ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

"ಕಾಂಗ್ರೆಸ್ ಭದ್ರಾವತಿಯನ್ನು ಪಾಕಿಸ್ತಾನ ಮಾಡಲು ಹೊರಟಿದ್ಯಾ?''

By ಚಿತ್ರದುರ್ಗ ಪ್ರತಿನಿಧಿ
|
Google Oneindia Kannada News

ಚಿತ್ರದುರ್ಗ, ಮಾರ್ಚ್ 13: ವಿಧಾನಸಭಾ ಕಲಾಪದಲ್ಲಿ ಭದ್ರಾವತಿ ಕಾಂಗ್ರೆಸ್ ಶಾಸಕ ಬಿ.ಕೆ ಸಂಗಮೇಶ್ ಬಟ್ಟೆ ಬಿಚ್ಚಿಸಿ ವರ್ತಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಭದ್ರಾವತಿಯಲ್ಲಿ ಕಾಂಗ್ರೆಸ್ ಪ್ರತಿಭಟನೆ ನಡಿಯುತ್ತಿದೆ.

ಈ ವಿಚಾರವಾಗಿ ಕಾಂಗ್ರೆಸ್ ನವರು ಭದ್ರಾವತಿಯನ್ನು ಪಾಕಿಸ್ತಾನ ಮಾಡಲು ಹೊರಟಿದ್ದಾರೆಯೇ? ಎಂದು ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಪಶ್ನಿಸಿದ್ದಾರೆ.

ಸರ್ಕಾರದ ದೌರ್ಜನ್ಯ ಖಂಡಿಸಿ ಪ್ರತಿಭಟನೆ: ಮಾರ್ಚ್ 13ರಂದು ಕಾಂಗ್ರೆಸ್ 'ಶಿವಮೊಗ್ಗ ಚಲೋ'ಸರ್ಕಾರದ ದೌರ್ಜನ್ಯ ಖಂಡಿಸಿ ಪ್ರತಿಭಟನೆ: ಮಾರ್ಚ್ 13ರಂದು ಕಾಂಗ್ರೆಸ್ 'ಶಿವಮೊಗ್ಗ ಚಲೋ'

ಚಿತ್ರದುರ್ಗ ಜಿಲ್ಲೆಯ ಬೆಳಗಟ್ಟ ಗ್ರಾಮದಲ್ಲಿ ಅಜ್ಜಯ್ಯನ ಮಠಕ್ಕೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ""ಕಾಲಚಕ್ರ ಹೀಗೆ ಇರುವುದಿಲ್ಲ ಎಂದು ಕಾಂಗ್ರೆಸ್ ಸರ್ಕಾರ ಇದ್ದಾಗ ನಾನು ಹೇಳಿದ್ದೆ'' ಎಂದರು.

 Chitradurga: Minister B.Sriramulu Reaction On Congress Protest In Bhadravathi

""ಬಿಜೆಪಿ, ಹಿಂದೂಪರ ಸಂಘಟನೆಗಳ ಸಾವಿರಾರು ಕಾರ್ಯಕರ್ತರ ವಿರುದ್ಧ ಕೇಸ್ ದಾಖಲಿಸಿ ಅವರ ವಿರುದ್ಧ ಎಫ್ಐಆರ್ ಹಾಕಿ ರೌಡಿ ಶೀಟರ್ ಓಪನ್ ಮಾಡಿದ್ದೀರಿ. ಆಗ ಎಲ್ಲಿ ಹೋಗಿತ್ತು ನಿಮ್ಮ ಈ ಬುದ್ಧಿ ಎಂದು ಮತ್ತೊಮ್ಮೆ ಪ್ರಶ್ನೆ ಮಾಡಿದ ಅವರು, ಇದೇ ವೇಳೆ ಶಾಸಕ ಸಂಗಮೇಶ್ ಮಗನ ವಿರುದ್ಧ ಕೇಸ್ ದಾಖಲಿಸಿಲ್ಲ'' ಎಂದರು.

ಭದ್ರಾವತಿಯಲ್ಲಿ ಪ್ರತಿಭಟನೆ ಮಾಡಲು ನಿಮಗೆ ಯಾವ ನೈತಿಕತೆ ಇದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಿರುದ್ಧ ಸಚಿವ ಶ್ರೀರಾಮುಲು ಆಕ್ರೋಶ ವ್ಯಕ್ತಪಡಿಸಿದರು.

ಲಂಚ ಪ್ರಕರಣ: ಚಳ್ಳಕೆರೆ ತಾ.ಪಂ ಇಒ ಮನೆ ಮೇಲೆ ಎಸಿಬಿ ದಾಳಿ; 6 ಲಕ್ಷ ನಗದು ವಶಲಂಚ ಪ್ರಕರಣ: ಚಳ್ಳಕೆರೆ ತಾ.ಪಂ ಇಒ ಮನೆ ಮೇಲೆ ಎಸಿಬಿ ದಾಳಿ; 6 ಲಕ್ಷ ನಗದು ವಶ

ಇನ್ನು ಹಿರಿಯೂರು ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿ ಸ್ಪರ್ಧೆ ವಿಚಾರವಾಗಿ ಮಾತಾನಾಡಿದ ಅವರು, ಜನಾರ್ದನ ರೆಡ್ಡಿಯವರು ಎಲ್ಲೂ ಓಡಾಟ ಮಾಡಬಾರದೇ? ಎಂದು ಶ್ರೀರಾಮುಲು ಪ್ರಶ್ನಿಸಿದರು.

 Chitradurga: Minister B.Sriramulu Reaction On Congress Protest In Bhadravathi

ಸದ್ಯ ಈಗ ಚುನಾವಣೆ ಬಂದಿಲ್ಲ, ನಾನು ಮೊಳಕಾಲ್ಮೂರಿಗೆ ಬಂದು ಸ್ಪರ್ಧಿಸಿರುವುದು ಪಕ್ಷದ ನಿರ್ಧಾರ. ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ಕಾನೂನು ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು.

English summary
Social Welfare Minister B.Sriramulu has criticized the Congress protests in Bhadravathi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X