ಶಾಸಕ ಗೂಳಿಹಟ್ಟಿ ಶೇಖರ್ ಸುಳ್ಳು ಹೇಳಿಕೆ: ಸುಲೇಮಾನ್ ರಾಜಕುಮಾರ್

By ಚಿತ್ರದುರ್ಗ ಪ್ರತಿನಿಧಿ
|
Google Oneindia Kannada News

ಚಿತ್ರದುರ್ಗ, ಸೆಪ್ಟೆಂಬರ್ 22: ರಾಜ್ಯದಲ್ಲಿ ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡುವ ಪ್ರಕ್ರಿಯೆ ಚಟುವಟಿಕೆ ವ್ಯಾಪಕವಾಗಿದ್ದು, ಸ್ವತಃ ನನ್ನ ತಾಯಿಯನ್ನೇ ಆಮಿಷವೊಡ್ಡಿ ಮತಾಂತರ ಮಾಡಲಾಗಿದೆ ಎಂಬ ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್ ವಿಧಾನಸಭೆ ಅಧಿವೇಶನದಲ್ಲಿ ಮಂಗಳವಾರ ಹೇಳಿದ್ದರು.

ಮತಾಂತರ ಕುರಿತು ಅಧಿವೇಶನದಲ್ಲಿ ಶಾಸಕ ಗೂಳಿಹಟ್ಟಿ ಶೇಖರ್ ತಪ್ಪು ಆಧಾರದ ಮೇಲೆ ವಿಷಯ ಪ್ರಸ್ತಾಪಿಸಿ, ಸದನದಲ್ಲಿ ಸುಳ್ಳು ಹೇಳಿಕೆ ಕೊಟ್ಟಿದ್ದಾರೆಂದು ಕ್ರಿಶ್ಚಿಯನ್ ಫಾಸ್ಟರ್ ಫಾರ್ ವ್ಯುಮನ್ ರೈಟ್ಸ್ ರಾಜ್ಯ ಕಾರ್ಯದರ್ಶಿ ಸುಲೇಮಾನ್ ರಾಜಕುಮಾರ್ ತಿರುಗೇಟು ನೀಡಿದ್ದಾರೆ.

ಚಿತ್ರದುರ್ಗ ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಹೊಸದುರ್ಗ ವಿಧಾನಸಭಾ ಕ್ಷೇತ್ರದ ಶಾಸಕರಾದ ಗೂಳಿಹಟ್ಟಿ ಶೇಖರ್ ರಾಜ್ಯ ವಿಧಾನಸಭಾ ಅಧಿವೇಶನದ ಶೂನ್ಯ ವೇಳೆಯಲ್ಲಿ ಕ್ರೈಸ್ತ ಮಿಷನರಿಗಳು ರಾಜ್ಯದಲ್ಲಿ ವ್ಯಾಪಕವಾಗಿ ಮತಾಂತರ ಮಾಡುತ್ತಿದ್ದಾರೆ ಎಂದು ತಪ್ಪು ಗ್ರಹಿಕೆಯ ಆಧಾರದ ಮೇಲೆ ವಿಷಯ ಪ್ರಸ್ತಾಪಿಸಿದ್ದಾರೆ. ಮತಾಂತರವನ್ನು ತಡೆಯಲು ಹೋದವರ ಮೇಲೆ ಜಾತಿ ನಿಂದನೆ ಮತ್ತು ಅತ್ಯಾಚಾರ ಪ್ರಕರಣಗಳನ್ನು ಹಾಕುತ್ತಾರೆಂದು ಸದನದಲ್ಲಿ ಸುಳ್ಳು ಹೇಳಿಕೆ ಕೊಟ್ಟಿರುತ್ತಾರೆ," ಎಂದರು.

