• search
  • Live TV
ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕರ್ನಾಟಕದಂಥ ರಿಮೋಟ್ ಕಂಟ್ರೋಲ್ ಸರ್ಕಾರ ಬೇಕೆ?: ಮೋದಿ

|

ಚಿತ್ರದುರ್ಗ, ಏಪ್ರಿಲ್ 09: ಪ್ರಧಾನಿ ನರೇಂದ್ರ ಮೋದಿ ಅವರು ಓಬವ್ವನ ನೆಲೆ ಚಿತ್ರದುರ್ಗಕ್ಕೆ ಆಗಮಿಸಿದ್ದು, ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಸಮಾವೇಶ ನಡೆಸಲಿದ್ದಾರೆ.

ಮೊದಲಿಗೆ ಮಹಾರಾಷ್ಟ್ರದಲ್ಲಿ ಸಮಾವೇಶ ಮುಗಿಸಿದ ನಂತರ ಚಿತ್ರದುರ್ಗಕ್ಕೆ ಆಗಮಿಸಿರುಮೋದಿ, ಪ್ರಥಮ ಬಾರಿಗೆ ಜಿಲ್ಲೆಯ ಚಳ್ಳಕೆರೆ ತಾಲೂಕಿನಲ್ಲಿರುವ DRDO ಒಳಗಿರುವ ರನ್ ವೇಗೆ ವಿಶೇಷ ವಿಮಾನದಲ್ಲಿ ಬಂದಿಳಿದರು.

LS polls: PM Narendra Modi addresses a rally in Chitradurga: LIVE updates

ಚಿತ್ರದುರ್ಗ-ಮೈಸೂರಿನಲ್ಲಿ ಇಂದು ಮೋದಿ ಬೃಹತ್ ಸಮಾವೇಶ

ವಿಶೇಷ ಹೆಲಿಕಾಪ್ಟರ್ ಮೂಲಕ ಒನಕೆ ಓಬವ್ವ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಬಿಜೆಪಿ ಬೃಹತ್ ಸಮಾವೇಶದಲ್ಲಿ ಭಾಗವಸಿದ್ದಾರೆ. ಕಾರ್ಯಕ್ರಮಕ್ಕೆ 35 ಸಾವಿರ ಆಸನ ವ್ಯವಸ್ಥೆ ಮಾಡಲಾಗಿದ್ದು, ಲಕ್ಷಾಂತರ ಜನ ಆಗಮಿಸಿದ್ದಾರೆ. ಪ್ರಧಾನಿ ಮೋದಿ ಅವರ ಭಾಷಣದ ಕ್ಷಣ ಕ್ಷಣದ ಮಾಹಿತಿಯನ್ನು ಒನ್ ಇಂಡಿಯಾ ಕನ್ನಡ ನೀಡಲಿದೆ.

