ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿತ್ರದುರ್ಗದಲ್ಲಿ ಏ. 26 ಕ್ಕೆ ಸರ್ಕಾರದಿಂದ ಸಾಮೂಹಿಕ ವಿವಾಹ

By ಚಿತ್ರದುರ್ಗ ಪ್ರತಿನಿಧಿ
|
Google Oneindia Kannada News

ಚಿತ್ರದುರ್ಗ, ಫೆಬ್ರವರಿ 23: ಕರ್ನಾಟಕ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆ ವತಿಯಿಂದ ಆಯೋಜಿಸಿರುವ ಸಪ್ತಪದಿ ಸಾಮೂಹಿಕ ವಿವಾಹ ಕಾರ್ಯಕ್ರಮ ಮುಂದಿನ ಏಪ್ರಿಲ್ 26 ರಂದು ಚಿತ್ರದುರ್ಗ ಜಿಲ್ಲೆಯ ಮೂರು ಸ್ಥಳಗಳಲ್ಲಿ ನಡೆಯಲಿದೆ.

ಸಾಮೂಹಿಕ ವಿವಾಹ ನಡೆಯುವ ಜಿಲ್ಲೆಯ ಸ್ಥಳಗಳೆಂದರೆ, ಹಿರಿಯೂರು ತಾಲ್ಲೂಕಿನ ವದ್ದಿಕೆರೆ ಗ್ರಾಮದ ಶ್ರೀ ಕಾಲಭೈರವೇಶ್ವರ ದೇವಾಲಯ, ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿಯ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನ ಹಾಗೂ ಹೊಸದುರ್ಗ ತಾಲೂಕಿನ ಶ್ರೀ ಗವಿ ರಂಗನಾಥ ಸ್ವಾಮಿ ದೇವಾಲಯ ಇಲ್ಲಿ ಸಾಮೂಹಿಕ ವಿವಾಹ ಜರುಗಲಿದೆ.

ಚಿತ್ರದುರ್ಗದಲ್ಲಿ ಫೆ.26 ರಂದು ಉದ್ಯೋಗ ಮೇಳ ನೀವೂ ಭಾಗವಹಿಸಿಚಿತ್ರದುರ್ಗದಲ್ಲಿ ಫೆ.26 ರಂದು ಉದ್ಯೋಗ ಮೇಳ ನೀವೂ ಭಾಗವಹಿಸಿ

ಸರ್ಕಾರದಿಂದ ನಡೆಯುವ ಈ ವಿವಾಹ ಕಾರ್ಯಕ್ರಮ ಉಚಿತವಾಗಿದ್ದು, ಜಿಲ್ಲೆಯ ಸಮಸ್ತ ಬಡ ಕುಟುಂಬದವರು ಹಾಗೂ ಸರಳವಾಗಿ ವಿವಾಹ ಬಯಸಿರುವವರು ಈ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳಬಹುದು ಎಂದು ಧಾರ್ಮಿಕ ದತ್ತಿ ಇಲಾಖೆ ಹೇಳಿದೆ.

Mass Marriage By The State Government On April 26 In Chitradurga

ಸರ್ಕಾರದಿಂದ ವರನಿಗೆ ಪ್ರೋತ್ಸಾಹ ಧನವಾಗಿ ಹೂವಿನ ಹಾರ, ಪಂಚೆ, ಶಲ್ಯ ಖರೀದಿಗಾಗಿ 5 ಸಾವಿರ ಕೊಡಲಾಗುವುದು. ವಧುವಿಗೆ ಪ್ರೋತ್ಸಾಹ ಧನವಾಗಿ ಹೂವಿನ ಹಾರ, ಧಾರೆ ಸೀರೆ ಮತ್ತು ರವಿಕೆ ಕಣ ಖರೀದಿಗಾಗಿ 10 ಸಾವಿರ ಹಣ ಕೊಡಲಾಗುವುದು.

ಚಿತ್ರದುರ್ಗದ ಆಡುಮಲ್ಲೇಶ್ವರ ಕಿರುಮೃಗಾಲಯದಲ್ಲಿದೆ ಉದ್ಯೋಗಾವಕಾಶಚಿತ್ರದುರ್ಗದ ಆಡುಮಲ್ಲೇಶ್ವರ ಕಿರುಮೃಗಾಲಯದಲ್ಲಿದೆ ಉದ್ಯೋಗಾವಕಾಶ

ವಧುವಿಗೆ ಚಿನ್ನದ ತಾಳಿ, ಎರಡು ಚಿನ್ನದ ಗುಂಡು (ಅಂದಾಜು 8 ಗ್ರಾಂ ತೂಕ) ಕೊಡಲಾಗುವುದು.

Mass Marriage By The State Government On April 26 In Chitradurga

ನವದಂಪತಿಗಳಿಗೆ 40 ಸಾವಿರ ನಗದು ಹಣ ಕೊಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಉಚಿತ ಸಹಾಯವಾಣಿ 1800 4256654 ನಂಬರ್ ಗೆ ಕರೆ ಮಾಡಬಹುದು.

English summary
The Mass Wedding Ceremony organized by the Religious Endowment Department of the Government of Karnataka will be held on April 26 at three locations in Chitradurga district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X