MLA Goolihatti Shekhars False Statement In The Assembly Session On Conversion: Suleiman Rajkumar

"ಅಂತಹದೊಂದು ಒಂದೇ ಒಂದು ಪ್ರಕರಣ ದಾಖಲಾಗಿಲ್ಲ. ಪ್ರಜಾಪ್ರಭುತ್ವದ ದೇಗುಲವಾಗಿರುವ ವಿಧಾನಸೌಧದ ಅಧಿವೇಶನದಲ್ಲಿ ಪ್ರತ್ಯೇಕ ಒಂದು ಪ್ರಕರಣವನ್ನಲ್ಲದೇ ಇಡೀ ಸಮುದಾಯವನ್ನೇ ಗುರಿಯಾಗಿಸಿಕೊಂಡು ಅವಮಾಸಿದ್ದನ್ನು ಕರ್ನಾಟಕದ ಎಲ್ಲಾ ಕ್ರೈಸ್ತ ಸಮುದಾಯದವರು ಒಕ್ಕೊರಲಿನಿಂದ ಖಂಡಿಸುತ್ತದೆ," ಎಂದು ತಿಳಿಸಿದರು.

"ಈ ಬಗ್ಗೆ ಮಾನ್ಯ ಸಭಾಪತಿಗಳು, ಗೃಹ ಸಚಿವರು ಮತ್ತಿತರ ಸದಸ್ಯರುಗಳು ಮಾತನಾಡಿ, ರಾಜ್ಯದಲ್ಲಿ ಮತಾಂತರ ವಿರೋಧಿ ಕಾನೂನನ್ನು ಜಾರಿಗೆ ತರಲು ಅಭಿಪ್ರಾಯ ಪಟ್ಟಿದ್ದಾರೆ. ಕರ್ನಾಟಕ ಸರ್ಕಾರ ಈ ವಿಷಯವಾಗಿ ಸವಿಸ್ತಾರವಾಗಿ ಸಭೆಯಲ್ಲಿ ಚರ್ಚಿಸಬೇಕು ಹಾಗೂ ಎಲ್ಲಾ ರಾಜಕೀಯ ಪಕ್ಷದ ಮುಖಂಡರೂ ಮತ್ತು ವಿರೋಧ ಪಕ್ಷದ ನಾಯಕರು ಪ್ರಸ್ತಾಪಿಸಿದ ಈ ವಿಷಯವನ್ನು ಚರ್ಚೆಗೆ ತೆಗೆದುಕೊಳ್ಳಲಿ," ಎಂದು ಒತ್ತಾಯಿಸಿದರು.‌

"ಶಾಂತಿಪ್ರಿಯರಾದ ಕ್ರೈಸ್ತರ ಸ್ಪಷ್ಟಿಕರಣವೇನೆಂದರೆ, ಜಗತ್ತಿನಾದ್ಯಂತ ಭಾನುವಾರ ನಡೆಯುವ ಪ್ರಾರ್ಥನೆಗಳಂತೆ ನಾವು ಪ್ರಾರ್ಥನೆಗಳಲ್ಲಿ ತೊಡಗಿರುವಾಗ ಕೆಲವು ಹಿಂದೂಪರ ಸಂಘಟನೆಗಳ ಹೆಸರಿನಲ್ಲಿ ಪ್ರಾರ್ಥನಾಲಯಗಳ ಮೇಲೆ ದಾಳಿ ಮಾಡಿ ಪೂಜ್ಯ ಗುರುಗಳನ್ನು ಎಲ್ಲರ ಎದುರೇ ಅವಾಚ್ಯ ಶಬ್ದಗಳಲ್ಲಿ ನಿಂದಿಸಿ, ಪವಿತ್ರ ಸಂಸ್ಕಾರದ ವಸ್ತುಗಳನ್ನು ಅಪವಿತ್ರಗೊಳಿಸುವುದು, ಬೈಬಲ್ ಗ್ರಂಥವನ್ನು ಸುಟ್ಟು ನಮ್ಮ ಭಾವನೆಗಳಿಗೆ ಘಾಸಿಯನ್ನುಂಟು ಮಾಡುತ್ತಿದ್ದಾರೆ,'' ಎಂದು ಆರೋಪಿಸಿದರು.