Newest First Oldest First
3:31 PM, 9 Apr
ಹಳ್ಳಿ ಹಳ್ಳಿಯಲ್ಲೂ ಕೂಡ, ನಗರ ನಗರ ಕೂಡ, ಮನೆ ಮನೆಯಲ್ಲೂ ಕೂಡ, ರೈತರು ಕೂಡ, ತಾಯಿ-ಮಕ್ಕಳು, ದೇಶದ ಗಡಿಯಲ್ಲಿ ಕೂಡ ಎಲ್ಲೆಲ್ಲೂ ಚೌಕಿದಾರ ಎನ್ನುವ ಘೋಷಣೆಯೊಂದಿಗೆ ಮೋದಿ ತಮ್ಮ ಮಾತು ಮುಗಿಸಿದರು.
3:28 PM, 9 Apr
21 ನೇ ಶತಮಾನದ ಯುವಕರು ಮೊದಲ ಬಾರಿಗೆ ಮತದಾನ ಮಾಡಿ, ಸದೃಢ ಸರ್ಕಾರ ನೀಡುವ ಮೂಲಕ ಕಾಂಗ್ರೆಸ್ ಗೆ ಶಿಕ್ಷೆ ನೀಡಿ-ನರೇಂದ್ರ ಮೋದಿ
3:27 PM, 9 Apr
ಕಮಲದ ಬಟನ್ ಒತ್ತಿ, ನಿಮ್ಮ ವಿಶ್ವಾಸ ಮೋದಿಯ ಖಾತೆಗೆ ಸೇರುತ್ತದೆ- ನರೇಂದ್ರ ಮೋದಿ
3:26 PM, 9 Apr
ಮೊದಲ ಬಾರಿಗೆ ಮತಚಲಾಯಿಸುವವರಿಗೆ ನನ್ನ ಮನವಿ. ನಿಮ್ಮ ಈ ಮತ ಸದೃಢ ದೇಶಕ್ಕಾಗಿ, ದೇಶಕ್ಕಿ ಪ್ರಾಣತ್ಯಾಗ ಮಾಡುವ ಯೋಧರಿಗೆ, ದೇಶದ ಬಡವ ಮನೆಪಡೆಯುವುದಕ್ಕಾಗಿ, ಎಲ್ಲರಿಗೂ ಶುದ್ಧ ನೀರು ಸಿಗುವುದಕ್ಕಾಗಿ ನಿಮ್ಮ ಮತ ಮೀಸಲಿಡಿ- ನರೇಂದ್ರ ಮೋದಿ
3:24 PM, 9 Apr
ದಾವಣಗೆರೆಯನ್ನು ಸ್ಮಾರ್ಟ್ ಸಿಟಿ ಮಾಡಲು ನಾವು ಬದ್ಧರಿದ್ದೇವೆ- ನರೇಂದ್ರ ಮೋದಿ
3:22 PM, 9 Apr
ಈ ಅನ್ಯಾಯಕ್ಕೆ ನ್ಯಾಯ ಬೇಕೋ ಬೇಡವೋ, ಅನ್ಯಾಯ ಮಾಡಿದವರನ್ನು ಶಿಕ್ಷಿಸಬೇಕೋ ಬೇಡವೋ?-ನರೇಂದ್ರ ಮೋದಿ
3:21 PM, 9 Apr
ಕಾಂಗ್ರೆಸ್ ಎಷ್ಟೋ ದಶಕಳಿಂದ ಸೇನೆಗೆ, ನಮ್ಮ ವಿದೇಶಿ ನೀತಿಗೆ, ಅಭಿವೃದ್ಧಿಗೆ ಮಾಡಿದ ಅನ್ಯಾಯವನ್ನು ನಾವು ಐದು ವರ್ಷಗಳಲ್ಲಿ ಸರಿಪಡಿಸಲು ನೋಡಿದ್ದೇವೆ- ನರೇಂದ್ರ ಮೋದಿ
3:19 PM, 9 Apr
ರೈತರಿಗಾಗಿ ಈ ಸಮ್ಮಿಶ್ರ ಸರ್ಕಾರ ಏನು ಮಾಡಿದೆ? ನಿಮ್ಮ ಸಾಲಮನ್ನಾ ಮಾಡುವುದಾಗಿ ಹೇಳಿದ್ದರಲ್ಲ, ಮಾಡಿದರಾ? ನಿಮ್ಮ ಖಾತೆಗೆ ಹಣ ಹಾಕಿದರಾ?-ನರೇಂದ್ರ ಮೋದಿ
3:18 PM, 9 Apr
ಕಾಂಗ್ರೆಸ್-ಜೆಡಿಎಸ್ ಗೆ ಯಾರ ಉದ್ಧಾರವೂ ಬೇಕಾಗಿಲ್ಲ. ಕಾಂಗ್ರೆಸ್-ಜೆಡಿಎಸ್ ಸರ್ಕಾರ ನಿಯತ್ತಿನಿಂದ ಕೆಲಸ ಮಾಡಿದ್ದರೆ ರಾಜ್ಯ ಹೀಗಿರುತ್ತಿರಲಿಲ್ಲ- ನರೇಂದ್ರ ಮೋದಿ
3:16 PM, 9 Apr
