• search
 • Live TV
ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕಂಟೇನರ್ ಲಾರಿಗೆ ಡಿಕ್ಕಿ: ಹಿರಿಯೂರಿನಲ್ಲಿ ಹೊತ್ತು ಉರಿದ ಪೇಂಟ್ ಲಾರಿ

By ಚಿತ್ರದುರ್ಗ ಪ್ರತಿನಿಧಿ
|

ಚಿತ್ರದುರ್ಗ, ಅಕ್ಟೋಬರ್ 21: ಮುಂದೆ ಚಲಿಸುತ್ತಿದ್ದ ಕಂಟೇನರ್ ಲಾರಿಗೆ ಹಿಂಬದಿಯಿಂದ ಬಂದ ಪೇಂಟ್ ತುಂಬಿದ್ದ ಲಾರಿ ಡಿಕ್ಕಿ ಹೊಡೆದು ಲಾರಿ ಹೊತ್ತು ಉರಿದಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. ಲಾರಿಯಲ್ಲಿ ಏಷಿಯನ್ ಪೇಂಟ್ಸ್ ಕಂಪನಿಗೆ ಸೇರಿದ್ದ ಡಬ್ಬಗಳಿದ್ದು, ಅಪಾರ ಪ್ರಮಾಣದ ಪೇಂಟ್ ಹಾನಿಯಾಗಿದೆ.

ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಜವನಗೊಂಡನಹಳ್ಳಿ - ಗೋರಲಡುಕು ಸಮೀಪದ ಓಂ ಶಕ್ತಿ ಹೋಟೆಲ್ ಹತ್ತಿರ ರಾಷ್ಟ್ರೀಯ ಹೆದ್ದಾರಿ ಬಳಿ ನಿನ್ನೆ ತಡರಾತ್ರಿ ಈ ಘಟನೆ ನಡೆದಿದೆ.

ಹಿರಿಯೂರಿನಲ್ಲಿ ಲಾರಿ, ಕಾರು ಅಪಘಾತ; ಒಂದೇ ಕುಟುಂಬದ ಮೂವರ ಸಾವು

ಬೆಂಗಳೂರು ಕಡೆಯಿಂದ ಹುಬ್ಬಳ್ಳಿ ಕಡೆಗೆ ಏಷಿಯನ್ ಪೇಂಟ್ ತುಂಬಿಕೊಂಡಿದ್ದ ಲಾರಿ ಹೋಗುತ್ತಿತ್ತು ಎಂದು ತಿಳಿದುಬಂದಿದೆ. ಡಿಕ್ಕಿಯ ರಭಸಕ್ಕೆ ಲಾರಿಯ ಮುಂಭಾಗ ಸಂಪೂರ್ಣ ಜಖಂಗೊಂಡಿದ್ದು, ಬೆಂಕಿ ಹೊತ್ತುಕೊಂಡಿದೆ. ಪೇಂಟ್ ಬಾಕ್ಸ್ ಗಳು ರಸ್ತೆಯಲ್ಲಿ ಬಿದ್ದಿವೆ. ಸದ್ಯ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಲಾರಿ ಹೊತ್ತಿ ಉರಿಯುತ್ತಿದ್ದಂತೆ ಲಾರಿ ಚಾಲಕ ಅದರಿಂದ ಜಿಗಿದು ಪಾರಾಗಿದ್ದಾನೆ.

   ಪೋಲೀಸರ ಬೆನ್ನಟ್ಟಿ ಸರ್ಕಾರಿ ವಾಹನಕ್ಕೆ ಫೈನ್ ಹಾಕಿಸಿದ Oneindia Team | Oneindia Kannada

   ವಿಷಯ ತಿಳಿದ ತಕ್ಷಣ ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಲಾರಿಯ ಮಾಲೀಕರ ಬಗ್ಗೆ ಮಾಹಿತಿ ತಿಳಿದುಬಂದಿಲ್ಲ. ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

   English summary
   Lorry carrying paints catches fire while collided with other lorry and burnt at hiriyuru in chitradurga district
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X