ಪ್ರಾರ್ಥನೆ ಮಾಡುವ ಸಂದರ್ಭದಲ್ಲಿ ಎಲ್ಲರನ್ನು ಅಪರಾಧಿಗಳ ಹಾಗೆ ಒಂದು ಕಡೆಗೆ ಕೂರಿಸಿ ಕೆಲವೊಮ್ಮೆ ಹಲ್ಲೆ ಸಹ ಮಾಡುತ್ತಿದ್ದಾರೆ. ಅವರನ್ನು ನೀವು ಇಲ್ಲಿಗೆ ಏಕೆ ಬಂದ್ದೀದ್ದೀರಿ? ಎಂದು ಅವಮಾನಿಸಿ, ನೀವು ಇಲ್ಲಿಗೆ ಬಂದರೆ ನಿಮಗೆ ಪಡಿತರ ಚೀಟಿ ರದ್ದುಮಾಡುತ್ತೇವೆ. ಸರ್ಕಾರದಿಂದ ಯಾವ ಸೌಲಭ್ಯಗಳೂ ನಿಮಗೆ ಸಿಗುವುದಿಲ್ಲ ಎಂದು ಹೆದರಿಸಿ ಎಲ್ಲರ ಪೂರ್ಣ ವಿವರಗಳನ್ನು ಪಡೆದು ಅಮಾಯಕ ಜನರಲ್ಲಿ ಭಯ ಹುಟ್ಟಿಸಿ, ನಂತರ ಗುರುಗಳ ಮೇಲೆ ಮತಾಂತರ ಮಾಡುತ್ತಿದ್ದಾರೆಂದು ಸುಳ್ಳು ಆರೋಪ ಹೊರಿಸಿ ಅವರುಗಳ ಮೇಲೆ ಮೊಕದ್ದಮೆಗಳನ್ನು ದಾಖಲು ಮಾಡುತ್ತಿರುವುದು ಸರ್ವೇ ಸಾಮಾನ್ಯವಾಗಿರುತ್ತದೆ.

ಆದರೆ ಇಲ್ಲಿಯವರೆಗೆ ಆಸೆ, ಆಮಿಷ ಒಡ್ಡಿ ಮತಾಂತರ ಮಾಡಲಾಗಿರುವ ಯಾವ ಪ್ರಕರಣಗೂ ಸಹ ಸಾಬೀತಾಗಿರುವುದಿಲ್ಲ. ಕ್ರೈಸ್ತ ಜಾನಾಂಗವನ್ನೇ ಗುರಿ ಮಾಡಿಕೊಂಡು ಮತಾಂತರದ ಹೆಸರಿನಲ್ಲಿ ಈಗಾಗಲೇ ದೇಶದಾದ್ಯಂತ ಹಾಗೂ ವಿಶೇಷವಾಗಿ ನಮ್ಮ ರಾಜ್ಯದಲ್ಲೂ ಹಲವು ಹಿಂದೂಪರ ಸಂಘಟನೆಗಳು ಕಳೆದ ಹಲವಾರು ವರ್ಷಗಳಿಂದ ನಮ್ಮ ಧಾರ್ಮಿಕ ಕೇಂದ್ರಗಳು, ಧರ್ಮಗುರುಗಳು ಮತ್ತು ಭಕ್ತಾದಿಗಳ ಮೇಲೆ ದಾಳಿ ಮಾಡಿ ಆಸ್ತಿಪಾಸ್ತಿಗಳನ್ನು ಹಾಳುಮಾಡುವುದು ಎಗ್ಗಿಲ್ಲದೇ ನಡೆಯುತ್ತಿದೆ.