ವಿಪಕ್ಷಗಳಿಗೆ ದೇಶದ ಹಿತಕ್ಕಿಂತ ಸ್ವಾರ್ಥ ಮುಖ್ಯ, ತುಷ್ಟೀಕರಣವೇ ಅವರ ಧ್ಯೇಯ. ಆದರೆ ನಮ್ಮ ಉದ್ದೇಶ ಸಬ್ ಕೆ ಸಾಥ್ ಸಬ್ ಕೆ ವಿಕಾಸ್-ನರೇಂದ್ರ ಮೋದಿ
3:14 PM, 9 Apr
ನಮ್ಮ ಸಂಕಲ್ಪ ಎಲ್ಲಾ ಬಡವರಿಗೂ ಮನೆ ನೀಡುವುದು, ಎಲ್ಲಾ ಮನೆಗಳಿಗೆ ಎಲ್ ಪಿಜಿ ಸಂಪರ್ಕ ನೀಡುವುದು, ನಮ್ಮ ಸಂಕಲ್ಪ ರೈತರ ಆದಾಯವನ್ನು ದ್ವಿಗುಣಗೊಳಿಸುವುದು- ನರೇಂದ್ರ ಮೋದಿ
3:13 PM, 9 Apr
ನಿಮ್ಮೆಲ್ಲರ ಈ ಪರಿ ಪ್ರೀತಿಗಿಂತ ಬೇರೆ ಸೌಭಾಗ್ಯ ಏನಿದೆ-ನರೇಂದ್ರ ಮೋದಿ
3:12 PM, 9 Apr
ವೀರಮದಕರಿ ನಾಯಕ, ವೀರ ಮದಕರಿ ನಾಯಕರ ನಾಡಾದ ಈ ಚಿತ್ರದುರ್ಗದ ಬಗ್ಗೆ ನಮಗೆ ಹೆಮ್ಮೆ ಇದೆ- ನರೇಂದ್ರ ಮೋದಿ
3:10 PM, 9 Apr
ಕೇವಲ 125 ಕೋಟಿ ಭಾರತೀಯರನ್ನೇ ನನ್ನ ಹೈಕಮಾಂಡ್ ಎಂದುಕೊಳ್ಳುವ ಪ್ರಧಾನಿಯನ್ನು ಆರಿಸಿ-ನರೇಂದ್ರ ಮೋದಿ
3:09 PM, 9 Apr
ಸದೃಢ ಸರ್ಕಾರವನ್ನು ಆರಿಸದಿದ್ದರೆ ಏನಾಗುತ್ತದೆ ಎಂಬುದನ್ನು ಈಗಾಗಲೇ ನೀವು ನೋಡಿದ್ದೀರಿ. ಕರ್ನಾಟಕ ಸರ್ಕಾರವನ್ನು ಯಾರು ನಡೆಸುತ್ತಿದ್ದಾರೆ? ಇಂಥ ರಿಮೋಟ್ ಸರ್ಕಾರ ನಿಮಗೆ ಬೇಕೆ?-ನರೇಂದ್ರ ಮೋದಿ
3:07 PM, 9 Apr
ಈ ಚುನಾವಣೆಯಲ್ಲಿ ನೀವು ಕೇವಲ ಸಂಸತ್, ಪ್ರಧಾನಿಯನ್ನು ಆರಿಸುತ್ತಿಲ್ಲ. ಆದರೆ ಒಂದು ಸದೃಢ ಭಾರತಕ್ಕಾಗಿ, ಸದೃಢ ಸರ್ಕಾರವನ್ನು ಆಯ್ಕೆ ಮಾಡುತ್ತೀರಿ-ನರೇಂದ್ರ ಮೋದಿ
3:07 PM, 9 Apr
ಏರ್ ಸ್ಟ್ರೈಕ್ ನಡೆದಾಗಲೂ, ಉಪಗ್ರಹ ಪ್ರತಿರೋಧನ ಅಸ್ತ್ರವನ್ನು ಯಶಸ್ವಿಯಾಗಿ ಪರೀಕ್ಷೆ ಮಾಡಿದಾಗಲೂ ಮೋದಿ ವಿರೋಧಿಗಳು ಟೀಕಿಸಿದರು. ಇವರಿಗೆ ದೇಶದ ಉನ್ನತಿ ಬೇಕಿಲ್ಲ. ಮೋದಿಯನ್ನು ವಿರೋಧಿಸುವುದು ಬೇಕಿದೆ- ನರೇಂದ್ರ ಮೋದಿ
3:05 PM, 9 Apr
ಹಿಂದಿನ ಸರ್ಕಾರವಿದ್ದಾಗ ಎಷ್ಟೇ ಭಯೋತ್ಪದಾಕ ದಾಳಿ ನಡೆದರೂ, ಪಾಕಿಸ್ತಾನಕ್ಕೆ ಹೆದರಿ ಸರ್ಕಾರ ಸುಮ್ಮನೇ ಕೂರುತ್ತಿತ್ತು. ಆದರೆ ನಾವು ಪಾಕಿಸ್ತಾನದ ಧಮ್ಕಿಗೆ ಹೆದರಲಿಲ್ಲ. ಬಾಲಕೋಟ್ ಗೇ ತೆರಳಿ ನಾವು ದಾಳಿ ನಡೆಸಿದವು- ನರೇಂದ್ರ ಮೋದಿ
