ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿತ್ರದುರ್ಗ; ಸರ್ಕಾರಿ ಅಧಿಕಾರಿ ಫೇಸ್‌ಬುಕ್ ಹ್ಯಾಕ್, ಹಣ ಪಡೆದು ವಂಚನೆ

By ಚಿತ್ರದುರ್ಗ ಪ್ರತಿನಿಧಿ
|
Google Oneindia Kannada News

ಚಿತ್ರದುರ್ಗ, ಜುಲೈ 25; ದುಷ್ಕರ್ಮಿಗಳು ಚಳ್ಳಕೆರೆಯ ಲೋಕೋಪಯೋಗಿ ಇಲಾಖೆ ಕಿರಿಯ ಅಭಿಯಂತರ ರಾಜಪ್ಪ ಫೇಸ್ ಬುಕ್ ಖಾತೆ ಹ್ಯಾಕ್ ಮಾಡಿದ್ದಾರೆ. ಖಾತೆಯಲ್ಲಿದ್ದ ಸ್ನೇಹಿತರಿಗೆ ಸಂದೇಶ ಕಳಿಸಿ ಸಾವಿರಾರು ರೂಪಾಯಿ ಹಣ ಪಡೆದು ವಂಚನೆ ಮಾಡಿದ್ದಾರೆ.

ರಾಜಪ್ಪ ಫೇಸ್ ಬುಕ್ ಖಾತೆ ತೆರೆದಿದ್ದರೂ ಅದನ್ನು ಬಳಕೆ ಮಾಡದೇ ಎರಡು ವರ್ಷಗಳು ಕಳೆದಿವೆ. ದುಷ್ಕರ್ಮಿಗಳು ರಾಜಪ್ಪ ಖಾತೆ ಹ್ಯಾಕ್ ಮಾಡಿದ್ದಾರೆ. ರಾಜಪ್ಪ ಆಸ್ಪತ್ರೆಯಲ್ಲಿದ್ದಾರೆ ಎಂದು ಖಾತೆಯಲ್ಲಿರುವ ಸ್ನೇಹಿತರಿಗೆ ಸಂದೇಶ ಕಳಿಸಿದ್ದಾರೆ.

ನಕಲಿ ಫೇಸ್ ಬುಕ್ ಖಾತೆ ತೆರೆದು ಸಚಿವ ಸೋಮಶೇಖರ್ ಆಪ್ತರಿಗೆ ಗಾಳನಕಲಿ ಫೇಸ್ ಬುಕ್ ಖಾತೆ ತೆರೆದು ಸಚಿವ ಸೋಮಶೇಖರ್ ಆಪ್ತರಿಗೆ ಗಾಳ

ತುರ್ತಾಗಿ ಹಣ ಬೇಕಾಗಿದೆ ಎಂದು ಹಣವನ್ನು ಪಡೆಯಲಾಗಿದೆ. ಇದು ತಿಳಿಯುಷ್ಟರಲ್ಲಿ ಸುಮಾರು 40 ರಿಂದ 50 ಸಾವಿರ ಹಣವನ್ನು ಸ್ನೇಹಿತರಿಂದ ಪಡೆಯಲಾಗಿದೆ. ಸ್ನೇಹಿತರು ಫೋನ್ ಮಾಡಿ ಕೇಳಿದಾಗಲೇ ಖಾತೆ ಹ್ಯಾಕ್ ಆಗಿರುವುದು ರಾಜಪ್ಪಗೆ ತಿಳಿದಿದೆ.

ಮೋಸದ ಬಗ್ಗೆ ಫೇಸ್ ಬುಕ್ ನಲ್ಲಿ ಲೈವ್ ಮಾಡಿ ಸಾವಿಗೆ ಶರಣಾದ ಯುವಕ !ಮೋಸದ ಬಗ್ಗೆ ಫೇಸ್ ಬುಕ್ ನಲ್ಲಿ ಲೈವ್ ಮಾಡಿ ಸಾವಿಗೆ ಶರಣಾದ ಯುವಕ !

Miscreants Create Fake Facebook Account And Cheated People

"ಫೇಸ್ ಬುಕ್ ಖಾತೆಯನ್ನು ಬಳಸದೇ ಸುಮಾರು ಎರಡು ವರ್ಷಗಳು ಕಳೆದಿವೆ. ರಾತ್ರಿಯಿಂದ ನನ್ನ ಫೇಸ್ ಬುಕ್ ಖಾತೆಯನ್ನು ಹ್ಯಾಕ್ ಮಾಡಿ, ನನ್ನ ಹೆಸರಿನಲ್ಲಿ ಸಂದೇಶ ಕಳಿಸಿ ಸ್ನೇಹಿತರಿಂದ ನನ್ನ ಹೆಸರಿನಲ್ಲಿ ಹಣವನ್ನು ಪಡೆಯಲಾಗಿದೆ" ಎಂದು ರಾಜಪ್ಪ ಹೇಳಿದ್ದಾರೆ.

ಶಾಸಕರ ಹೆಸರೇಳಿ ಶಾಸಕಿ ರೂಪಾಲಿ ನಾಯ್ಕ್‌ಗೆ 50 ಸಾವಿರ ರೂ. ವಂಚನೆಶಾಸಕರ ಹೆಸರೇಳಿ ಶಾಸಕಿ ರೂಪಾಲಿ ನಾಯ್ಕ್‌ಗೆ 50 ಸಾವಿರ ರೂ. ವಂಚನೆ

ಫೇಸ್ ಬುಕ್ ಖಾತೆ ಹ್ಯಾಕ್ ಆಗಿದ್ದು ತಿಳಿದ ತಕ್ಷಣ ಖಾತೆಯನ್ನು ರದ್ದು ಮಾಡಿದ್ದಾರೆ. ಹಾಗೆಯೇ ಸ್ನೇಹಿತರಿಗೆಲ್ಲಾ ವಾಟ್ಸಪ್‌ನಲ್ಲಿ ಮೆಸೇಜ್ ಹಾಕಿ, ದುಡ್ಡು ಹಾಕದಂತೆ ತಿಳಿಸಿದ್ದಾರೆ.

ದುಷ್ಕರ್ಮಿಯ ಸಂದೇಶ ಕಳಿಸಲು ಬಳಕೆ ಮಾಡಿದ ನಂಬರ್ ಉತ್ತರ ಪ್ರದೇಶ ಎಂದು ತೋರಿಸುತ್ತಿದೆ. ರಾಜಪ್ಪ ವಂಚನೆ ಬಗ್ಗೆ ಚಿತ್ರದುರ್ಗದ ಸೈಬರ್ ಕ್ರೈಂ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

Recommended Video

ಖಚಡ ಮಂತ್ರಿಗಳಿಂದ ಯಡಿಯೂರಪ್ಪನಿಗೆ ಸಂಕಷ್ಟ | Oneindia Kannada

English summary
Miscreants create fake facebook account in the name of PWD department junior engineer and cheated by taking money from his friends. Engineer working in Challakere.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X