ದೌರ್ಜನ್ಯ ಮಾಡುವ ಸಂಘಟನೆಗಳ ಸುಳ್ಳು ವರದಿ, ಸುಳ್ಳು ಹೇಳಿಕೆಗಳನ್ನು ಆಧಾರವಾಗಿ ಮಾಡಿಕೊಂಡು ಪುಷ್ಟಿ ನೀಡುವಂತೆ ಅವರಿಗೆ ಪೂರಕವಾಗಿ ಯಾವುದೇ ಆಸೆ, ಆಮಿಷೆ ಒತ್ತಡಗಳಿಲ್ಲದೇ ಪ್ರಾರ್ಥನೆಗಳಲ್ಲಿ ಭಾಗವಹಿಸುವ ಭಕ್ತರ ಧಾರ್ಮಿಕ ಸ್ವಾತಂತ್ರವನ್ನು ಕಿತ್ತುಕೊಳ್ಳುವ ನಿಟ್ಟಿನಲ್ಲಿ ಮತಾಂತರ ಕಾಯ್ದೆಗೆ ತಿದ್ದುಪಡಿಯನ್ನು ಮಾಡಿ ಕ್ರೈಸ್ತರನ್ನು ಒಕ್ಕಲೆಬ್ಬಿಸುವ ಹುನ್ನಾರ ಮಾಡುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ ಎಂದರು.

ನಾವುಗಳು ಸಂವಿಧಾನಬದ್ಧವಾದ ಕಾನೂನಿನ ಮೇಲೆ ನಾವು ನಂಬಿಕೆ ಇಟ್ಟಿದ್ದೇವೆ. ಸಂವಿಧಾನದ ಪೀಠಿಕೆಯಲ್ಲಿ ಏನಿದಿಯೋ ಅದಕ್ಕೆ ತಕ್ಕಂತೆ ಕ್ರೈಸ್ತ ಜನಾಂಗದವರಾದ ನಾವು ಬದುಕುತ್ತಿದ್ದೇವೆ. ನಾವು ಯಾವುದೇ ಜನಾಂಗ, ಸಂಘಟನೆ ಮತ್ತು ಧರ್ಮಗಳ ಮೇಲೆ ದಾಳಿ ಮಾಡಿಲ್ಲ. ಎಲ್ಲಾ ಕಾನೂನುಗಳನ್ನು ನಾವು ಗೌರವಿಸುತ್ತೇವೆ.

ಶಾಂತಿಪ್ರಿಯರಾದ ನಮ್ಮ ಸಮಾಜವು ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತದೆ ಇಲ್ಲಿಯ ತನಕ ಯೇಸು ಕ್ರಿಸ್ತರಂತೆ ಮೌನವಾಗಿಯೇ ಅನ್ಯಾಯಗಳನ್ನು ಸಹಿಸಿಕೊಂಡು ಬಂದಿದ್ದೇವೆ. ಹೀಗೆಯೇ ನಮ್ಮ ಮೇಲೆ ನಿರಂತರ ದೌರ್ಜನ್ಯ ದಬ್ಬಾಳಿಕೆಗಳು ಮುಂದುವರೆದಲ್ಲಿ ನಾವು ಶಾಂತಿಯುತವಾದ ಹೋರಾಟ ಹಾಗೂ ಕಾನೂನುಬದ್ಧವಾದ ಹೋರಾಟಗಳನ್ನು ಮಾಡುತ್ತೇವೆ ಎನ್ನುವ ಮೂಲಕ ಮತಾಂತರ ಕಾಯ್ದೆ ಜಾರಿಗೆ ತರಲು ಮುಂದಾಗಿರುವ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ಸುದ್ದಿಗೋಷ್ಠಿಯಲ್ಲಿ ಫಾಸ್ಟರ್ ಅಸೋಸಿಯೇಷನ್ ಅಧ್ಯಕ್ಷ ಅಲೆಕ್ಸಾಂಡರ್, ಉಪಾಧ್ಯಕ್ಷ ಸತೀಶ್, ಕಾರ್ಯದರ್ಶಿ ಗಂಗನಾಯ್ಕ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

English summary
MLA Goolihatti Shekhar's False Statement In The Assembly Session On Conversion in the state, Christian Foster for Human Rights State Secretary Suleman Rajakumar said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X