3:04 PM, 9 Apr
ಜಗತ್ತಿನಲ್ಲಿ ಭಾರತಕ್ಕೆ ಜೈಕಾರ ಹೇಳಲಾಗುತ್ತಿದೆ. ಅದಕ್ಕೆ ಮೋದಿ ಕಾರಣವಲ್ಲ, ಅದಕ್ಕೆಲ್ಲ ನೀವು ಕಾರಣ-ನರೇಂದ್ರ ಮೋದಿ
3:03 PM, 9 Apr
ಮಾತಿಗೂ ಮುನ್ನ ಕನ್ನಡಿಗರಿಗೆ ಯುಗಾದಿ ಹಬ್ಬದ ಶುಭಾಶಯ ತಿಳಿಸಿದ ಮೋದಿ.
3:02 PM, 9 Apr
ದೇಶ ಮಹಾನ್ ಶಕ್ತಿಯಾಗುವ ಹಾದಿಯಲ್ಲಿ ನಾವೆಲ್ಲರೂ ನಡೆಯಬೇಕಿದೆ- ನರೇಂದ್ರ ಮೊದಿ
3:01 PM, 9 Apr
ನೀವೆಲ್ಲರೂ ಈ ಚೌಕಿದಾರನ ಮೇಲೆ ವಿಶ್ವಾಸವನ್ನಿಟ್ಟುಕೊಂಡು ನಮಗೆ ಐದು ವರ್ಷ ಅಧಿಕಾರ ನೀಡಿದ್ದೀರಿ- ನರೇಂದ್ರ ಮೋದಿ
3:00 PM, 9 Apr
ಶಿವಕುಮಾರ್ ಸ್ವಾಮೀಜಿ ಅವರಿಗೂ ನನ್ನ ನಮನ ಎಂದು ಸಿದ್ದಗಂಗಾ ಶ್ರೀಗಳನ್ನು ಸ್ಮರಿಸಿದ ಮೋದಿ
2:59 PM, 9 Apr
ಚಿತ್ರದುರ್ಗದ ಮತದಾರರಿಗೆ ನಿಮ್ಮ ಚೌಕಿದಾರ ನರೇಂದ್ರ ಮೋದಿಯಿಂದ ನಮಸ್ಕಾರ ಎಂದು ಕನ್ನಡದಲ್ಲೇ ಮೋದಿ ಅವರು ಮಾತು ಆರಂಭಿಸಿದರು.
2:57 PM, 9 Apr
ನರೇಂದ್ರ ಮೋದಿ ಅವರನ್ನು ಸನ್ಮಾನಿಸಿ ಸ್ವಾಗತಿಸಿದ ಚಿತ್ರದುರ್ಗ ಜಿಲ್ಲಾ ಘಟಕದ ಬಿಜೆಪಿ ನಾಯಕರು
2:46 PM, 9 Apr
ಬಿಗಿಬಂದೋಬಸ್ತ್ ನೊಂದಿಗೆ ವೇದಿಕೆಯ ಬಳಿ ತೆರಳುತ್ತಿರುವ ಮೋದಿಯವರಿರುವ ಕಾರ್
2:44 PM, 9 Apr
ಕೆಲವೇ ಕ್ಷಣಗಳಲ್ಲಿ ಮೋದಿ ಭಾಷಣ ಆರಂಭ
2:43 PM, 9 Apr
ಒನಕೆ ಓಬವ್ವ ಸ್ಟೇಡಿಯಂಗೆ ಆಗಮಿಸಿದ ಪ್ರಧಾನಿ ಮೋದಿ
2:39 PM, 9 Apr
2:30 ಕ್ಕೆ ಕಾರ್ಯಕ್ರಮವನ್ನುದ್ದೇಶಿ ಮೋದಿ ಮಾತನಾಡಲಿದ್ದಾರೆ.
2:38 PM, 9 Apr
ಕಾರ್ಯಕ್ರಮಕ್ಕೆ ಬಿಗಿಬಂದೋಬಸ್ತ್ ಏರ್ಪಡಿಸಲಾಗಿದ್ದು, 1,500 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
READ MORE

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Ahead of Lok Sabha elections Prime minister Narendra Modi addressing a rally in Chitradurga in Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more