ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿದ್ದರಾಮಯ್ಯಗೆ ಮಾತ್ರನಾ ಜವಾಬ್ದಾರಿ ಇರೋದು, ನಮ್ಗಿಲ್ವಾ?

By ಚಿತ್ರದುರ್ಗ ಪ್ರತಿನಿಧಿ
|
Google Oneindia Kannada News

ಚಿತ್ರದುರ್ಗ, ಮೇ 20: ''ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮಾತ್ರಾನಾ ಜವಾಬ್ದಾರಿ ಇರೋದು ಬೇರೆಯವರಿಗೆ ಯಾರಿಗೂ ಜವಾಬ್ದಾರಿ ಇಲ್ವಾ'' ಎಂದು ಕೃಷಿ ಸಚಿವ ಬಿಸಿ ಪಾಟೀಲ್ ಸಿದ್ದುಗೆ ಟಾಂಗ್ ನೀಡಿದರು.

ಚಿತ್ರದುರ್ಗ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು "ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ, ಬೇಜವಾಬ್ದಾರಿ ಸರ್ಕಾರ ಎಂದು ಹೇಳಿಕೆ ನೀಡಿದ್ದರು, ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅವರು ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಹೇಗೆ ಜವಬ್ದಾರಿ ಇತ್ತು ಎಂಬುದನ್ನು ನಾವು ನೋಡಿದ್ದೇವೆ. ಮಳೆಹಾನಿ ಬಗ್ಗೆ ನಾವು ವರದಿ ತರಿಸಿಕೊಂಡಿದ್ದೇವೆ. ನಮಗೂ ಗೊತ್ತಿದೆ ನಾವು ಕೆಲಸ ಮಾಡುತ್ತಿದ್ದೇವೆ. ಇದೇ ಉದ್ದೇಶಕ್ಕೆ ಮುಂಗಾರು ಮಳೆ ಬಂದಿರುವುದರಿಂದ ಜಿಲ್ಲೆಗೆ ಬಂದಿದ್ದೇನೆ. ದಾವಣಗೆರೆ ಜಿಲ್ಲೆಯಲ್ಲಿ 1-1500 ಎಕರೆಯಲ್ಲಿ ಬೆಳೆ ನಾಶವಾಗಿದೆ ಎಂದು ಹೇಳಿದ್ದಾರೆ ಅಲ್ಲಿಗೆ ಭೇಟಿ ನೀಡುತ್ತಿದ್ದೇನೆ ಎಂದು ಹೇಳಿದರು.

ಅಕಾಲಿಕ ಮಳೆಯಿಂದ ನಷ್ಟ ಉಂಟಾಗಿರುವ ಕುರಿತು ಮತ್ತು ಮುಂಜಾಗ್ರತಾ ಕ್ರಮಗಳ ಬಗ್ಗೆ ಸಭೆ ನಡೆಸಲಾಗಿದೆ. ಮುಂಗಾರು ಆರಂಭ ಆಗಿರುವುದರಿಂದ ಬಿತ್ತನೆ ಬೀಜ ಗೊಬ್ಬರದ ಕುರಿತು ಮಾಹಿತಿ ಪಡೆದಿದ್ದೇನೆ ಎಂದು ತಿಳಿಸಿದರು. ಅಕ್ರಮ ದಾಸ್ತಾನು ಮಾಡಿ ಕೃತಕ ಅಭಾವ ಸೃಷ್ಟಿಸಿದರೆ ಸೂಕ್ತ ಕ್ರಮಕ್ಕೆ ಸೂಚನೆ ನೀಡಲಾಗಿದೆ. 40 ಹೆಕ್ಟೇರ್ ತೋಟಗಾರಿಕೆ ಬೆಳೆಯಲ್ಲಿ ನಷ್ಟ ಉಂಟಾಗಿದೆ ಎಂದು ಹೇಳಿದರು.

Minister BC Patil takes on Siddaramaiah

ಸಿದ್ದು ಮತ್ತು ಹೆಚ್ಡಿಕೆಗೆ:

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಕಾಮಾಲೆ ಕಣ್ಣಿಗೆ ಜಗತ್ತು ಹಳದಿ ಎಂಬಂತೆ ಕಾಣುತ್ತಿದೆ. ರಾಜಕೀಯದಲ್ಲಿ ಅಸ್ತಿತ್ವ ಇಲ್ಲದ ಕಾರಣಕ್ಕೆ ಏನಾದರೊಂದು ಮಾಧ್ಯಮಗಳ ಮುಂದೆ ಹೇಳಿಕೆ ಕೊಡುತ್ತಾರೆ. ಇನ್ನು ಕೋಮುಭಾವನೆ ಬಿತ್ತುವ ಸಂಘಟನೆಗಳನ್ನು ಬಂದ್ ಮಾಡಬೇಕು ಎಂಬ ಎಂಬಿ ಪಾಟೀಲ್ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಕೃಷಿ ಸಚಿವರು "ಮೊದಲು ಅವರು ಮುಸ್ಲೀಂ ಸಂಘಟನೆಗಳನ್ನು ಬಂದ್ ಮಾಡಲಿ '' ಎಂದರು.

Minister BC Patil takes on Siddaramaiah

ಇನ್ನು ಸಚಿವ ಸಂಪುಟ ವಿಸ್ತರಣೆ ಮಾಡುವುದು ಯಾವಾಗ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು ಮುಂದಿನ ತಿಂಗಳು 4 ರಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಹಿರಿಯೂರಿಗೆ ಬರುತ್ತಿದ್ದಾರೆ ಅವರನ್ನೇ ಕೇಳಿ ಎಂದರು ಸಚಿವರು ಉತ್ತರಿಸಿದರು.

Recommended Video

KL ರಾಹುಲ್ ವಿರುದ್ಧ ಸೋತಿದ್ದು ಸ್ವಲ್ಪವೂ ಬೇಸರ ಇಲ್ಲ ಅಂತಾ ಶ್ರೇಯಸ್ ಅಯ್ಯರ್ ಹೇಳಿದ್ಯಾಕೆ? | Oneindia Kannada

English summary
We have seen how responsibility was when Siddaramaiah was CM. We have a report on the rain, We're working: said Minister BC Patil.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X